ಬೆಳಗಾವಿ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆ..
ಲೀಜ್ ಮುಗಿದು 20 ವರ್ಷಗಳಾದರೂ ಪಾಲಿಕೆ ಆಸ್ತಿಗಳು ಇನ್ನೂ ಕೈವಶವಾಗಿಲ್ಲ..
ಸುಮಾರು 78 ಆಸ್ತಿಗಳಿಂದ ಪಾಲಿಕೆಗೆ ನೂರಾರು ಕೋಟಿಯಷ್ಟು ನಷ್ಟ..
ಸಮಿತಿ ಸದಸ್ಯರ ಅಸಮಾಧಾನ..
ಬೆಳಗಾವಿ : ಮಹಾನಗರ ಪಾಲಿಕೆಯ ನೂರಾರು ಕೋಟಿಯಷ್ಟು ಬೆಲೆಬಾಳುವ ಸುಮಾರು 78 ಆಸ್ತಿಗಳು ಅವುಗಳ ಲೀಜ್ ಅವಧಿ ಮುಗಿದರೂ ಪಾಲಿಕೆಗೆ ಹಸ್ತಾಂತರ ಆಗಿಲ್ಲ, ಅವುಗಳನ್ನು ಪಾಲಿಕೆ ವ್ಯಾಪ್ತಿಗೆ ಪಡೆಯುವ ಗಂಭೀರವಾದ ಕಾರ್ಯವನ್ನೂ ಅಧಿಕಾರಿಗಳು ಮಾಡಿಲ್ಲ ಎಂದು ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿಯ ಸದಸ್ಯರಾದ ರವಿ ದೋತ್ರೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಗುರುವಾರ ದಿನಾಂಕ 29/01/2026ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾಭವನದಲ್ಲಿ ಜರುಗಿದ ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ನಗರ ಸೇವಕ ಹಾಗೂ ಸ್ಥಾಯಿ ಸಮಿತಿ ಸದಸ್ಯ ರವಿ ದೋತ್ರೆ ಅವರು, ಪಾಲಿಕೆಯಿಂದ ಜನರಿಗೆ ಲೀಜ್ ರೂಪದಲ್ಲಿ ನೀಡಿದ ಆಸ್ತಿಗಳ ಲೀಜ್ ಅವಧಿಗಳು ಮುಗಿದು ಹತ್ತಾರು ವರ್ಷಗಳೇ ಕಳೆದಿವೆ, ಆದರೂ ಅವುಗಳನ್ನು ಪಾಲಿಕೆ ಕೈವಶ ಮಾಡಿಕೊಂಡಿಲ್ಲ, ಅವು ನೂರಾರು ಕೋಟಿ ಬೆಲೆಬಾಳುವ ಪಾಲಿಕೆಯ ಆಸ್ತಿಗಳಿವೆ, ಈ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಎದ್ದು ಕಾಣುತ್ತದೆ ಎಂದರು.

ಇದರಿಂದ ಪಾಲಿಕೆಗೆ ತುಂಬಾ ನಷ್ಟವಾಗಿದ್ದು, ಹತ್ತಾರು ವರ್ಷಗಳಾದರೂ ಪಾಲಿಕೆಯ ಆಸ್ತಿಗಳನ್ನು ಪಾಲಿಕೆ ಪಡೆದುಕೊಳ್ಳಲು ವಿಫಲವಾಗಿದೆ ಎಂದರೆ ಏನು? ಬೆಳಗಾವಿ ಜನತೆಗೆ ಈ ಅಧಿಕಾರಿಗಳು ಏನು ಉತ್ತರ ನೀಡುವರು? ಎಂದು ಸಮಿತಿಯ ಅಧ್ಯಕ್ಷರನ್ನು ಪ್ರಶ್ನೆ ಮಾಡಿದರು, ಪಾಲಿಕೆಯ ಲೆಕ್ಕಧಿಕಾರಿಗಳೇ ನೀವೇ ಹೇಳಿ ಇದರ ಕ್ರಮಕ್ಕಾಗಿ ಯಾರಿಗೆ ಪತ್ರ ಬರೆಯಬೇಕು, ನನ್ನ ಪ್ರಕಾರ 200ರಿಂದ 300 ಕೋಟಿಯ ಆಸ್ತಿ ಅದು, ಕಂದಾಯ ವಿಭಾಗದವರು ಯಾಕೆ ಕಣ್ಣು ಮುಚ್ಚಿ ಕುಳಿತುಕೊಂಡಿರುವಿರಿ ಎಂದು ಪ್ರಶ್ನೆ ಮಾಡಿದರು.

ಇದೇ ಸಂದರ್ಭದಲ್ಲಿ ಲೀಜ್ ಆಸ್ತಿಗಳ ವಿಷಯ ನಿರ್ವಾಹಕ ಸಿಬ್ಬಂದಿ ಬಾಕಿ ಉಳಿದಿರುವ ಲೀಜಿಗಳ ಸಮಗ್ರ ಮಾಹಿತಿ ನೀಡುದ್ದು, ಈಗಾಗಲೇ ಮೂರು ಆಸ್ತಿಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಆಸ್ತಿಗಳಿಗೂ ಹೊಸ ಟೆಂಡರ್ ಕರೆಯುವ ಪ್ರಕ್ರಿಯೆ ಮಾಡುತ್ತೇವೆ ಎಂದರು, ಅದಕ್ಕೂ ಒಪ್ಪದ ನಗರ ಸೇವಕರು ನಗರದ ಇಬ್ಬರೂ ಶಾಸಕರ ಗಮನಕ್ಕೆ ಈ ವಿಷಯವನ್ನು ತನ್ನಿ, ಪರಿಷತಿನಲ್ಲಿಯೂ ಈ ವಿಷಯವನ್ನು ಚರ್ಚೆಗೆ ತಗೆದುಕೊಳ್ಳಿ, ಸರ್ಕಾರಕ್ಕೂ ಇದರ ಬಗ್ಗೆ ಬರೆಯಿರಿ ಎಂದು ಅಧ್ಯಕ್ಷರಲ್ಲಿ ಕೇಳಿಕೊಂಡರು.
ಇನ್ನೂ ಪಾಲಿಕೆಯ ಕೆಲ ವಿಭಾಗಗಳ ಅಧಿಕಾರಿಗಳು ಸಭೆಗೆ ಗೈರಾಗಿದ್ದು, ಅವರಿಗೆ ಸಂಭಂದಿಸಿದ ವಿಷಯದ ಬಗ್ಗೆ ನಾವು ಯಾರನ್ನ ಕೇಳುವದು, ಅನುಮತಿ ಪಡೆಯದೇ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಕ್ರಮ ಜರುಗಿಸಿ ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷರು ಹೇಳಿದ್ದು, ಪೌರ ಕಾರ್ಮಿಕರಿಗೆ ನೀಡುವ ಉಪಹಾರದಲ್ಲಿ ಆಗಿರುವ ಲೋಪದೋಷಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಹನಮಂತ ಕೊಂಗಾಲಿ ಅವರು ಹೇಳಿದರು.

ಈ ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷರಾದ ನಂದು ಮೀರಜಕರ, ಸದಸ್ಯರಾದ ನೇತ್ರಾವತಿ ಭಾಗವತ, ರವಿ ಸಾಂಬರೆಕರ, ಆಡಳಿತ ಪಕ್ಷದ ನಾಯಕರು, ಪರಿಷತ್ ಕಾರ್ಯದರ್ಶಿಯಾದ ಪ್ರಿಯಾಂಕಾ, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯಾದ ಮಂಜುನಾಥ ಬೀಳಗಿಕರ, ಪಾಲಿಕೆಯ ಉಪ ಆಯುಕ್ತರಾದ (ಆಡಳಿತ) ಉದಯಕುಮಾರ ತಳವಾರ, ಲೆಕ್ಕಶಾಖೆಯ ವ್ಯವಸ್ಥಾಪಕರಾದ ನಯಿಮ ಮುಜಾವರ, ಕಾನೂನು ವಿಭಾಗದ ಅಧಿಕಾರಿ, ಕಂದಾಯ ವಿಭಾಗದ ಶ್ರೀಕಾಂತ ಇರಳೆ, ಪಾಲಿಕೆಯ ಇತರ ವಿಭಾಗಗಳ ಸಿಬ್ಬಂದಿಗಳು ಹಾಜರಿದ್ದರು..
ವರದಿ ಪ್ರಕಾಶ ಬಿ ಕೆ..