ಅಂತರಾಜ್ಯ ಕಳ್ಳರನ್ನು ಸೆಡೆಬಡಿದ ತಿಲಕವಾಡಿ ಠಾಣೆ ಪೊಲೀಸರು..

ಅಂತರಾಜ್ಯ ಕಳ್ಳರನ್ನು ಸೆಡೆಬಡಿದ ತಿಲಕವಾಡಿ ಠಾಣೆ ಪೊಲೀಸರು..

ಮನೆಗಳ್ಳರಿಂದ 13ಲಕ್ಷ, 51ಸಾವಿರಗಳ ಕಿಮ್ಮತ್ತಿನ ಸ್ವತ್ತಿನ ಜಪ್ತಿ..

ಬೆಳಗಾವಿ : ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ನಗರದ ಒಂದು ಮನೆಯಲ್ಲಿ ಕಳ್ಳತನ ಆಗಿದ್ದ ಪ್ರಕರಣ ದಾಖಲಾಗಿದ್ದು, ಅದಕ್ಕಾಗಿ ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ತಿಲಕವಾಡಿ ಠಾಣೆಯ ಇನ್ಸಪೆಕ್ಟರ್ ನೇತೃತ್ವದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡವು ಹೈದರಾಬಾದ ಮೂಲದ ಜಮಶೇದಖಾನ ಖಾಲಿಲ ಖಾನ ಹಾಗೂ ಗೋವಾ ಮೂಲದ ಆರಾಡಿ ಎಂಬ ಆರೋಪಿಗಳನ್ನು ಸೆಡೆಬಡಿದು ಕಳ್ಳತನವಾದ ಸ್ವತ್ತನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಪ್ತಿಯಲ್ಲಿ ಕರಗಿಸಿದ ಗಟ್ಟಿ ಬಂಗಾರ 60, 02 ಗ್ರಾಂ, ಮತ್ತೊಂದು ಕಡೆ ಕರಗಿಸಿದ ಗಟ್ಟಿ ಬಂಗಾರ 55, 13 ಗ್ರಾಂ, ಬಿಳಿ ಬಣ್ಣದ ಹೋಂಡಾ ಆಕ್ಟಿವಾ, ಎರಡು ವಿವೊ ಕಂಪೆನಿಯ ಮೊಬೈಲಗಳನ್ನು ಕಳ್ಳರಿಂದ ಜಪ್ತಿ ಮಾಡಲಾಗಿದ್ದು, ಒಟ್ಟು 13,51,225/- ರೂ ಕಿಮ್ಮತ್ತಿನ ಸ್ವತ್ತನ್ನು ಜಪ್ತಿ ಮಾಡಿ, ವಶಕ್ಕೆ ಪಡೆದು, ತನಿಖೆಯನ್ನು ಮುಂದುವರೆಸಿದ್ದಾರೆ..

ಅಂತರಾಜ್ಯ ಕಳ್ಳರ ಈ ಕಳ್ಳತನ ಭೇದಿಸಿದ ಪೊಲೀಸ್ ತಂಡದಲ್ಲಿ ತಿಲಕವಾಡಿಯ ಪೊಲೀಸ್ ಇನ್ಸಪೆಕ್ಟರ್ ಪರಶುರಾಮ ಪೂಜಾರಿ, ಪಿಎಸ್ಐ ವಿಶ್ವನಾಥ ಘಂಟಾಮಠ, ಪಿಎಸ್ಐ ಪ್ರಭಾಕರ ಡೊಳ್ಳಿ, ಸಿಬ್ಬಂದಿಗಳಾದ ಮಹೇಶ್ ಪಾಟೀಲ್, ಎಸ್ ಎಮ್ ಕರಲಿಂಗಣ್ಣವರ, ನಾಗೇಂದ್ರ ತಳವಾರ, ಸತೀಶ್ ಗಿರಿ, ಲಾಡಜಿಸಾಬ ಮುಲ್ತಾನಿ, ಟೇಕ್ನಿಕಲ್ ವಿಭಾಗದ ರಮೇಶ್ ಅಕ್ಕಿ, ಮಹಾದೇವ, ಖಾಶಿಮ ಅವರನ್ನು ಒಳಗೊಂಡ ತಂಡ ಕಳ್ಳತನ ಭೇದಿಸುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದಾರೆ..

ತಿಲಕವಾಡಿ ಪೊಲೀಸ್ ಠಾಣೆ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯ ಈ ಯಶಸ್ವಿ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿ, ಶ್ಲಾಘನೆ ನೀಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದು, ನಗರದ ಸಾರ್ವಜನಿಕರಿದಲೂ ಪೋಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ..

ವರದಿ ಪ್ರಕಾಶ್ ಬಿ ಕುರಗುಂದ..