ಡಾ ಬಾಬಾಸಾಹೇಬ ಅಂಬೇಡ್ಕರ ಜಯಂತಿಯ ಪೂರ್ವಸಿದ್ಧತೆ..

ಡಾ ಬಾಬಾಸಾಹೇಬ ಅಂಬೇಡ್ಕರ ಜಯಂತಿಯ ಪೂರ್ವಸಿದ್ಧತೆ..

ಜಯಂತಿಯ ಅದ್ದೂರಿ ಆಚರಣೆಗಾಗಿ ಗಣ್ಯರ ಸಲಹೆ ಸೂಚನೆಗಳು.

ಬೆಳಗಾವಿ : ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರರವರ 135ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಕುರಿತು
ದಿನಾಂಕ : 08-04-2026 ರಂದು ಪಾಲಿಕೆಯ ಮಹಾಪೌರರು ಹಾಗೂ ಉಪ ಮಹಾಪೌರರು, ಆಡಳಿತ ಪಕ್ಷದ ನಾಯಕರು ಹಾಗೂ ಉಪ ಆಯುಕ್ತರು (ಆಡಳಿತ) ನೋಡಲ ಅಧಿಕಾರಿಗಳು, ದಲಿತ ಮುಖಂಡರಾದ ಮಲ್ಲೇಶ ಚೌಗಲೆ, ಮಲ್ಲೇಶ್ ಕುರಂಗಿ, ಮನೋಜ ಹಿತ್ತಲಮನಿ, ಮಲ್ಲೇಶ ಹಿತ್ತಲಮನಿ, ಸಂದೀಪ ಖನಗಾಂವಕರ, ಪ್ರಕಾಶ ಕೆಂಪ್ಪಣ್ಣವರ, ಸುಧೀರ ಚೌಗುಲೆ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ ಸಿಟಿ ಲಿ. ಬೆಳಗಾವಿ, ಪೊಲೀಸ್ ಸಿಬ್ಬಂದಿ ಸಂಚಾರಿ ಪೋಲೀಸ್ ಠಾಣೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಳಗಾವಿ, ಜಿಲ್ಲಾ ಅಗ್ನಿಶಾಮಕ ದಳ, ಬೆಳಗಾವಿ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ, ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು & ಒಳನಾಡು ಸಾರಿಗೆ ಇಲಾಖೆ, ಬೆಳಗಾವಿ, ಕಾರ್ಯಕಾರಿ ಅಭಿಯಂತರರು ಹೆಸ್ಕಾಂ, ಬೆಳಗಾವಿ, ಆರೋಗ್ಯ ನಿರೀಕ್ಷಕರು, ಮಹಾನಗರ ಪಾಲಿಕೆ ಬೆಳಗಾವಿ, ಮುಂತಾದವರು ಉಪಸ್ಥಿತರಿದ್ದರು.

ಡಾ|| ಬಿ. ಆರ್. ಅಂಬೇಡ್ಕರ್ ರವರ ಉದ್ಯಾನವನದಲ್ಲಿರುವ ಡಾ|| ಬಿ. ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಹಾಪೌರರು ಮಾಲಾರ್ಪಣೆ ಮಾಡುವ ಮೂಲಕ ಜಯಂತಿಗೆ ಪೂರ್ವ ತಯಾರಿ ಕುರಿತಂತೆ ಸ್ಥಳ ಪರಿಶೀಲನೆಗೆ ಚಾಲನೆ ನೀಡಿದರು. ಉತ್ಸವ ಸಮಿತಿಯ ಮಹಾಮಂಡಳದ ಅಧ್ಯಕ್ಷರಾದ ಮಲ್ಲೇಶ ಚೌಗಲೆ ಅವರು ಮಹಾಪೌರರು ಹಾಗೂ ಉಪ ಮಹಾಪೌರರು ಮತ್ತು ಉಪಸ್ಥಿತರಿದ್ದವರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು. ಮಹಾಪೌರರು ಹಾಗೂ ಉಪ ಮಹಾಪೌರರು ಮತ್ತು ಉತ್ಸವ ಸಮಿತಿಯ ಮಹಾಮಂಡಳದ ಅಧ್ಯಕ್ಷರು ರಸ್ತೆಯನ್ನು ಸ್ವಚ್ಛಗೊಳಿಸಲು, ಎಲ್ & ಟಿ ರವರಿಗೆ ರಸ್ತೆ ಮಧ್ಯೆದಲ್ಲಿ ಇರುವ ತಗ್ಗು-ಗುಂಡಿಗಳನ್ನು ಮುಚ್ಚಲು ತಿಳಿಸಿದರು.

ರಸ್ತೆ ಮಧ್ಯೆದಲ್ಲಿ ಅಡ್ಡವಿರುವ ಮರಗಳ ಕೊಂಬೆಗಳನ್ನು ಟ್ರೀಮ್ ಮಾಡುವುದು ಕೇಬಲ್ ಹಾಗೂ ಇನ್ನೀತರ ಅಡೆತಡೆಗಳನ್ನು ತೆರವುಗೊಳಿಸುವಂತೆ ಉಪಸ್ಥಿತರಿರುವ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಹಾಗೂ ಮೆರವಣಿಗೆ ಸ್ಥಳದ ಬಗ್ಗೆ ಮೂರು ದಿನ ಮುಂಚಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

Leave a Reply

Your email address will not be published. Required fields are marked *