ಕರ್ತವ್ಯದಲ್ಲಿ ಸ್ವಾಭಿಮಾನ ಮೆರೆದ ಪಾಲಿಕೆ ಆರೋಗ್ಯ ಸಿಬ್ಬಂದಿ..
ಸ್ವಚ್ಛತೆಗೆ ಅಸಹಕಾರ ತೋರಿದವಿರಿಂದಲೇ ರಸ್ತೆ ಸ್ವಚ್ಛ ಮಾಡಿಸಿದ ಸಿಬ್ಬಂದಿ..
ಬೆಳಗಾವಿ : ಶುಕ್ರವಾರ ದಿನಾಂಕ 27/03/2026ರಂದು ಮುಂಜಾನೆ 8: 18ರ ಸುಮಾರಿಗೆ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಆರೋಗ್ಯ ನೀರಿಕ್ಷಕರು ವಾರ್ಡ ಸಂಖ್ಯೆ 21ರ, ಶಹಾಪುರದ ಸರಾಫ ಗಲ್ಲಿಯಲ್ಲಿ ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು, ಆಗ ದಾನೇಶ್ವರಿ ಆಸ್ಪತ್ರೆಯ ಎದುರಿಗೆ ಸ್ವಚ್ಛ ಮಾಡಲು ತೆರಳಿದ್ದ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗೆ ಆಸ್ಪತ್ರೆಯ ಕೆಲ ಸಿಬ್ಬಂದಿಗಳಿಂದ ಅಸಹಕಾರ ದೊರೆತಿತ್ತು.
ವಿಷಯ ತಿಳಿದು ಸ್ಥಳಕ್ಕೆ ಸ್ವಚ್ಛತಾ ಮೇಲ್ವಿಚಾರಕ ಹಾಗೂ ಸ್ವಚ್ಛತಾ ನೀರಿಕ್ಷಕ ಬೇಟಿ ನೀಡಿ, ರಸ್ತೆ ಮೇಲೆ ನಿಲ್ಲಿಸಿದ ಆಸ್ಪತ್ರೆಯ ಆಂಬುಲೆನ್ಸ್ ವಾಹನವನ್ನು ತಗೆದರೆ ಬಹುದಿನಗಳಿಂದ ಅಲ್ಲಿರುವ ಕಸ ಹಾಗೂ ಮಣ್ಣನ್ನು ತಗೆದು ರಸ್ತೆಯನ್ನು ಸ್ವಚ್ಛಗೊಳಿಸಬಹುದು ಎಂದು ಹೇಳಿದ್ದಾರೆ, ಅದಕ್ಕೆ ಸರಿಯಾಗಿ ಸ್ಪಂದನೆ ನೀಡದೇ, ರಸ್ತೆಯಲ್ಲಿ ನಿಲ್ಲಿಸಿದ ವಾಹನವನ್ನು ತಗೆಯದೇ ಸಿಬ್ಬಂದಿಗಳೊಂದಿಗೆ ವಾಗ್ವಾದ ಮಾಡಿ ಮರಳಿ ಕಳಿಸಿದ್ದರು.

ಇತ್ತ ಪಾಲಿಕೆಯ ಆರೋಗ್ಯ ಸಿಬ್ಬಂದಿಗಳೂ ಕೂಡಾ ಸ್ವಲ್ಪ ಸ್ವಾಭಿಮಾನಿಗಳೇ, ನೀವು ವಾಹನ ತಗೆಯದಿದ್ದರೆ ಹಾಗೂ ನಮ್ಮ ಜೊತೆ ವಾದ ಮಾಡಿದರೆ ನಮಗೂ ಸರಿಯಾಗಿ ಸ್ವಚ್ಛಮಾಡಲು ಆಗುವದಿಲ್ಲ ಎಂದು ಮರಳಿ ಬಂದಿದ್ದಾರೆ.
ನಂತರ ಮಧ್ಯಾಹ್ನ 2: 22ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸೆಕ್ಯೂರಿಟಿ ಎಲ್ಲರೂ ಸೇರಿ ರಸ್ತೆ ಮೇಲೆ ಎರಚಿದ ಆಸ್ಪತ್ರೆಯಲ್ಲಿ ಉಪಯೋಗಿಸಿದ ನಿರೂಪಯೋಗ ಕಸವನ್ನು ತಾವೇ ತಗೆದು ರಸ್ತೆಯನ್ನು ಸ್ವಚ್ಛ ಗೊಳಿಸಿದ್ದಾರೆ. ಸಾರ್ವಜನಿಕರು ಕೂಡಾ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸಹಕರಿಸಿ ನಡೆಸಬೇಕು ಆಗ ನಮ್ಮಇಡೀ ನಗರವೇ ಸ್ವಚ್ಛ ಆಗುವದರಲ್ಲಿ ಸಂಶಯ ಇರುವದಿಲ್ಲ..
ವರದಿ ಪ್ರಕಾಶ್ ಬಿ ಕೆ..