ಬೀದಿಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಸಿಗಲೇಬೇಕು..

ಬೀದಿಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಸಿಗಲೇಬೇಕು..

ಪ್ರತಿ ಮನೆಯ ಸ್ವಾದವನ್ನು ಹೆಚ್ಚಿಸುವ ಮಹತ್ಕಾರ್ಯ ಮಾಡುವವರು ಬೀದಿ ವ್ಯಾಪಾರಿಗಳು..

ಅನಂತ ಬ್ಯಾಕೋಡ್, ಸಾಮಾಜಿಕ ಕಾರ್ಯಕರ್ತರು..

ಬೆಳಗಾವಿ : ರಾಷ್ಟ್ರೀಯ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆ ಹಾಗೂ ಸಮಾವೇಶದ ಅಂಗವಾಗಿ ಬೆಳಗಾವಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ನೇತ್ರತ್ವದಲ್ಲಿ ನಗರದ ಕುಮಾರ್‌ ಗಂಧರ್ವ ಸಭಾಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ರಾಷ್ಟ್ರೀಯ ಬೀದಿಬದಿ ವ್ಯಾಪಾರಸ್ಥರ ದಿನಾಚರಣೆಯ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ಸಿ.ಈ. ರಂಗಸ್ವಾಮಿ ಹಾಗೂ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಹಲವರ ನೇತ್ರತ್ವದಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಬಳಿಕ ಬೀದಿಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಮಹಾನಗರ ಪಾಲಿಕೆ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಬೀದಿ ವ್ಯಾಪಾರಿಗಳ ಕಾಯ್ದೆ -2014 ಜಾರಿಗೆ ತಂದರು. ಅದರನ್ವಯ, 2019-20 ರಲ್ಲಿ ಕರ್ನಾಟಕ ರಾಜ್ಯ ಸರಕಾರವು ವಿವಿಧ ಯೋಜನೆ ಸ್ಕೀಮ್‌ ಜಾರಿಗೆ ತರಲಾಗಿರುತ್ತದೆ. ಈ ಯೋಜನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್‌ ಸರಕಾರ ಅನುಷ್ಠಾನ ಗೊಳಿಸಬೇಕೆಂದು ಆಗ್ರಹಿಸಿದರು.

ವ್ಯಾಪಾರಸ್ಥರ ವಿವಿಧ ಬೇಡಿಕೆಗಳು : ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ಅನುದಾನಗಳನ್ನು ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯ ರೂಪಕ್ಕೆ ಜಾರಿಗೊಳಿಸಬೇಕು, ಮಹಿಳಾ ಬೀದಿಬದಿ ವ್ಯಾಪಾರಿಗಳಿಗೆ ಶೌಚಾಲಯ ನೀಡಬೇಕು, ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಕುಂದುಕೊರತೆ ಸಮಿತಿ ರಚನೆ ಮಾಡಬೇಕು, ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಒಂದು ಲಕ್ಷದವರೆಗೆ ಸಾಲವನ್ನು ನೀಡಿಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಈ ವೇಳೆ ರಾಷ್ಟ್ರೀಯ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟ ರಾಜ್ಯಾಧ್ಯಕ್ಷ ಸಿ.ಈ.ರಂಗಸ್ವಾಮೀ, ಮಹಿಳಾ ರಾಜ್ಯಾಧ್ಯಕ್ಷರಾದ ಕಾವ್ಯಾಶ್ರೀ, ಬೆಳಗಾವಿ ಜಿಲ್ಲಾಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಗಳು, ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ್, ಸಮಾಜ ಸೇವಕ ಅನಂತಕುಮಾರ ಬ್ಯಾಕೋಡ್, ಸಚಿವರ ಬೆಂಬಲಿಗರಾದ ತೊಳಿ ಭರಮಣ್ಣ, ಜಂಗ್ಲಿಖಾನ ನಾಯಕ, ಬಾಳೇಶ ದಾಸನಟ್ಟಿ, ಪರಶುರಾಮ ಪೂಜಾರಿ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ, ಕಾರ್ಯಕ್ರಮದ ರೂವಾರಿಗಳಾದ ಇಮಾಮ್ ಹುಶೇನ್ ನದಾಫ್, ಪ್ರಸಾದ ಕವಳೆಕರ, ಜಾಫರ್ ಮುಲ್ಲಾ, ಸಂಗೀತಾ ಕೋತ, ಚಂದ್ರವ್ವಾ ದೇಸುರ್ಕರ, ವಿಜಯ, ಶಂಕರ ದೇಸುರ್ಕರ ಹಾಗೂ ನೂರಾರು ಬೀದಿ ಬದಿ ವ್ಯಾಪಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *