ಶಿವ ಸ್ಮರಣೆಯಲ್ಲಿ ಮಿಂದೆದ್ದ ಬೆಳಗಾವಿಯ ಶಿವಭಕ್ತರು..

ಶಿವ ಸ್ಮರಣೆಯಲ್ಲಿ ಮಿಂದೆದ್ದ ಬೆಳಗಾವಿಯ ಶಿವಭಕ್ತರು..

ಶಿವರಾತ್ರಿಯಲ್ಲಿ ಪರಶಿವನ ದರ್ಶನ ಪಡೆದು ಪುನೀತರಾದ ಭಕ್ತಗಣ..

ಬೆಳಗಾವಿ : ಶಿವರಾತ್ರಿಯ ಪ್ರಯುಕ್ತವಾಗಿ ಇಂದು ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶಿವನ ಆರಾಧನೆ, ಶಿವನ ಸ್ತೋತ್ರ, ಶಿವನ ನಾಮಸ್ಮರಣೆ ಮಾಡುತ್ತಾ ಶಿವಭಕ್ತರು ತಮ್ಮ ಭಕ್ತಿಯ ಪರಕಾಷ್ಟೇಯನ್ನು ಮೆರೆದಿದ್ದು, ನಗರವೆಲ್ಲಾ ಇಂದು ಶಿವಮಯವಾಗಿದೆ.

ಅದೇ ರೀತಿ ನಗರದ ತಿಲಕ ಚೌಕನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಸಂಭ್ರಮವನ್ನು ಅತೀ ಶೃದ್ದಾ ಭಕ್ತಿಯಿಂದ ಆಚರಣೆ ಮಾಡಿದ್ದರೆ, ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷವಾದ ಉಪವಾಸ ವೃತವನ್ನು ಕೈಗೊಂಡ ಭಕ್ತ ಸಮೂಹ ಬೆಳಿಗ್ಗೆ ಐದರಿಂದಲೇ ಭಕ್ತರು ದೇವಸ್ಥಾನದತ್ತ ತೆರಳಿ ಶಿವನ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇನ್ನು ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕಗಳು, ಪೂಜೆ, ಪುನಸ್ಕಾರ, ಪ್ರಾರ್ಥನೆ, ಮಂತ್ರಗೋಷ, ಆರತಿ, ನೈವೇದ್ಯಗಳನ್ನು ನೆರವೇರಿಸಿ, ಭಕ್ತರು ತಮ್ಮ ಭಕ್ತಿಯಿಂದ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಿ ಪರಶಿವನ ಕೃಪೆಗೆ ತಾವು ಪಾತ್ರರಾಗಿರುವರೆಂಬ ಭಾವನೆ ಭಕ್ತರ ಮನಸ್ಸಿನಲ್ಲಿ ಮೂಡಿದಂತಿತ್ತು.

ಶಿವನ ದರ್ಶನಕ್ಕಾಗಿ ನೂರಾರು ಭಕ್ತರ ದಂಡು ದೇವಸ್ಥಾನದ ಒಳಗೆ ಇದ್ದರೆ, ಇತ್ತ ದೇವಸ್ಥಾನದ ಹೊರಗಡೆ ದರ್ಶನ ಪಡೆದು ಬರುವ ಭಕ್ತರಿಗೆ ಲಘು ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು, ಮಹಾ ಶಿವರಾತ್ರಿ ಸಲುವಾಗಿ ಬಹುತೇಕ ಜನರು ಉಪವಾಸ ವೃತವನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ, ಭಕ್ತರಿಗೆ ಸಾಬೂದಾನಿ ಹಾಗೂ ಬಾಳೆಹಣ್ಣಿನ ಲಘು ಉಪಹಾರವನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಿದ್ದರು.

ಈ ಉಪಹಾರ ವ್ಯವಸ್ಥೆಯನ್ನು ಸ್ಥಳೀಯ ತಿಳಕಚೌಕ ಭಾಗದ ಶೈಲೇಶ ದೇಶಪಾಂಡೆ ಮತ್ತು ತಂಡದವರು ಮಾಡಿದ್ದು, ಪ್ರಸಾದ ವಿತರಣೆ ಮಾಡುವ ಆಯೋಜಕರು ಹೇಳಿದ ಹಾಗೆ, ಉಪವಾಸ ಇರುವ ಶಿವನ ಭಕ್ತರಿಗಾಗಿ ನಮ್ಮಿಂದ ಇದೊಂದು ಚಿಕ್ಕ ಸೇವೆ, ಇದರಲ್ಲಿ ನಮಗೆ ತುಂಬಾ ಸಂತಸವಿದೆ ಎಂದಿದ್ದಾರೆ.

ವರದಿ ಪ್ರಕಾಶ್ ಬಿ ಕುರಗುಂದ..

Leave a Reply

Your email address will not be published. Required fields are marked *