ಇಬ್ಬರು ಬಿಎಲ್ಓಗಳ ಅಮಾನತ್ತಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಕೆ..
ನಾಳೆ ಸಂಜೆಯೊಳಗೆ ಶೇಕಡಾ 50ರಷ್ಟು ಪ್ರಗತಿ ಆಗದಿದ್ದರೆ 20 ಬಿಎಲ್ಓಗಳ ಮೇಲೆ ಕ್ರಮ..
ಸಿದ್ದು ಹುಲ್ಲೋಳ್ಳಿ, ಸಹಾಯಕ ಮತದಾರ ನೊಂದಣಾಧಿಕಾರಿ..
ಬೆಳಗಾವಿ : ಸುಮಾರು ನಾಲ್ಕು ತಿಂಗಳಿನಿಂದ ಮತದಾರರ ಮ್ಯಾಪಿಂಗ್, ಪ್ರೊಜೆನಿ ಹಾಗೂ ಸೇಲ್ಪ್ ಪ್ರೊಜೆನಿಯಲ್ಲಿ ತಾವು ಕನಿಷ್ಠ ಸಾಧನೆ ಮಾಡಿದ್ದು, ನಾಳೆ ಸಂಜೆ ಆರು ಗಂಟೆಯೊಳಗೆ ಶೇಕಡಾ 50ರಷ್ಟು ಪ್ರಗತಿ ಸಾಧಿಸದೇ ಹೋದಲ್ಲಿ, ಕಡಿಮೆ ಪ್ರಗತಿ ಕಂಡ ಎಲ್ಲಾ ಇಪ್ಪತ್ತು ಬಿಎಲ್ಓಗಳ ಅಮಾನತ್ತಿಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗುತ್ತದೆ ಎಂದು ಸಹಾಯಕ ಮತದಾರ ನೊಂದಣಾಧಿಕಾರಿಗಳಾದ ಸಿದ್ದು ಹುಲ್ಲೋಳ್ಳಿ ಖಡಕ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ದಿನಾಂಕ 31/03/2026 ರಂದು ಪಾಲಿಕೆಯ ಚುನಾವಣಾ ವಿಭಾಗದ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಸಹಾಯಕ ಮತದಾರ ನೊಂದಣಾಧಿಕಾರಿ ಅವರು ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮ್ಯಾಪಿಂಗ್ ಹಾಗೂ ಪ್ರೊಜನಿ ಕಾರ್ಯದಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಸುಮಾರು 20 ಬಿಎಲ್ಓಗಳಿಗೆ ಖಡಕ್ ಸೂಚನೆ ನೀಡಿ, ಒಂದು ವೇಳೆ ಹೀಗೆ ಆದರೆ ಮುಂದೆ ಎಸ್ಆಯ್ಆರ್ ಕಾರ್ಯದಲ್ಲಿ ತಮಗೆ ತುಂಬಾ ತೊಂದರೆ ಆಗುತ್ತದೆ, ಅದೇ ರೀತಿ ತಮ್ಮ ಮೇಲೆ ಶಿಸ್ತು ಕ್ರಮವೂ ಜರುಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಒಟ್ಟು 600 ಬಿಎಲ್ಓಗಳಿದ್ದು ಅವರೆಲ್ಲ ಸರಿಯಾಗಿ ಮತದಾರರ ಕಾರ್ಯ ಮಾಡುತ್ತಿರುವಾಗ ನಿಮ್ಮ 20 ಜನರಿಗೆ ಏನು ಸಮಸ್ಯೆ ಆಗಿದೆ? ಓಟರ್ ಲಿಸ್ಟಲ್ಲಿ ಏನು ಮಾಡಿದ್ದೀರಿ? ಮನೆಮನೆಗೆ ಯಾವಾಗ ಹೋಗಿದ್ದಿರಿ? ಲೆಕ್ಕ ಕೊಡ್ತೀರಾ? ನಿಮ್ಮ ಬ್ಲಾಕ್ ನಲ್ಲಿ ಎಷ್ಟು ಮತದಾರರಿದ್ದಾರೆ? ಎಷ್ಟು ಜನರ ಕಾರ್ಯ ಇನ್ನು ಬಾಕಿಯಿದೆ? ನಾಲ್ಕು ತಿಂಗಳಾದರೂ ಇನ್ನು ಅರ್ಧದಷ್ಟು ಮ್ಯಾಪಿಂಗ್ ಕಾರ್ಯ ಮಾಡಿಲ್ಲ, ಮಕ್ಕಳಿಗೂ ಹೀಗೆ ಪಾಠ ಮಾಡುತ್ತೀರಾ? ಎಂದು ಪ್ರಶ್ನೆ ಮಾಡುದರು.

ರಾಜ್ಯದಲ್ಲಿಯೇ ಅತೀ ಕಡಿಮೆ ಮ್ಯಾಪಿಂಗ್ ಹಾಗೂ ಪ್ರೊಜನಿ ಕಾರ್ಯ ಬೆಳಗಾವಿ ನಗರದ್ದಾಗಿದೆ, ಜಿಲ್ಲಾಧಿಕಾರಿಗಳು ಮೂರು ಸಲ, ನಾವು ಸುಮಾರು ಹತ್ತು ಸಲ ಸಭೆ ಮಾಡಿ ತಮಗೆ ತರಬೇತಿ ನೀಡಿದ್ದೇವೆ, ಆದರೂ ನೀವು ಪ್ರಗತಿ ಸಾಧಿಸಿಲ್ಲ, ಹೀಗೆ ಆದರೆ ಕೆಲ ಮತದಾರರು ಮತಪಟ್ಟಿಯಿಂದ ಬಿಟ್ಟುಹೋಗುತ್ತಾರೆ, ಆ ರದ್ದಾದ ಮತದಾರರು ನಾಳೆ ತಮ್ಮ ಮನೆ ಮುಂದೆ ಬಂದು ಕುಳಿತರೆ ಏನು ಮಾಡುತ್ತೀರಿ ಎಂದರು.
ಇಂದು ಸಭೆಗೆ ಹಾಜರಾಗದೆ ಇರುವ ಬಿಎಲ್ಓಗಳಿಗೆ ಸೋಕಾಸ ನೋಟಿಸ್ ನೀಡಿ, ಅತೀ ಕಡಿಮೆ ಪ್ರಗತಿ ಸಾಧಿಸಿದ ಇಬ್ಬರು ಬಿಎಲ್ಓಗಳನ್ನು ಅಮಾನತ್ತು ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ, ನಾಳೆ ಸಂಜೆ ಒಳಗೆ ಶೇಕಡಾ 50ಕ್ಕಿಂತ ಹೆಚ್ಚು ಪ್ರಗತಿ ಹೊಂದದಿದ್ದರೆ ಬಹುತೇಕ ಬಿಎಲ್ಓಗಳ ಕ್ರಮ ಆಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ..

ವರದಿ ಪ್ರಕಾಶ್ ಬಿ ಕೆ..