ವೈಭವ ನಗರದ ಗಣೇಶ ಮಂದಿರದಲ್ಲಿ ಗಣೇಶ ಜಯಂತಿ ಆಚರಣೆ..

ವೈಭವ ನಗರದ ಗಣೇಶ ಮಂದಿರದಲ್ಲಿ ಗಣೇಶ ಜಯಂತಿ ಆಚರಣೆ..

ಅಯೋದ್ಯೆಯ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವವದ ಆಚರಣೆ..

ಗಣೇಶ, ಶ್ರೀರಾಮನ ಮಹಿಮೆಗಳನ್ನು ಗುಣಗಾನ ಮಾಡಿದ ಭಕ್ತಸಮೂಹ..

ಬೆಳಗಾವಿ : ಗುರುವಾರ ದಿನಾಂಕ 22/01/2026 ವೈಭವನಗರದ ಬಡಾವಣೆಯಲ್ಲಿನ ಸಂಜೆ ಗಣೇಶ ದೇವಸ್ಥಾನದಲ್ಲಿ ಗಣೇಶ್ ಜಯಂತಿಯನ್ನು ಆಚರಣೆ ಮಾಡಿದ್ದು ದೇವಸ್ಥಾನದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾನದ ವಾರ್ಷಿಕೋತ್ಸವ ಹಾಗೂ ಗಣೇಶ ಜಯಂತಿಯ ಆಚರಣೆಗಾಗಿ ಸಂಪೂರ್ಣ ವೈಭವನಗರದ ಗುರು ಹಿರಿಯರು, ಕಿರಿಯರಾದಿಯಾಗಿ ಗಣೇಶ ದೇವಸ್ಥಾನದಲ್ಲಿ ನೆರೆದಿದ್ದು ಪ್ರಥಮ ಪೂಜಿತ ಗಣೇಶನ ಆರಾಧನೆಯಲ್ಲಿ ನಿರತರಾಗಿದ್ದರು.

ಬೆಳಿಗ್ಗೆ 9:30ಕ್ಕೆ ಗಣೇಶ ಮತ್ತು ರಾಮರಿಗೆ ಅಭಿಷೇಕದಿಂದ ಉತ್ಸವ ಪ್ರಾರಂಭವಾಯಿತು, ತದನಂತರ ಪ್ರವಚನ, ವಿಶೇಷ ಪೂಜೆ, ಮಹಾ ಆರತಿ ಜರುಗಿ, ಸಾಯಂಕಾಲ 5 ಘಂಟೆಯ ನಂತರ ಮಹಿಳೆಯರಿಂದ ಗಣೇಶನಿಗೆ ಹೆಸರಿಡುವ ಕಾರ್ಯ ಜರುಗಿತು.

ಸಂಜೆ 6:00ಕ್ಕೆ ಪಲ್ಲಕ್ಕಿ ಉತ್ಸವ, ಹನುಮಾನ ಚಾಲೀಸಾ ಪಠಣ, ಭಜನೆ, ಹಿಂದೂ ಮಹಾಸಭಾ ಪ್ರತಿನಿಧಿಗಳಿಂದ ದೇಶಭಕ್ತಿ ಕುರಿತು ಉಪನ್ಯಾಸ, 7:30ಕ್ಕೆ ಮಹಾಮಂಗಳಾರತಿ ಮತ್ತು ಮಹಾ ಪ್ರಸಾದಗಳೊಂದಿಗೆ ಗಣೇಶನ ಜಯಂತಿಯ ಆಚರಣೆ ಮುಕ್ತಾಯಗೊಂಡಿತು.

ಈ ವಿಶೇಷವಾದ ಆಚರಣೆಯು ವೈಭವ ನಗರದ ಗಣೇಶ ಮಂದಿರದ ಟ್ರಸ್ಟನವರಿಂದ ಆಯೋಜಿತಗೊಂಡಿದ್ದು, ಈ ಸಂದರ್ಭದಲ್ಲಿ ಶ್ರೀಯುತರಾದ ಡಿ ಎಸ್‌ ಕಿಣಗಿ, ಸುರೇಶ ಪಾತ್ರೋಟ, ವ್ಹಿ ಸಿ ಜುಂಜಪ್ಪನವರ, ಮಲ್ಲಿಕಾರ್ಜುನ ಅಮ್ಮಣಗಿ, ಬಿ ಆಯ್‌ ಮಾವಿನಕಟ್ಟಿ, ಎ ಎನ್‌ ಪಾಟೀಲ, ಸಂಕಣ್ಣವರ, ಆಯುಶ್‌ ಮತ್ತು ಅಮನ್‌ ಸಂಸ್ಥೆಯ ಮಾಲೀಕರಾದ ಹೊಸಕೋಟಿ ದಂಪತಿಗಳು ಉಪಸ್ಥಿತರಿದ್ದು, ಗಣೇಶ ಜಯಂತಿಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸರ್ವ ನಾಗರೀಕರ ಉಪಸ್ಥಿತಿ ಮತ್ತು ಸಹಕಾರಗಳಿಂದ ಈ ಸಂಭ್ರಮಾಚರಣೆ ಸುವ್ಯವಸ್ಥಿತವಾಗಿ ನಡೆಯಿತು.

ವರದಿ ರೂಪಾಲಿ ರಾಜೇಂದ್ರ ಹೊಸಕೋಟಿ..