ವಾರ್ಡ ಸಂಖ್ಯೆ 9ರಲ್ಲಿ ಚರಂಡಿ ಸ್ವಚ್ಛತಾ ಕಾರ್ಯ..
ಬಹುದಿನಗಳಿಂದ ಬಂದಾಗಿದ್ದ ಚರಂಡಿ ಮತ್ತೆ ಸುಸ್ಥಿತಿಗೆ..
ನಗರ ಸೇವಕಿ ಪೂಜಾ ಇಂದ್ರಜಿತ್ ಪಾಟೀಲರಿಂದ ಮಹತ್ಕಾರ್ಯ..
ಬೆಳಗಾವಿ : ನಗರದ ವಾರ್ಡ ಸಂಖ್ಯೆ ಒಂಬತ್ತರ ಪುಲಾಭಾಗಲ್ಲಿಯ ಹಿಂಭಾಗದಲ್ಲಿ ಬಹುದಿನಗಳಿಂದ ಎರಡು ಬದಿಯ ಚರಂಡಿಗಳು ಗಟ್ಟಿಯಾದ ಮಣ್ಣು ತುಂಬಿ ಬಂದ (ಬ್ಲಾಕ್ ) ಆಗಿದ್ದವು, ಇಂದು ಮುಂಜಾನೆ ನಗರ ಸೇವಕಿ ಪೂಜಾ ಇಂದ್ರಜಿತ್ ಪಾಟೀಲ್ ಅವರ ಪ್ರಯತ್ನದಿಂದ ಚರಂಡಿಗಳು ಸ್ವಚ್ಛವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಆಗಿವೆ..

ಸ್ಥಳೀಯರೊಬ್ಬರ ಮನೆ ನಿರ್ಮಾಣದ ಹಾಗೂ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಘನ ಪದಾರ್ಥಗಳನ್ನು ಚರಂಡಿಗೆ ಸುರಿಯುವದರಿಂದ, ವಿವಿಧ ತ್ಯಾಜ್ಯ ವಸ್ತುಗಳನ್ನು ರಸ್ತೆಯ ಎರಡು ಬದಿಯ ಚರಂಡಿಗಳಲ್ಲಿ ಹಾಕಿರುವದರ ಪರಿಣಾಮವಾಗಿ ಸುಮಾರು ಮೂರು ತಿಂಗಳಿನಿಂದ ಚರಂಡಿ ಬ್ಲಾಕ್ ಆಗಿ, ಆ ಕಡೆಯ ನೀರು ಈ ಕಡೆಗೆ, ಈ ಕಡೆಯ ನೀರು ಆ ಕಡೆಗೆ ಹೋಗುತ್ತಿರಲಿಲ್ಲ, ಇದರಿಂದ ಚರಂಡಿ ಭರ್ತಿ ಆಗಿ ಅಶುದ್ಧ ವಾತಾವರಣಕ್ಕೆ ಕಾರಣವಾಗಿತ್ತು.
ಸಮಸ್ಯೆ ಅರಿತ ಸ್ಥಳೀಯ ನಗರ ಸೇವಕರು ಇಂದು ಮುಂಜಾನೆ ಪಾಲಿಕೆಯ ಅರೋಗ್ಯ ವಿಭಾಗದ ಸುಮಾರು ಹತ್ತು ಜನ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಿ, ಸುಮಾರು ಮೂರು ಟ್ಯಾಕ್ಟರಗಳಷ್ಟು ಗಟ್ಟಿ ಮಣ್ಣು ಹಾಗೂ ಮರಳನ್ನು ಚರಂಡಿಯಿಂದ ಹೊರ ತಗೆಯಲಾಗಿದ್ದು, ಇದರಿಂದ ಇಡೀ ಓಣಿಗೆ ಇದ್ದ ಚರಂಡಿ ಸಮಸ್ಯೆ ನಿವಾರಣೆ ಆದಂತಾಗಿದೆ.

ಚರಂಡಿ ಸ್ವಚ್ಛವಾಗಿ, ಕಲುಷಿತ ನೀರು ಸರಳವಾಗಿ ಸಾಗುವದರಿಂದ ಸ್ಥಳೀಯ ಸಾರ್ವಜನಿಕರು ಸಂತಸಗೊಂಡಿದ್ದು, ಇದೆ ವೇಳೆ ನಗರ ಸೇವಕರು ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ತಮ್ಮ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ಕಸವನ್ನು ಪಾಲಿಕೆಯಿಂದ ಬರುವ ಕಸದ ವಾಹನಗಳಲ್ಲಿಯೇ ಹಾಕಬೇಕು, ಚರಂಡಿಯಲ್ಲಿ ಘಣ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದು ತಿಳಿ ಹೇಳಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..