ಕಾಕತಿ ಸರಕಾರಿ ಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ..
ಕನ್ನಡಕ್ಕೆ ನವ ಚೈತನ್ಯ ತುಂಬಿದ ನೈಜ್ಯ ವಿಶ್ವಮಾನವ ‘ಕುವೆಂಪು’..
ಅಶೋಕ ಖೋತ ಅಭಿಮತ..
ಕಾಕತಿ : ‘ಓ ನನ್ನ ಚೇತನ ಆಗು ನೀ ಅನಿಕೇತನ’ ಮೂಲಕ ವಿಶ್ವ ಕವಿಯಾಗಿ ಶ್ರೀ ರಾಮಾಯಣ ದರ್ಶನಂ ಮೂಲಕ ಕನ್ನಡ ಭಾಷೆಗೆ ಹೊಸ ಆಯಾಮ ತಂದು ಕೊಡುವುದಲ್ಲದೆ, ರಾಷ್ಟ್ರಕವಿಯಾಗಿ ಸರ್ವ ಭಾಷೆಗಳಲ್ಲೂ ವಿಶೇಷವಾದ ನಾಡಗೀತೆಯನ್ನು ಬರೆಯುವುದರ ಜೊತೆಗೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿ ಕನ್ನಡ ನಾಡಿಗೆ ವಿಶ್ವಮಾನವರಾಗಿ ಸದಾ ನೆನಪಾಗುವ ಕುವೆಂಪು ಅವರ ಕನ್ನಡ ಸೇವೆ ಅನನ್ಯವಾದದು ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಾಕತಿ ಹೋಬಳಿ ಅಧ್ಯಕ್ಷ ಅಶೋಕ ಖೋತ ತಿಳಿಸಿದ್ದಾರೆ.
ಸೋಮವಾರ ದಿ. 29ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕುವೆಂಪು ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು..
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಹಕಾರ್ಯದರ್ಶಿಯಾದ ಶಿವಾನಂದ ತಲ್ಲೂರ ಅವರು ಮಾತನಾಡಿ ಕುವೆಂಪುರವರು ಕಟ್ಟಿಕೊಟ್ಟ ನುಡಿಯನ್ನು ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ನಾಡು-ನುಡಿಯ ಸಲುವಾಗಿ ಕೆಲಸ ಮಾಡಲು ಸದಾ ನಾವು ಸನ್ನದ್ಧರಾಗಿರಬೇಕು. ಕನ್ನಡ ಭಾಷೆಯಲ್ಲಿಯೇ ವಿದ್ವತ್ತು ಪಡೆದು ಸಾಧನೆ ಮಾಡಿದ ಹಲವು ಮಹನೀಯರ ಉದಾಹರಣೆ ಕೊಡುತ್ತಾ ಕನ್ನಡ ಭಾಷೆಯನ್ನು ಪ್ರೀತಿಸಿ ಪೋಷಿಸಿ ಮುಂದುವರೆಯಿರಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಲಲಿತಾ ಮಹಾಜನಶೆಟ್ಟಿ, ಸುಮಿತ್ರಾ ಕರವಿನಕೊಪ್ಪ, ಗೀತಾ ಕಾನಟ್ಟಿ ಬಿಎನ್ ಮಡಿವಾಳರ, ಕೃಷ್ಣ ಕುರುಬರ ಸೇರಿದಂತೆ ಶಾಲೆಯ ಶಿಕ್ಷಕ ಬಳಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರಿಜ್ವಾನ್ ನಾವಗೇಕರ್ ಸ್ವಾಗತಿಸಿದರು. ಮಹೇಶ್ ಅಕ್ಕಿ ನಿರೂಪಿಸಿ ವಂದಿಸಿದರು.