ಅನಾಮಿಕ ಅರ್ಜಿಯಿಂದ ಪಾಲಿಕೆ ಕಂದಾಯ ಸಿಬ್ಬಂದಿಗೆ ಮುಜುಗರ..
ಮಹತ್ವದ ತನಿಖಾ ವರದಿ ನೀಡಲಿರುವ ಅಧಿಕಾರಿಯನ್ನು ಕುಗ್ಗಿಸುವ ತಂತ್ರವೇ?
ಬೆಳಗಾವಿ : ಮಹಾನಗರ ಪಾಲಿಕೆಯ ಬೆಳಗಾವಿಯ ದಕ್ಷಿಣ ಕಂದಾಯ ಶಾಖೆಯ ವಲಯ ಆಯುಕ್ತರು ಹಾಗೂ ಕರ ವಸೂಲಿಗಾರ (ಹೆಸರು ಕೂಡಾ ನಮೂದಿಸಿ) ಹಿರಿಯ ನಾಗರಿಕರಿಗೆ ಗೌರವ ನೀಡುತ್ತಿಲ್ಲ ಹಾಗೂ ಕೆಲಸಕ್ಕಾಗಿ ಹಣದ ಬೇಡಿಕೆ ಇಡುತ್ತಾರೆ ಎಂದು ತಕರಾರು ಅರ್ಜಿಯನ್ನು 16/03/2026 ಮುಖ್ಯ ಕಚೇರಿಯ ಟಪಾಲ್ ವಿಭಾಗದಲ್ಲಿ ನೀಡಿದ್ದರು.
ತಕರಾರು ಅರ್ಜಿ ನೀಡಿದವರು ಅವರ ವಿಳಾಸ ಬರೆದಿಲ್ಲ, ಸಂಪರ್ಕ ಸಂಖ್ಯೆಯನ್ನೂ (ಮೊಬೈಲ್ ಸಂಖ್ಯೆ) ನಮೂದಿಸಿಲ್ಲ, ಹೀಗಿರುವಾಗ ತಕರಾರಿಗೆ ಸಂಬಂದಿಸಿದ ದಾಖಲೆ ಸಾಕ್ಷಿಗಳನ್ನು ಯಾರನ್ನು ಕೇಳಬೇಕು? ಉತ್ತರ ಯಾರಿಗೆ ಎಲ್ಲಿ ಕಳಿಸಬೇಕು? ಎಂಬ ಪ್ರಶ್ನೆಗಳು ಅಧಿಕಾರಿಗಳನ್ನು ಕಾಡಿದ್ದವು, ಅದರ ಬಗ್ಗೆ ಯೋಚಿಸಿದಾಗ, ಇದೊಂದು ಅನಾಮಿಕ ಅರ್ಜಿ ಇರಬಹುದು ಜೊತೆಗೆ ದಕ್ಷಿಣ ಕಂದಾಯ ವಿಭಾಗದ ವಲಯ ಆಯುಕ್ತರು ಹಾಗೂ ಕರ ವಸೂಲಿಗಾರನ ತೇಜೋವದೆ ಮಾಡುವ (ಹೆಸರು ಕೆಡಿಸುವ) ತಂತ್ರ ಇರಬಹುದು ಎಂಬ ಅನುಮಾನ ಮೂಡಿದೆ.
ಇದೆ ಅರ್ಜಿಯ ಆಧಾರವಾಗಿ ಫೇಸ್ ಬುಕ್ ಪೆಜಿನಲ್ಲಿ ವರದಿ ಬಂದು ಸದರಿ ಸಿಬ್ಬಂದಿಗಳಿಗೆ ಮುಜುಗರ ಆಗುವ ಪರಿಸ್ಥಿತಿಯೂ ಆಗಿದೆ, ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆರೋಪದ ವರದಿ ಮಾಡುವಾಗ ಅದಕ್ಕೆ ಸಂಬಂದಿಸಿದ ಸೂಕ್ತ ದಾಖಲೆಗಳು ನಮ್ಮ ಹತ್ತಿರ ಇರಬೇಕು.
ಇನ್ನು ಈ ಅನಾಮಿಕ ತಕರಾರು ಅರ್ಜಿಯ ಹಿಂದೆ ದಕ್ಷಿಣದ ವಲಯ ಆಯುಕ್ತರನ್ನು ಕುಗ್ಗಿಸುವ ತಂತ್ರ ಇರಬಹುದೇ ಎಂಬ ಸಂಶಯ ಉಂಟಾಗಿದೆ, ಏಕೆಂದರೆ ಇತ್ತೀಚಿಗೆ ಒಂದು ಮಹತ್ವದ ಪ್ರಕರಣದಲ್ಲಿ ತನಿಖಾ ಅಧಿಕಾರಿಯಾಗಿ ವರದಿ ನೀಡುವ ಜವಾಬ್ದಾರಿ ಅವರಿಗಿದೆ, ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಕುಗ್ಗಿಸಿ, ತಮ್ಮ ಪರವಾಗಿ ವರದಿ ಬರೆಸಿಕೊಳ್ಳುವ ತಂತ್ರ ಇರಬಹುದೇ ಎಂಬ ಪ್ರಶ್ನೆ ಕೆಲವರಲ್ಲಿ ಕಾಡುತ್ತಿದೆ.
ಒಟ್ಟಿನಲ್ಲಿ ಯಾರೇ ಅಧಿಕಾರಿ, ಸಿಬ್ಬಂದಿ ಆಗಿರಲಿ ಅವರ ಮೇಲೆ ನಾವು ಆರೋಪ ಮಾಡುವಾಗ ಸೂಕ್ತ ದಾಖಲೆಗಳು ಇರಬೇಕು, ಇಂತಹ ಅನಾಮಿಕ ಅರ್ಜಿಯ ಬಗ್ಗೆ ಮೇಲಾಧಿಕಾರಿಗಳೂ ಕೂಡಾ ಗಮನಿಸಿ, ಯಾವುದು ಸತ್ಯ, ಯಾವುದು ಸುಳ್ಳು ಎಂದು ತೀರ್ಮಾನಿಸಿ ತಮ್ಮ ಸಿಬ್ಬಂದಿಗಳ ಜೊತೆ ಚರ್ಚಿಸಬೇಕು ಎಂಬುದು ಸಾರ್ವಜನಿಕರ ಆಶಯ..
ವರದಿ ಪ್ರಕಾಶ್ ಬಿ ಕೆ..