ಮರುಸಿಂಚನ ತರಬೇತಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದ ಬೆಳಗಾವಿ ಡಯಟ್ ಪ್ರಾಚಾರ್ಯರು..
ಬೆಳಗಾವಿ : ಗುರುವಾರ ದಿನಾಂಕ 07/01/2026ರಂದು ಬಿ ಆರ್ ಸಿ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಮರು ಸಿಂಚನ, ಜ್ಞಾನ ಸೇತು ಮತ್ತು ಮೌಲ್ಯ ಶಿಕ್ಷಣ ತರಬೇತಿ ಕಾರ್ಯಾಗಾರಕ್ಕೆ ಬೆಳಗಾವಿಯ ಡಯಟ್ ಪ್ರಾಚಾರ್ಯರಾದ ಅಶೋಕ ಸಿಂದಗಿ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಡಯಟ್ ನ ಉಪನ್ಯಾಸಕರಾದ ಸುನಧೋಳಿ, ಮರಾಶಿ ನಾಯಕ್ ಮತ್ತು ಶಿಕ್ಷಕ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ ಅವರು ಉಪಸ್ಥಿತರಿದ್ದರು.
ಪ್ರಾಚಾರ್ಯರು ತರಬೇತಿ ಶಿಕ್ಷಕರನ್ನು ಉದ್ದೇಶಿಸಿ ಇವತ್ತಿನ ಶಿಕ್ಷಕರಿಗೆ ಅತ್ಯಂತ ಕೆಲಸ ಕಾರ್ಯಗಳು ಒತ್ತಡಗಳಿದ್ದು, ಆ ಒತ್ತಡಗಳನ್ನು ನಿವಾರಿಸಿಕೊಂಡು ಭವ್ಯ ಭವಿಷ್ಯದ ನಿರ್ಮಾತೃಗಳಾದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಕರೆಕೊಟ್ಟರು.
ಇದರ ಜೊತೆಗೆ ಜಯಕುಮಾರ ಹೆಬಳಿ ಅವರು ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಉಪಾಯಗಳನ್ನು ನೀಡುವುದರ ಜೊತೆಗೆ NPS, KASS ಮತ್ತು ಅನೇಕ ವಿಷಯಗಳ ಕುರಿತು ಶಿಕ್ಷಕರ ಜೊತೆ ಸಂವಾದ ನಡೆಸಿದರು.
ತರಬೇತಿಯ ನೋಡಲ್ ಅಧಿಕಾರಿಗಳಾದ ರಾಶಿ ನಾಯಕ ಅವರು ತರಬೇತಿಯ ಅವಶ್ಯಕತೆ ಮತ್ತು ಅದರ ಉಪಯೋಗವನ್ನು ತರಗತಿಗಳಲ್ಲಿ ಮಾಡಿಕೊಂಡಾಗ ಮಾತ್ರ ತರಬೇತಿಯು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್ ಕಂಬಾರರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಿ ವಂದಿಸಿದರು.