ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗಾಗಿ ಯಶಸ್ವಿ ತರಬೇತಿ ಕಾರ್ಯಗಾರ..

ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆಗಾಗಿ ಯಶಸ್ವಿ ತರಬೇತಿ ಕಾರ್ಯಗಾರ..

ಅರಿವು ತಿಳುವಳಿಕೆ ಹಾಗೂ ತಮಗಿರುವ ಸಮಸ್ಯೆಗಳ ನಿವಾರಣೆಯೇ ತರಬೇತಿಯ ಮುಖ್ಯ ಉದ್ದೇಶ..

ಡಾ ವೈ ಮಂಜುನಾಥ, ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ..

ಬೆಳಗಾವಿ : ಅಬಕಾರಿ ಸನ್ನದುಗಳನ್ನು ಪಡೆಯುವ ಪ್ರಕ್ರಿಯೆಯ ಅರಿವು, ತಿಳುವಳಿಕೆ ಹಾಗೂ ಅದರ ಬಗ್ಗೆ ತಮಗಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವದಕ್ಕಾಗಿಯೇ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಇಲ್ಲಿ ತಮಗೆ ಇ-ಹರಾಜು ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಹಾಗೂ ತಿಳುವಳಿಕೆಯನ್ನು ನೀಡಲಾಗುತ್ತದೆ ಎಂದು ಅಪರ ಆಯುಕ್ತರು ಅಬಕಾರಿ ಡಾ ವೈ ಮಂಜುನಾಥ ತಿಳಿಸಿದ್ದಾರೆ.

ಶನಿವಾರ ದಿನಾಂಕ 03/01/2026 ರಂದು ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಡಾ ವೈ ಮಂಜುನಾಥ್ ಅಬಕಾರಿ ಅಪರ ಆಯುಕ್ತರು (ಜಾರಿ & ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ಇವರು ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ತರಬೇತಿ ಸಭೆಯಲ್ಲಿ ಮಾತನಾಡಿದ್ದಾರೆ.

ಸರ್ಕಾರದ ಅಧಿಕೃತ ಪಾಲಿಸಿ ಏನಿದೆ, ಅದರಲ್ಲಿರುವ ಪ್ರಮುಖ ಅಂಶಗಳು ಯಾವವು, ಅರ್ಜಿದಾರರು ಯಾವ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು, ಅರ್ಜಿ ಸಲ್ಲಿಸುವಾಗ ಸಮಸ್ಯೆ ಆದರೆ ಯಾರನ್ನು ಸಂಪರ್ಕಿಸಬೇಕು, ಅರ್ಜಿ ಶುಲ್ಕವನ್ನು ಯಾವ ಹಂತಗಳಲ್ಲಿ ತುಂಬಬೇಕು, ಹರಾಜು ಸಮಯದಲ್ಲಿ ಪಾಲಿಸಬೇಕಾದ ಬೇಸಿಕ್ ಹಣ ಎಷ್ಟು, ಯಶಸ್ವಿ ಬಿಡ್ಡರ್ ಯಾವ ಸಂದರ್ಭದಲ್ಲಿ ಪೂರ್ತಿ ಹಣ ಪಾವತಿಸಬೇಕು ಎಂಬ ಎಲ್ಲಾ ಅಂಶಗಳ ಕುರಿತಾಗಿ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಕೇಂದ್ರ ಕಚೇರಿಯಿಂದ ಆಗಮಿಸಿದಂತ ವಿವಿಧ ತಂಡಗಳ ತಜ್ಞರಿಂದ ತಮಗೆ ಸಂಪೂರ್ಣ ಮಾಹಿತಿ ಹಾಗೂ ತಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದು ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು..

ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಸೋಮಣ್ಣವರ ಮಾನ್ಯ ಅಪರ ಆಯುಕ್ತರು (HQ&I) ಬೆಂಗಳೂರು ಹಾಗೂ H. F ಛಲವಾದಿ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ ಇವರ ಉಪಸ್ಥಿತಿಯಲ್ಲಿ, ಮೆ //MSTC ಸಹಯೋಗದೊಂದಿಗೆ ಸರ್ಕಾರದ ಆದೇಶದಂತೆ ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ/ ಮಂಜೂರಾಗದೆ ಬಾಕಿ ಇರುವ ಸನ್ನದುಗಳನ್ನು ಮೆ // MSTC ಲಿಮಿಟೆಡನ ಇ – ಪೋರ್ಟಲನಲ್ಲಿ ಇ – ಹರಾಜು ನಡೆಸುವ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಲಭ್ಯವಿರುವ ಒಟ್ಟು 21 ಸನ್ನದುಗಳನ್ನು (ಸಿ.ಎಲ್. 2-A ಹಾಗೂ ಸಿ.ಎಲ್. 9 -A) ಇ- ಹರಾಜು ಮಾಡುವ ಸಂಬಂಧ ತರಬೇತಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ತರಬೇತಿ ಕಾರ್ಯಾಗಾರದಲ್ಲಿ ನೂರಾರು ಸಂಖ್ಯೆಯ ಸಾರ್ವಜನಿಕರು, ಸಂಭಾವ್ಯ ಬಿಡ್ ದಾರರು,
ಸನ್ನದುದಾರರುಗಳು ಭಾಗವಹಿಸಿ ಸದರಿ ತರಬೇತಿಯನ್ನು ಯಶಸ್ವಿಗೊಳಿಸಿರುತ್ತಾರೆ. ಈ ತರಬೇತಿಯಲ್ಲಿ ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಹಾಗೂ ದಕ್ಷಿಣ ಜಿಲ್ಲೆ ಅವರು ಹಾಗೂ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.