ಭೀಮ ಜ್ಯೋತಿ ತರಲು ತೆರಳುವವರಿಗೆ ಶುಭ ಕೋರಿ ಬೀಳ್ಕೊಡುಗೆ..
ಬೆಳಗಾವಿ : ಶುಕ್ರವಾರ ದಿನಾಂಕ 10/04/2026 ರಂದು ಡಾ!! ಬಾಬಾಸಾಹೇಬ ಅಂಬೇಡ್ಕರ ಉದ್ಯಾನವನದಿಂದ ನಾಗಪೂರಕ್ಕೆ ಭೀಮ ಜ್ಯೋತಿಯನ್ನು ತರಲು ತೆರಳುತ್ತಿರುವ ಐದು ಜನರಿಗೆ ಸನ್ಮಾನಿಸಿ ಶುಭ ಕೋರಿ ಬೀಳ್ಕೂಡುಗೆ ನೀಡಲಾಯಿತು.

ಸದರಿ ಭೀಮ ಜ್ಯೋತಿಯನ್ನು ತೆಗೆದುಕೊಂಡು 13 ನೇ ತಾರಿಖಿಗೆ ಬೆಳಗಾವಿ ಆಗಮಿಸಿ, 14 ನೇ ತಾರೀಖಿನಂದು ಜಿಲ್ಲಾಡಳಿತಕ್ಕೆ ಒಪ್ಪಿಸುವವರಿದ್ದು, ಸದರಿ ಬಿಳ್ಕೋಡುವ ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ ಹಾಗೂ ಅಂಬೇಡ್ಕರ ಜಯಂತಿಯ ಉತ್ಸವ ಸಮಿತಿಯ ಮಹಾಮಂಡಲದ ಅಧ್ಯಕ್ಷರಾದ ಮಲ್ಲೇಶ ಚೌಗುಲೆ, ಬಾಬು ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.