ವ್ಯಾಪಾರಸ್ಥರ ಪುಟ್ ಪಾತ್ ಅತಿಕ್ರಮಣದಿಂದ ಜನತೆಗೆ ತೊಂದರೆ..

ವ್ಯಾಪಾರಸ್ಥರು ಪುಟ್ ಪಾತ್ ಅತಿಕ್ರಮಣದಿಂದ ಜನತೆಗೆ ತೊಂದರೆ..
ನಗರ ಸೇವಕ ನೀತಿನ ಜಾಧವ,

ಮಂಗಳವಾರದಿಂದ ಕಟ್ಟುನಿಟ್ಟಾಗಿ ಪುಟ್ ಪಾತ್ ಅತಿಕ್ರಮಣ ತೆರವು..

ಲಕ್ಷ್ಮಿ ನಿಪ್ಪಾಣಿಕರ, ಉಪ ಆಯುಕ್ತೆ ಅಭಿವೃದ್ಧಿ..

ಬೆಳಗಾವಿ : ಪುಟ್ ಪಾತ್ ಅಲ್ಲಿ ಹಾಕಲಾಗಿರುವ ಅಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಟ್ರಾಫಿಕ್ ಜ್ಯಾಮ್ ಕೂಡಾ ಆಗುತ್ತಿದ್ದು, ಬಹುದಿನಗಳ ಹಿಂದೆಯೇ ಈ ಸಮಸ್ಯೆ ಕುರಿತಾಗಿ ವಾರ್ಡ್ ಸಂಖ್ಯೆ 29 ನಗರ ಸೇವಕ ನೀತಿನ ಜಾಧವ ಅವರು ನೀಡಿದ ಮನವಿಯ ಅನುಸಾರ ಬರುವ ಮಂಗಳವಾರದಿಂದ ನಾವು ಪುಟ್ ಪಾತ್ ಅತಿಕ್ರಮಣ ತೆರವು ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದು ಪಾಲಿಕೆಯ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ತಿಳಿಸಿದ್ದಾರೆ.

ಗುರುವಾರ ದಿನಾಂಕ 09/04/2026 ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಜರುಗಿದ ಪಾಲಿಕೆಯ ಆಡಳಿತಾತ್ಮಕ ಸಭೆಯಲ್ಲಿ ನಗರ ಸೇವಕ ನಿತಿನ ಜಾಧವ ಅವರು ಈ ವಿಷಯ ಪ್ರಸ್ತಾಪ ಮಾಡಿ, ಪುಟ್ ಪಾತ್ ಅತಿಕ್ರಮಣ ಮಾಡಿ ಅಂಗಡಿಗಳನ್ನು ಇಟ್ಟಿರುವದರಿಂದ ಎಷ್ಟು ತೊಂದರೆ ಆಗುತ್ತಿದೆ ಎಂದು ಸಭೆಗೆ ತಿಳಿಸಿದ್ದು, ಆದಷ್ಟು ಬೇಗ ಪುಟ್ ಪಾತ್ ಅಲ್ಲಿರುವ ಅಂಗಡಿಗಳನ್ನು ತೆರೆವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಸಭೆಯಲ್ಲಿ ಒತ್ತಾಯ ಮಾಡಿದ್ದರು.

ಈ ವಿಷಯಕ್ಕೆ ಉತ್ತರ ನೀಡುತ್ತ ಮಾತನಾಡಿದ ಪಾಲಿಕೆಯ ಉಪ ಆಯುಕ್ತೆ ಅವರು, ಬರುವ ಮಂಗಳವಾರದಿಂದ ಕಟ್ಟುನಿಟ್ಟಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಾಡುತ್ತೇವೆ, ಆಗ ಯಾರು ನಮಗೆ ಫೋನ್ ಮಾಡಿ ನಮ್ಮ ಕೆಲಸಕ್ಕೆ ಅಡ್ಡಿ ಮಾಡಬಾರದು ಎಂದರು, ಇಷ್ಟು ದಿನ ಮಾನವೀಯತೆ ಆಧಾರದಲ್ಲಿ ನಾವು ವ್ಯಾಪಾರಸ್ಥರಿಗೆ ತಿಳಿಸಿ ಹೇಳಿದ್ದೇವೆ, ಇನ್ನು ಮುಂದೆ ಕಟ್ಟುನಿಟ್ಟಾಗಿ ಪುಟ್ ಪಾತ್ ಮೇಲಿನ ಅಂಗಡಿಗಳನ್ನು ತಗೆಯುತ್ತೇವೆ ಎಂದಿದ್ದಾರೆ.

ಪೊಲೀಸ್ ಸಿಬ್ಬಂದಿ ಜೊತೆಗೆ ಹೋಗಿ ತೆರವುಗೊಳಿಸಿ ಎಂದು ಪಾಲಿಕೆಯ ಆಯುಕ್ತರು ಹೇಳಿದಾಗ, ಸರ್ ನಮಗೆ ಪೊಲೀಸ್ ಬೇಡ ನಾವೇ ಹೋಗುತ್ತೇವೆ, ಆದರೆ ನಮ್ಮ ಕೆಲಸಕ್ಕೆ ಯಾವ ಜನಪ್ರತಿನಿಧಿಗಳು ಅಡ್ಡಿ ಮಾಡಬಾರದು, ಅಂಗಡಿಗಳು ಬೀಗ ಹಾಕಿದ್ದರೂ ಅವುಗಳನ್ನು ಒಡೆದು ಪುಟ್ ಪಾತಗಳನ್ನು ಕ್ಲೀಯರ್ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರೆ.

ಪಾಲಿಕೆಯ ನಗರ ಸೇವಕರು ಹಾಗೂ ಅಧಿಕಾರಿಗಳಿಂದ ಆಗುತ್ತಿರುವ ಈ ಒಳ್ಳೆಯ ಕಾರ್ಯದಿಂದ ನಗರದ ಜನತೆಗೆ ವಿಶೇಷವಾಗಿ ಮಕ್ಕಳಿಗೆ ಹಿರಿಯ ನಾಗರಿಕರಿಗೆ ಸರಳ ಸಂಚಾರಕ್ಕೆ ಅನುಕೂಲ ಆಗುತ್ತದೆ ಜೊತೆಗೆ ಸಂಚಾರ ಸಮಸ್ಯೆ ಕೂಡಾ ನಿಯಂತ್ರಣ ಆಗುತ್ತದೆ.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *