ನಗರ ಸೇವಕರು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು..

ನಗರ ಸೇವಕರು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು..

ಮಾಡಿರುವ ಅಪಾದನೆಗಳಿಗೆ 7 ದಿನಗಳಲ್ಲಿ ಅವರು ಸಾಕ್ಷ್ಯವನ್ನು ಒದಗಿಸಬೇಕು..

ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಅವರಿಂದ ಮಹಾಪೌರರಿಗೆ ಪತ್ರ..

ಬೆಳಗಾವಿ : ದಿನಾಂಕ 12/01/2026 ರಂದು ಜರುಗಿದ ಪಾಲಿಕೆಯ ಪರಿಷತ್ ಸಭೆಯಲ್ಲಿ ನನ್ನ ವಿರುದ್ದ ಗೌರವನ್ವಿತ ನಗರ ಸೇವಕರಾದ ರವಿ ದೋತ್ರೆ ಅವರು ಕೆಲ ಆಪಾದನೆ ಮಾಡಿದ್ದು, ಅವು ಸತ್ಯಕ್ಕೆ ದೂರವಾಗಿವೆ, ನನ್ನ ಮೇಲಿನ ಆರೋಪ ನಿಜವೇ ಆಗಿದ್ದರೆ ಏಳು ದಿನಗಳಲ್ಲಿ ಅದಕ್ಕೆ ಪೂರಕ ಸಾಕ್ಷ್ಯಗಳನ್ನು ಒದಗಿಸಲಿ ಎಂದು ಪಾಲಿಕೆಯ ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ ಅವರು ಮಹಾಪೌರರಿಗೆ ಪತ್ರ ಬರೆದು ಕೇಳಿಕೊಂಡಿದ್ದಾರೆ.

ಸೋಮವಾರ ಜರುಗಿದ ಪಾಲಿಕೆಯ ಪರಿಷತ್ ಸಭೆಯಲ್ಲಿ ನಗರ ಸೇವಕರು ಒಂದು ವಿಷಯ ಚರ್ಚೆ ಮಾಡುತ್ತಾ, ಈ ಹಿಂದೆ ಪಾಲಿಕೆಗೆ ಏಳು ಲಕ್ಷ ನಷ್ಟ ಮಾಡಿರುವ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಾಟಾ ಓಪರೇಟರ್ ವಿರೇಶ್ ಗದಗಿನ ಅವರನ್ನು ಮರಳಿ ಯಾವ ಆಧಾರದಲ್ಲಿ ಕೆಲಸಕ್ಕೆ ತಗೆದುಕೊಂಡಿದ್ದಾರೆ, ತಗೆದುಕೊಂಡ ಅಧಿಕಾರಿಯ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿರುತ್ತಾರೆ.

ಅದೇ ರೀತಿ ಇ ಆಸ್ತಿಯ ಅರ್ಜಿಯನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಿದ್ದೇನೆ ಎಂಬುದಾಗಿ ನನ್ನ ಮೇಲೆ ಆಪಾದನೆ ಮಾಡಿರುತ್ತಾರೆ.

ಆದರೆ ಡಾಟಾ ಆಪರೇಟರ್ ಅವರನ್ನು ಮರಳಿ ಕೆಲಸಕ್ಕೆ ತಗೆದುಕೊಂಡ ಬಗ್ಗೆ ಯಾವುದಾದರೂ ಸಾಕ್ಷ್ಯ ಅಥವಾ ಕಚೇರಿ ಆದೇಶವಿದ್ದರೆ ನೀಡಲಿ, ಇನ್ನು ಎರಡನೇ ಆರೋಪ ಇ ಆಸ್ತಿ ಅರ್ಜಿಯನ್ನು ತಿರಸ್ಕರಿಸಿದ್ದರ ಬಗ್ಗೆ ಹೇಳುವದಾದರೆ ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳು ಸರಿಯಾಗಿಲ್ಲದ ಕಾರಣ ಅರ್ಜಿಯನ್ನು ತಿರಸ್ಕರಿಸಿದೆ.

ಒಂದು ವೇಳೆ ಈ ಎರಡೂ ಆಪಾದನೆಗಳಲ್ಲಿ ಉದ್ದೇಶಪೂರ್ವಕವಾಗಿ ನಾನು ತಪ್ಪು ಮಾಡಿದ್ದರೆ, ನಾನು ತಪ್ಪು ಮಾಡಿರುವ ಬಗ್ಗೆ ಅವರ ಬಳಿ ಸಾಕ್ಷ್ಯ ಪುರಾವೆಗಳು ಇದ್ದಲ್ಲಿ 7 ದಿನಗಳ ಒಳಗಾಗಿ ತಮಗೆ ನೀಡಬೇಕೆಂದು ಕೇಳಿಕೊಳ್ಳುವ ಪತ್ರವನ್ನು ಪಾಲಿಕೆಯ ಮಹಾಪೌರರಿಗೆ ಮಂಗಳವಾರ ದಿನಾಂಕ 13/01/2026 ರಂದು ನೀಡಿದ್ದು, ಒಂದು ವೇಳೆ ಸಂಬಂಧಪಟ್ಟ ಸಾಕ್ಷ್ಯ ಪುರಾವೆ ನೀಡದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.

ವರದಿ ಪ್ರಕಾಶ್ ಬಿ ಕೆ..