ಮಹಿಳಾ ಸರಕಾರಿ ನೌಕರರ ಹಿತರಕ್ಷೆಣೆಗಾಗಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ..
ರೋಶಿನಿ ಗೌಡ..
ಬೆಳಗಾವಿ : ಸರಕಾರಿ ಮಹಿಳಾ ನೌಕರರ ಹಿತದೃಷ್ಟಿಯಿಂದ ಸದಸ್ಯತ್ವ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ, ಮಹಿಳಾ ನೌಕರರ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ತಿಳಿಸಿದರು.
ಮಂಗಳವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಸರಕಾರಿ ಅಧಿಕಾರಿಗಳಿಗೆ 8ನೇ ವೇತನ ಆಯೋಗ ರಚನೆ ಮಾಡಬೇಕು. ಎನಪಿಎಸ್ ರದ್ದತ್ತಿ ಮಾಡಿ ಓಪಿಸಿಯನ್ನು ಜಾರಿಗೆ ತರಲು ಎಲ್ಲ ಸರಕಾರಿ ಮಹಿಳಾ ನೌಕರರ ಪರವಾಗಿ ಹೋರಾಟ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ತಿಂಗಳ ರಜೆ ವೇತನ ಸರಕಾರ ಮಂಜೂರು ಮಾಡಬೇಕು, ಮೇರಿ ದೇವದಾಸಿಯಾ ಜನ್ಮದಿನದಂದು ಮಹಿಳಾ ಸರಕಾರಿ ನೌಕರರ ದಿನ ಎಂದು ಘೋಷಿಸಬೇಕು,
ಮಹಿಳಾ ನೌಕರರಿಗೆ ಹಬ್ಬದ ಮುಂಗಡ. 50 ಸಾವಿರ ರೂ. ಹೆಚ್ಚಳ ಮಾಡಬೇಕು ಎಂದರು.
ವಿದೇಶ ಪ್ರವಾಸಕ್ಕಾಗಿ ಸರಕಾರಿ ನೌಕರರನ್ನು ಅರ್ಜಿ ಸಲ್ಲಿಸಿದ 15 ದಿನದ ಒಳಗಾಗಿ ಮಂಜೂರಾತಿ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಡಾ, ವೀಣಾ ಕೃಷ್ಣಮೂರ್ತಿ, ಎಂ. ಆಶಾರಾಣಿ, ಜಯಶ್ರೀ ಪಾಟೀಲ್, ರೇಖಾ ಅಂಗಡಿ ಸೇರಿದಂತೆ ಮತ್ತಿತರರು ಇದ್ದರು.