ಶಹಾಪುರದ ಶಿವಾಜಿ ಉದ್ಯಾನವನದಲ್ಲಿ ಸ್ವಚ್ಛತೆ ಹಾಗೂ ಭದ್ರತೆ ಕಾಪಾಡಿ..
ವೀರ ಮದಕರಿ ಘರ್ಜನೆ ಸಂಘದಿಂದ ಪಾಲಿಕೆ ಆಯುಕ್ತರಿಗೆ ಮನವಿ..
ಬೆಳಗಾವಿ : ನಗರದ ಶಹಾಪುರ ಭಾಗದಲ್ಲಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಉಧ್ಯಾನವನಕ್ಕೆ ಪ್ರತಿದಿನ ಬಹಳಷ್ಟು ಜನರು ವಾಯು ವಿಹಾರಕ್ಕಾಗಿ ಬರುತ್ತಾರೆ, ಆದರೆ ಬಂದ ಜನತೆಗೆ ಇಲ್ಲಿ ಸ್ವಚ್ಛತೆಯ ಹಾಗೂ ಭದ್ರತೆಯ ಸಮಸ್ಯೆ ಇದ್ದು, ಅದನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ನಗರದ ವೀರ ಮದಕರಿ ಘರ್ಜನೆ ಸಂಘದಿಂದ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಬುಧವಾರ ದಿನಾಂಕ 06/04/2026ರಂದು ವೀರ ಮದಕರಿ ಘರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಆನಂದ ಶಿರೂರ ಅವರ ನೇತೃತ್ವದಲ್ಲಿ ಹತ್ತಾರು ಕಾರ್ಯಕರ್ತರು ಬಂದು ಮನವಿ ನೀಡಿದ್ದು, ಸಂಜೆ ಹೊತ್ತು ಕೆಲವರು ಉದ್ಯಾನವನದಲ್ಲಿ ಬಂದು ಕುಳಿತು, ಇಲ್ಲಿ ತಿಂಡಿ ತಿನಿಸಿ ತಿಂದು, ಕಸಗಳನ್ನು ಎಸೆಯುತ್ತಿದ್ದಾರೆ, ಕೆಲ ಪುರುಷರು ಧೂಮಪಾನವನ್ನು ಕೂಡಾ ಮಾಡುತ್ತಾರೆ, ಇದರಿಂದ ಚಿಕ್ಕ ಮಕ್ಕಳು, ಮಹಿಳೆಯರು ವಾಯು ವಿಹಾರ ಮಾಡಲು ಮುಜುಗರ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಲ್ಲದೇ ಸುಮಾರು ಹದಿನೈದು ಬೀದಿ ನಾಯಿಗಳು ಗಾರ್ಡನ್ನಿನಲ್ಲಿ ಸದಾ ಇರುತ್ತಿದ್ದೂ, ಆಟವಾಡುವ ಮಕ್ಕಳಿಗೆ, ಸುತ್ತಾಡುವ ಸಾರ್ವಜನಿಕರಿಗೆ ತುಂಬಾ ತೊಂದರೆ ಮಾಡುತ್ತಿವೆ, ಕೆಲವು ಸಲ ಕಚ್ಚಲು ಕೂಡಾ ಬರುತ್ತವೆ.
ಅದಕ್ಕಾಗಿ ಉದ್ಯಾನವನದಲ್ಲಿ ಧೂಮಪಾನ ನಿಷೇಧದ ಹಾಗೂ ದಂಡದ ಸೂಚನಾ ಪಲಕಗಳನ್ನು ಅಳವಡಿಡಬೇಕು, ಉಲ್ಲಂಘೀಸಿದವರ ವಿರುದ್ಧ ಕಾನೂನು ಕ್ರಮ ತಗೆದುಕೊಳ್ಳಬೇಕು, ಉದ್ಯಾನವನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಇನ್ನೂ ಹೆಚ್ಚಿನ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಬೇಕು ಸಾರ್ವಜನಿಕರ ಸುರಕ್ಷತೆಗಾಗಿ ಸಂಜೆ ವೇಳೆ ಪೊಲೀಸ್ ನಿಗಾ ಇಡಬೇಕು ಎಂಬ ವಿಷಯಗಳ ಬೇಡಿಕೆಗಾಗಿ ಮನವಿ ನೀಡಿದ್ದು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಆಯುಕ್ತರು ಭರವಸೆಯನ್ನು ನೀಡಿದ್ದಾರೆ.
ಈ ವೇಳೆ ವಾಲ್ಮೀಕಿ ಸಮುದಾಯದ ಪ್ರಮುಖರಾದ ವಿಜಯ ತಳವಾರ, ಬಲರಾಮ ಮಾಸೆನಟ್ಟಿ, ದತ್ತಾ ಬಿಲಾವರ, ಡಾಕ್ಟರ್ ಉತ್ತಮ ಪಾಟೀಲ, ಮಂಜು ಕಾಂಬ್ಳೆ, ಆಕಾಶ್ ಧಾಮನೇಕರ, ರೂತುಜಾ ಶಿರೂರ, ರೇಣುಕಾ ಹೊಸೂರ, ಸೀಮಾ ಪವಾರ್, ವೈಶಾಲಿ ಸುತಾರ, ಮತ್ತಿತರರು ಹಾಜರಿದ್ದರು.
ವರದಿ ಪ್ರಕಾಶ್ ಬಿ ಕೆ..