ಬೆಳಗಾವಿ ನಗರಾಭಿವೃದ್ಧಿ ಕೋಶ ಇಂಜಿನಿಯರ್ ಮನೆಯಲ್ಲಿ ಲೋಕಾಯುಕ್ತರ ಪರಿಶೀಲನೆ..
14 ಕೋಟಿ ಮೌಲ್ಯದ ಚಿನ್ನ ಹಾಗೂ ನಗದು ಜಪ್ತಿ..
ಬೆಳಗಾವಿ :ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಎಇಇ ಅಜಯಸಿಂಗ ಬಾಪಸಿಂಗ ರಜಪೂತಗೆ ಲೋಕಾಯುಕ್ತ ಭರ್ಜರಿ ಶಾಕ್ ನೀಡಿದೆ.
ಮನೆಯಲ್ಲಿ14 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಪತ್ತೆಯಾಗಿದ್ದು, ಲೋಕಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನಗರದ ಆಂಜನೇಯ ನಗರ ನಿವಾಸಿಯಾಗಿರುವ ರಜಪೂತ ಅವರಿಗೆ ಸಂಬಂಧಿಸಿದಂತೆ ಸದರಿಯವರ ಮನೆ, ಕಛೇರಿ, ಬ್ಯಾಂಕ ಲಾಕರ್ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಶೋಧ ಕಾರ್ಯವನ್ನು ಲೋಕಾಯುಕ್ತ ಅಧಿಕಾರಿಗಳು ಕೈಗೊಂಡಿದ್ದರು.
ಶೋಧನೆ ವೇಳೆ ರಜಪೂತ ಅವರಿಗೆ ಸೇರಿದ ಬೆಳಗಾವಿ ನಗರದಲ್ಲಿ 3 ಮನೆ, ಹುಕ್ಕೇರಿ, ಸವದತ್ತಿ ಹಾಗೂ ಹುಬ್ಬಳ್ಳಿ ನಗರ ಸೇರಿ 5 ನಿವೇಶನ, 5 ಕೆಜಿ 960 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣಗಳು, 5 ಕೆಜಿ ಬೆಳ್ಳಿಯ ಆಭರಣ ಹಾಗೂ ವಸ್ತುಗಳು, 3 ಕೋಟಿ 12 ಲಕ್ಷ ಬ್ಯಾಂಕ ಎಫ್ಡಿ, ಒಂದು ಕಾರ ಹಾಗೂ ಬೈಕ. ಸೇರಿ ಒಟ್ಟು 14 ಕೋಟಿಗಿಂತ ಹೆಚ್ಚಿನ ಆಸ್ತಿಯನ್ನು ಪತ್ತೆ ಹಚ್ಚಿರುತ್ತಾರೆ.
ಈ ಪ್ರಕರಣದ ತನಿಖೆಯನ್ನು ಇನ್ನೂ ನಡೆಸಲಾಗುವುದು ಎಂದು ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳ ತಿಳಿಸಿದ್ದಾರೆ.