ಬೆಳಗಾವಿ ಜಾಗೃತಿ ಬ್ಯಾಂಕ ನಿರ್ದೇಶಕ ಚುನಾವಣೆ 2026ರಲ್ಲಿ ಅವಿರೋಧ ಆಯ್ಕೆ..
ಪರಶಿಷ್ಟ ಪಂಗಡ ವಿಭಾಗದಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಜಯಪಡೆದ ಶ್ರೀ ಸಿದ್ದರಾಯಿ ಪು ಶಿಗೀಹಳ್ಳಿ..
ಬೆಳಗಾವಿ : ದಿನಾಂಕ 25/01/2026 ರಂದು ಬೆಳಗಾವಿ ಜಾಗೃತಿ ಬ್ಯಾಂಕ ಚುನಾವಣೆ ನಡೆದಿದ್ದು ಈ ಚುನಾವಣೆಯಲ್ಲಿ ತುಂಬಾ ಸ್ಪರ್ಧಾತ್ಮಕ ಪೈಪೋಟಿ ಹಾಗೂ ಜಿದ್ದಾಜಿದ್ದಿನ ಪ್ರತಿಷ್ಠೆ ಕೂಡ ನಡೆದಿದ್ದು, ಚುನಾವಣೆಯ ಪಲಿತಾಂಶ ಪ್ರಕಟಣೆ ನಿನ್ನೆ ರಾತ್ರಿ ದೊರಕಿದೆ.
ಇದರಲ್ಲಿ ನಗರದ ವಾಲ್ಮೀಕಿ ಸಮುದಾಯದ ಪ್ರಮುಖರಾದ ಶ್ರೀ ಸಿದ್ದರಾಯಿ ಶೀಗಿಹಳ್ಳಿ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ನಿರ್ದೇಶಕ ಚುನಾವಣೆಯಲ್ಲಿ ತಮ್ಮ ತಂಡದ ಅಮೋಘ ಗೆಲುವಿನೊಂದಿಗೆ ಉತ್ತಮ ಪಲಿತಾಂಶ ಪಡೆದುಕೊಂಡಿದ್ದರೂ ಅದು ಸಾರಿಗೆ ಇತಿಹಾಸದಲ್ಲಿ ಹೆಸರುವಾಸಿಯಾಗಿ ಪಲಿತಾಂಶ ಪ್ರಕಟಣೆಯಾಗಿತ್ತು.

ಆ ಸಂದರ್ಭದಲ್ಲಿ ಕೂಡ ಶ್ರೀ ಸಿದ್ದಾರಾಯಿ ಶೀಗಿಹಳ್ಳಿ ರವರು ನಿರ್ದೇಶಕರಾಗಿ ಜಯಗಳಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಆಗಿ ಜಯಗಳಿಸಿದ್ದರು, ಬೆಳಗಾವಿ ಸಾರಿಗೆ ಸಂಸ್ಥೆಯ ಸಾರಿಗೆ ನೌಕರರಿಗೆ ಅವರ ಕಷ್ಟದ ಸಮಯದಲ್ಲಿ ಹಣಕಾಸಿನ ನೆರವಿಗಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಒಳ್ಳೆಯ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮತ್ತು ಬ್ಯಾಂಕ್ ಅಭಿವೃದ್ಧಿ ಸಾರಿಗೆ ನೌಕರರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದರು, ಅದಕ್ಕೆ ಸಂಬಂಧ ಪಟ್ಟಂತೆ ನಿರಂತರವಾಗಿ ಶ್ರಮಿಸಿ ತಮ್ಮ ಸೇವಾ ವೃತ್ತಿ ಸಂದರ್ಭದಲ್ಲಿ ಅದು ಕಾರ್ಯರೂಪಕ್ಕೆ ಬಂದಿದ್ದು ಕೂಡ ಆಗಿದೆ.
ಒಟ್ಟಿನಲ್ಲಿ ತಮ್ಮ ಪ್ಯಾನೆಲ್ ನ ಎಲ್ಲಾ ಸದಸ್ಯರ ನಿರ್ದೇಶಕರ ಹೊಂದಾಣಿಕೆ ಜವಾಬ್ದಾರಿಯಿಂದ ಯಶಸ್ಸನ್ನು ಕಂಡಿದ್ದಾರೆ ಅದಲ್ಲದೆ ಇನ್ನೂ ಅನೇಕ ಒಳ್ಳೆಯ ಯೋಜನೆ ಹಾಗೂ ಸೇವೆಗಳನ್ನು ಕಾರ್ಯರೂಪಕ್ಕೆ ತರುವ ಎಲ್ಲಾ ಪ್ರಯತ್ನಗಳು ನಡೆದಿದ್ದರೂ ಆ ಸಂದರ್ಬದಲ್ಲಿ ಸೇವಾ ನಿವೃತ್ತಿಯಿಂದ ತಮ್ಮ ಅದ್ಯಕ್ಷ ಸ್ಥಾನದ ಅವದಿ ಕೂಡ ಮುಕ್ತಾಯವಾಯಿತು. ಒಟ್ಟಿನಲ್ಲಿ ಒಳ್ಳೆಯ ಯಶಸ್ವಿ ನಿರ್ದೇಶಕ ಹಾಗೂ ಬ್ಯಾಂಕಿನ ಅಧ್ಯಕ್ಷರಾಗಿ ಹೋರಾಟಗಾರರಾಗಿ ಹೆಸರುವಾಸಿಯಾಗಿರುವ ಹಿರಿಯ ನಾಯಕರಾದ ಶ್ರೀ ಸಿದ್ದರಾಯಿ ಶೀಗಿಹಳ್ಳಿ ಅವರ ಕೊಡುಗೆಯಿಂದ ಇಂದು ಜಾಗೃತಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಮತ್ತೆ ಒಳ್ಳೆಯ ಕನಸನ್ನು ಕಟ್ಟಿಕೊಂಡು ಬೆಳಗಾವಿ ಜಾಗೃತಿ ಬ್ಯಾಂಕ್ ಗೆ ಹೆಜ್ಜೆ ಇಟ್ಟಿದ್ದು ನಿರ್ದೇಶಕ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ನಿರ್ದೇಶಕರಾಗಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಜಯಗಳಿಸಿದ್ದಾರೆ.
ಗೆಲುವಿನ ಸಂಭ್ರಮ ಸಡಗರ ಅವರ ಅಭಿಮಾನಿ ಬಳಗದಿಂದ ಜೋರಾಗಿದ್ದು ಸರ್ವರೂ ಶುಭಾಶಯಗಳನ್ನು ಕೋರಿದ್ದಾರೆ.