41ಅಕ್ರಮ ಪಿಐಡಿ ಪ್ರಕರಣವನ್ನು ಮುಚ್ಚಿ ಹಾಕುವತ್ತ ಪಾಲಿಕೆಯ ಚಿತ್ತವೇ?

41ಅಕ್ರಮ ಪಿಐಡಿ ಪ್ರಕರಣವನ್ನು ಮುಚ್ಚಿ ಹಾಕುವತ್ತ ಪಾಲಿಕೆಯ ಚಿತ್ತವೇ?

ಶಿಸ್ತಿನ ಬಿಜೆಪಿ ಪಕ್ಷದ ಆಡಳಿತ ಭ್ರಷ್ಟರಿಗೆ ಬಿಸಿ ಮುಟ್ಟಿಸುವುದೇ?

ಜನಪರ ಆಡಳಿತದ ನಿರೀಕ್ಷೆಯಲ್ಲಿ ಬೆಳಗಾವಿಯ ಪ್ರಜ್ಞಾವಂತ ಜನತೆ..

ಬೆಳಗಾವಿ : ನಗರದ ಸಾಮಾನ್ಯ ಜನತೆ ತಮ್ಮ ಆಸ್ತಿಗಳ ದಾಖಲೆಗಳನ್ನು ಮಾಡಿಕೊಳ್ಳಲು ಪಾಲಿಕೆ ಹಾಗೂ ಅದರ ಉಪಶಾಖೆಗಳಿಗೆ ಬೇಟಿ ನೀಡಿದಾಗ, ಸಾಹೇಬರು ಮೀಟಿಂಗ್ ಹೋಗಿದ್ದಾರೆ, ಸರ್ವರ್ ಇಲ್ಲಾ, ಆ ಪೇಪರ್ ಇಲ್ಲಾ, ಈ ಪೇಪರ್ ಇಲ್ಲಾ, ಎಂದು ಸಾರ್ವಜನಿಕರನ್ನು ತಿಂಗಳುಗಟ್ಟಲೆ ಅಲೆದಾಡುಸುವ ಕಂದಾಯ ವಿಭಾಗಗಳ ಸಿಬ್ಬಂದಿಗಳು, ತಮಗೆ ಬೇಕಾದವರು, ಪ್ರತಿದಿನ ತಮ್ಮ ಹಿಂದೆ ಮುಂದೆ ಇರುವವರು ಫೈಲ್ ತಂದು ಕೊಟ್ಟರೆ ಹೋಟೆಲ್, ರಸ್ತೆ, ಕಾರು, ಮಾರುಕಟ್ಟೆ ಹೀಗೆ ಎಲ್ಲಿ ಅಂದರೆ ಅಲ್ಲೇ ಸಹಿ ಮಾಡಿ, ಪಿಐಡಿ ಈ ಆಸ್ತಿ ಮಾಡಿ ಕೊಡುವರು..

ಹೀಗೆ ಸಾಮಾನ್ಯ ಜನರಿಗೊಂದು ಹಾಗೂ ಹಣ ಕೊಡುವ (ಎಜೇಂಟ್) ಹಾಗೂ ಪ್ರಭಾವಿಗಳಿಗೊಂದು ರೀತಿ ನಡೆಕೊಳ್ಳುವ ಸಿಬ್ಬಂದಿಗಳಿಂದ ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ದುಡ್ಡು ಕೊಡದೇ ಕೆಲಸವೇ ಆಗದಂತಹ ಸ್ಥಿತಿ ಬಂದಿದೆ. ಇದರ ನಡುವೆ ಇಲಾಖೆಯ ನಿಯಮಗಳನ್ನು ಉಲ್ಲಂಘಸಿ, ಅಕ್ರಮವಾಗಿ ಪಾಲಿಕೆಯ ಮಹತ್ವದ ಆಸ್ತಿ ದಾಖಲೆಗಳನ್ನು ನೀಡುತ್ತಿದ್ದು, ಕಳೆದ ಕೆಲ ತಿಂಗಳಿನಿಂದ ಪಾಲಿಕೆಯ ದಕ್ಷಿಣ ವಿಭಾಗದ ಶಾಖೆಯ, ವಾರ್ಡ ಸಂಖ್ಯೆ 9 ರಲ್ಲಿ ಸುಮಾರು 41ಪಿಐಡಿಗಳು ಅಕ್ರಮವಾಗಿ ಸಿದ್ದವಾಗಿದ್ದು, ಇದರ ಕುರಿತಾಗಿ ಪಾಲಿಕೆಯ ಮಹತ್ವದ ಸಭೆಗಳಲ್ಲಿ ಚರ್ಚೆ ಆಗಿ, ತನಿಖೆ ಆಗಿ, ತನಿಖಾ ವರದಿ ಕೂಡಾ ಬಂದು, ತಾವು ತಪ್ಪು ಮಾಡಿದ್ದೇವೆ ಎಂದು ಆ ವಾರ್ಡಿಗೆ ಸಂಬಂದಿಸಿದ ಕರ ವಸೂಲಿಗಾರ, ಕಂದಾಯ ನೀರಿಕ್ಷಕ, ಕಂದಾಯ ಅಧಿಕಾರಿ ಹಾಗೂ ವಲಯ ಆಯುಕ್ತರು ಒಪ್ಪಿಕೊಂಡಿದ್ದರು ಎಂದು ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಿತ್ತು.

ಇದಾಗಿ ಎರಡು ತಿಂಗಳಾದರೂ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕ್ರಮ ಆಗಿಲ್ಲ, ಜನಸಾಮಾನ್ಯರಿಗೆ ಕಷ್ಟ ನೀಡುವ, ಪ್ರಭಾವಿಗಳಿಗೆ, ಹಣ ನೀಡುವವರಿಗೆ ನಿಯಮ ಬಾಹಿರವಾಗಿ ಕೆಲಸ ಮಾಡಿ ಕೊಡುವ ಇಂತಹ ಭ್ರಷ್ಟ ಸಿಬ್ಬಂದಿಗಳ ಮೇಲೆ ಆಡಳಿತ ಪಕ್ಷ ಕನಿಕರ ತೋರುತ್ತಿದೆಯಾ? ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯ ಈ ಪಾಲಿಕೆಯ ಆಡಳಿತದಲ್ಲಿ ಆಶಿಸ್ತು ತೋರಬಾರದು, ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಭ್ರಷ್ಟಾಚಾರದ ವಿರುದ್ಧ ದಿಟ್ಟ ನಿಲುವು ಹೊಂದಿದ್ದಾರೆ, ಪಾಲಿಕೆಯ ಬಿಜೆಪಿಯವರು ಕೂಡಾ ಭ್ರಷ್ಟಾಚಾರವನ್ನು ಮೆಟ್ಟಿ ನಿಂತು ತಮ್ಮ ಪಕ್ಷದ ಶಿಸ್ತನ್ನು ಕಾಪಾಡಬೇಕಿದೆ.

ಜನಸಾಮಾನ್ಯರಿಗೆ ಇಲ್ಲಸಲ್ಲದ ರೂಲ್ಸಗಳನ್ನು ಹೇಳಿ, ತೊಂದರೆ ನೀಡಿ, ಬಲಿಷ್ಠರಿಗೆ ಬಕೆಟ್ ಹಿಡಿಯುವ ಯಾವುದೇ ಸಿಬ್ಬಂದಿಗಳನ್ನು ಕ್ಷಮಿಸಬಾರದು, ಏಕೆಂದರೆ ಜನರು ನೀಡಿದ ಮತದಲ್ಲಿ ಜನಪ್ರತಿನಿಧಿಗಳು ಅಧಿಕಾರದ ಖುರ್ಚಿಯಲ್ಲಿ ಇರುವರು ಹಾಗೂ ಜನರು ಕಟ್ಟುವ ತೆರಿಗೆ ಹಣದಲ್ಲಿ ಇಲಾಖೆಯ ಅಧಿಕಾರಿಗಳು ತಮ್ನ ಸಂಬಳ ಪಡೆಯುವರು, ಹೀಗಿರುವಾಗ ಜನರ ಕೆಲಸ ಮಾಡುವದು ತಮ್ಮ ಕರ್ತವ್ಯ, ಅದನ್ನು ಮರೆತು ಅಧಿಕಾರದ ಮತ್ತಲ್ಲಿ ಎಲ್ಲವೂ ನಮ್ಮದೇ ಎಂದು ನಡೆದರೆ ಮುಂದೆ ಮುಟ್ಟುವ ಗುರಿ ಊಹೆಗಿಂತಲೂ ಕ್ರೂರ ಆಗಿರುತ್ತದೆನೋ?

ತಪ್ಪು ಮಾಡಿದವರಿಗೆ ಬಿಸಿ ಮುಟ್ಟಿಸಿ, ಜನರಿಗೆ ಅನುಕೂಲ ಆಗುವ ಪಾರದರ್ಶಕವಾದ ಆಡಳಿತವನ್ನು ನೀಡಿ, ಸರ್ಕಾರದ ವಿವಿಧ ಯೋಜನೆಗಳಿಂದ ಹಾಗೂ ಬೆಳಗಾವಿ ಜನತೆ ಕಟ್ಟುವ ಕೋಟ್ಯಂತರ ತೆರಿಗೆ ಹಣದಿಂದ, ನಗರವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಆಗಬೇಕು, ಆ ಮೂಲಕ ಪಾಲಿಕೆಗೆ ಉತ್ತಮ ಹೆಸರು ಬರಬೇಕು, ಆಡಳಿತ ಪಕ್ಷ ಹಾಗೂ ಅಧಿಕಾರಿಗಳು ಜನರ ಮನಸ್ಸನ್ನು ಗೆಲ್ಲುವ ಕಾರ್ಯ ಮಾಡಬೇಕು ಎಂಬುದು ಸಾರ್ವಜನಿಕರ ಆಶಯ…

ವರದಿ ಪ್ರಕಾಶ್ ಬಿ ಕೆ..