ಸಚಿವ ಸತೀಶ ಜಾರಕಿಹೊಳಿ ಅವರನ್ನೂ ವಿಸ್ವಾಸಕ್ಕೆ ತಗೆದುಕೊಳ್ಳಬೇಕು..

ಸಚಿವ ಸತೀಶ ಜಾರಕಿಹೊಳಿ ಅವರನ್ನೂ ವಿಸ್ವಾಸಕ್ಕೆ ತಗೆದುಕೊಳ್ಳಬೇಕು..

ಪೌರ ಸನ್ಮಾನ ಎಂಬ ಐತಿಹಾಸಿಕ ಕಾರ್ಯಕ್ರಮ ಪಕ್ಷಾತೀತವಾಗಲಿ..

ನಗರ ಸೇವಕ ರಮೇಶ ಸೊಂಟಕ್ಕಿ..

ಬೆಳಗಾವಿ : ಮಹಾನಗರ ಪಾಲಿಕೆಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ ಪ್ರಭಾಕರ ಕೋರೆ ಅವರಿಗೆ ನಡೆಸುವ ಪೌರ ಸನ್ಮಾನ ಕಾರ್ಯಕ್ರಮ ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಿದ್ದು, ಬೆಳಗಾವಿ ಜನತೆಗೆ ಇದು ಹೊಸತು, ಇಂತಹ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರನ್ನೂ ವಿಸ್ವಾಸಕ್ಕೆ ತಗೆದುಕೊಳ್ಳಿ ಎಂದು ಪಾಲಿಕೆಯ ನಮನಿರ್ದೇಶಿತ ನಗರ ಸೇವಕ ರಮೇಶ ಸೊಂಟಕ್ಕಿ ಸಲಹೆ ನೀಡಿದ್ದಾರೆ.

ಸೋಮವಾರ ದಿನಾಂಕ 23/02/2026ರಂದು ಮಹಾನಗರ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಜರುಗಿದ ಡಾ ಪ್ರಭಾಕರ ಕೋರೆ ಅವರಿಗೆ ಘೋಷಣೆಯಾದ ಪದ್ಮಶ್ರೀ ಪ್ರಶಸ್ತಿಯ ಅಂಗವಾಗಿ ಅವರಿಗೆ ಪೌರ ಸನ್ಮಾನ ಮಾಡುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ತಿಳಿಸಿದ ನಗರ ಸೇವಕ ರಮೇಶ ಸೊಂಟಕ್ಕಿ ಅವರು, ಪಾಲಿಕೆಯಿಂದ ಆಗುವ ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮ ಆಗಿದ್ದು, ಇದು ಪಕ್ಷಾತೀತವಾಗಿ ನಡೆಯಬೇಕು, ಸಮಾಜದ ವಿವಿಧ ಸಂಘ ಸಂಸ್ಥೆಯ ಪ್ರಮುಖರು, ಗಣ್ಯರು ಇದರಲ್ಲಿ ಭಾಗಿಯಾಗಬೇಕು ಎಂದರು.

ಇದಕ್ಕೆ ಉತ್ತರಿಸಿದ ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ್ ಅವರು, ನಾವು ಈಗಾಗಲೇ ಎಲ್ಲರನ್ನೂ ವಿಸ್ವಾಸಕ್ಕೆ ತಗೆದುಕೊಂಡೆ ಈ ಕಾರ್ಯಕ್ರಮದ ತಯಾರಿಯನ್ನು ಮಾಡುತ್ತಿದ್ದೇವೆ, ನಗರದ ಇಬ್ಬರು ಸಚಿವರು, ಇಬ್ಬರು ಶಾಸಕರು, ವಿವಿಧ ಪಕ್ಷಗಳ ಪಧಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ರಂಗಗಳ ಗಣ್ಯರನ್ನು ಆಮಂತ್ರಿಸಿ ಈ ಕಾರ್ಯಕ್ರಮವನ್ನು ಮಾಡುತ್ತಿದ್ದು, ತಮ್ಮ ಸಲಹೆ ಸೂಚನೆ ಪಡೆಯಲು ಈ ಪೂರ್ವಭಾವಿ ಸಭೆ ಎಂದರು.

ನಗರ ಸೇವಕ ನಿತೀನ ಜಾಧವ ಅವರು ಮಾತನಾಡಿ ಪ್ರತಿ ವಾರ್ಡಿನ ಪ್ರತಿ ಸಮುದಾಯದ ಪ್ರಮುಖರನ್ನು ಕರೆಸಿ ಅವರ ಸಲಹೆ ತಗೆದುಕೊಳ್ಳಬೇಕು, ಮಾಜಿ ಮಹಾಪೌರ ಉಪಮಹಾಪೌರ ಬರಬೇಕು ಎಂದರು, ಹಿಂದೆ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಕುಡಿಯುವ ನೀರು ತಂದಿದ್ದರಿಂದ ಅವರಿಗೆ ನಾಗರೀಕ ಸನ್ಮಾನ ಆದ ರೀತಿಯಲ್ಲಿ ಇಂದು ಸಮಾಜ ಸೇವೆ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರದ ಪ್ರಭಾಕರ ಕೋರೆ ಅವರಿಗೆ ಗೌರವ ಸಲ್ಲಬೇಕು ಎಂದು ಆಡಳಿತ ಪಕ್ಷದ ನಾಯಕ ಹನಮಂತ ಕೊಂಗಾಲಿ ಹೇಳಿದರು.

ಅದಕ್ಕಾಗಿ ಒಂದು ಉಪಸಮಿತಿ ಮಾಡಬೇಕು, ಯಾರ್ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ತೀರ್ಮಾನ ಮಾಡಬೇಕು, ಕಾರ್ಯಕ್ರಮದ ರುಪುರೆಷೆಗಾಗಿ ಇನ್ನೂ ಕೆಲ ಸಭೆಗಳು ಆಗಬೇಕು ಎಂದು ಕೆಲ ನಗರ ಸೇವಕರು ತಮ್ಮ ಅಭಿಪ್ರಾಯ ತಿಳಿಸಿದಾಗ, ಆಯುಕ್ತರು ಮಾತನಾಡಿ, ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗೆಯನ್ನು ವಿವರವಾಗಿ ಯೋಜನೆ ಮಾಡಿಕೊಳ್ಳಬೇಕು, ನಮ್ಮ ಪೌರ ಕಾರ್ಮಿಕರು ಸಿಬ್ಬಂದಿಗಳನ್ನು ಯಾವ ರೀತಿ ಬಳಸಿಕೊಳ್ಳಬೇಕು, ಕಾರ್ಯಕ್ರಮದ ಸ್ಥಳ, ಕಮಿಟಿಗಳ ರಚನೆ ಆಗಬೇಕು, ಕೇಂದ್ರದಿಂದ ಸನ್ಮಾನ ಆದ ನಂತರ ನಮ್ಮ ಕಡೆಯಿಂದ ಸನ್ಮಾನ ಆದರೆ ಗೌರವ ಇರುತ್ತದೆ ಎಂದರು.

ಕೊನೆಯದಾಗಿ ಏಪ್ರಿಲ್ 15ರ ನಂತರ ಪೌರ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡುವ ತಾತ್ಕಾಲಿಕ ತೀರ್ಮಾನಕ್ಕೆ ಬಂದಿದ್ದು, ಇದರ ಕುರಿತಾಗಿ ಇನ್ನೂ ಅನೇಕ ಸಭೆಗಳು ಆಗುವ ಸಾಧ್ಯತೆಗಳಿವೆ.

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *