ಹಿಂದಿ ಭಾಷೆ ಕೈ ಬಿಟ್ಟಿರುವದು ಸ್ವಾಗತಾರ್ಹ…
ಸಂಜು ಬಡಿಗೇರ, ಕರವೇ ತಾಲೂಕಾ ಅಧ್ಯಕ್ಷರು ಚಿಕ್ಕೋಡಿ..
ಚಿಕ್ಕೋಡಿ : ಕರ್ನಾಟಕ ಸರ್ಕಾರದ ಶಿಕ್ಷಣ ಕ್ಷೇತ್ರದಲ್ಲಿ ದ್ವಿಭಾಷೆ ನೀತಿ ಜಾರಿ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಯನ್ನು ಕೈಬಿಟ್ಟಿರುವದು ಸ್ವಾಗತರ್ಹವೆಂದು ತಾಲೂಕ ಕರವೇ ಅಧ್ಯಕ್ಷ ಸಂಜು ಬಡಿಗೇರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕನ್ನಡದ ಮಕ್ಕಳಿಗೆ ಒತ್ತಾಯದ ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಕಳೆದು 15 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆರುತ್ತಾ ಬಂದಿದೆ. ಆ ಹೋರಾಟದ ಪರಿಣಾಮದಿಂದ ಕರವೇಯ ಅನೇಕ ಹೋರಾಟಗಾರರ ಮೇಲೆ ಸಾಕಷ್ಟು ಕೇಸು ಕಟ್ಟಲೆ ಪ್ರಕರಣಗಳು ದಾಖಲಾಗಿದ್ದು ಅಲ್ಲದೆ ಅನೇಕ ಹೋರಾಟಗಾರರು ಜೈಲುವಾಸವನ್ನು ಕೂಡ ಅನುಭವಿಸಿರುತ್ತಾರೆ.
ಅಲ್ಲದೆ ಕೇಂದ್ರ ಸರ್ಕಾರ ಬಹುತೇಕ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಏರಿಕೆ ಹೇಳಿಕೆ ಮಾಡಲು ಹೊರಟಿದ್ದು. ಇದನ್ನು ವಿರೋಧಿಸಿ ಅದಕ್ಕೆ ತಕ್ಕ ಉತ್ತರ ನೀಡಲು ಪರೀಕ್ಷಾ ಸಂದರ್ಭದಲ್ಲಿ ಹಿಂದಿ ಭಾಷೆ ಪರೀಕ್ಷೆ ವಿರೋಧಿಸಿ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ವಿನೂತನ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರು ಮುಂದಾಗಿದ್ದರು.
ಈಗ ನಮ್ಮ ಕರ್ನಾಟಕ ಘನ ಸರ್ಕಾರ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ಹಿಂದಿ ಭಾಷಾಂಕಗಳನ್ನು ಪರಿಗಣನೆ ಮಾಡದೆ ದ್ವಿಭಾಷಾ ನೀತಿಗೆ ಒಲವು ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದೆ ರಾಜ್ಯದ ಈ ನಿಲುವಿನ ಜೋತೆ ರಾಜ್ಯದ ಆಡಳಿತರೂಡ ಇತರೆ ಎಲ್ಲಾ ವಲಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡ ಭಾಷೆಗೆ ಸೂಕ್ತ ಮುನ್ನಡೆ ಸಿಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಪರಿಣಾಮಕಾರಿಯಾಗಿ ಜಾರಿಯಾಗುವ ನಿಟ್ಟಿನಲ್ಲಿ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಸರ್ಕಾರ ಇದಕ್ಕೆ ಆಸ್ಪದ ನೀಡದೆ ತಾವುಗಳು ಹೊರಡಿಸಿದ ಸುತ್ತೋಲೆಗಳಲ್ಲಿ ಸ್ಪಷ್ಟಪಡಿಸಿದಂತೆ ಪರಿಣಾಮಕಾರಿಯಾಗಿ ಕಾರ್ಯರೂಪಗೊಳಿಸಿ ಜಾರಿಗೆ ತರಬೇಕೆಂದು ಚಿಕ್ಕೋಡಿಯ ಕರವೇ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಅವರು ಆಗ್ರಹಿಸಿದ್ದಾರೆ..