ಪರಿಸರ ಸಂರಕ್ಷಣೆ ಇಂದು ಅನಿವಾರ್ಯವಾಗಿದೆ..
ಬದುಕಿಗಾಗಿ ನಾವು ಪ್ರತಿ ಕ್ಷಣ ಪರಿಸರ ರಕ್ಷಿಸುವ ಕಾರ್ಯ ಮಾಡಬೇಕು..
ಸುಭಾಸ ಸಂಕದ, ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಬೆಳಗಾವಿ..
ಬೆಳಗಾವಿ : ಜಾಗತಿಕ ಮಟ್ಟದಲ್ಲಿ ಇಂದು ಅನೇಕ ಜ್ವಲಂತ ಸಮಸ್ಯೆಗಳು ಇಡೀ ಮನುಕುಲವನ್ನೇ ಕಾಡುತ್ತಿದ್ದು ಅಂತಹ ಸಮಸ್ಯೆಗಳಿಂದ ಪಾರಾಗಿ ಮನುಕುಲ ಬದುಕುಳಿಯಲು ಪರಿಸರದ ಸಂರಕ್ಷಣೆ ತುಂಬಾ ಅನಿವಾರ್ಯವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಸುಭಾಸ ಸುಂಕದ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಯೋಜನೆ ಮಾಡಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಗಿಡಕ್ಕೆ ನಿರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ನ್ಯಾಯಾದೀಶರು, ನಾವು ನಮ್ಮ ಬದುಕಿನ ಪ್ರತಿ ಕ್ಷಣವನ್ನು ಕೂಡಾ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡಬೇಕು, ಕೇವಲ ಇದೊಂದೇ ದಿನ ಅಲ್ಲಾ ವರ್ಷಪೂರ್ತಿ ನಾವು ಪರಿಸರದ ಕಾಳಜಿ ಮಾಡಬೇಕು, ಈಗ ಆಧುನಿಕರಣ ತಂತ್ರಜ್ಞಾನದಿಂದ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ, ಇದು ಇಡೀ ಮನುಕುಲಕ್ಕೆ ಕಂಟಕ ಆಗುವ ವಿಷಯ, ಅದಕ್ಕಾಗಿ ಪರಿಸರ ರಕ್ಷಣೆ ಇಂದು ಅನಿವಾರ್ಯವಾಗಿದೆ ಎಂದರು.

ಇದೇ ವೇಳೆ ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಎನ್ ಇ ಅವರು ಮಾತನಾಡಿ, ಇಂದು ಎಲ್ಲೆಡೆ ಪರಿಸರ ದಿನಾಚರಣೆ ಆಚರಿಸುವಂತೆ ಬೆಳಗಾವಿಯಲ್ಲಿಯೂ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನಾಚರಣೆ ಮಾಡುತ್ತಿದ್ದೇವೆ, ಮೊದಲಿಗೆ ಇಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆಯ ಸಹಕಾರದಿಂದ ಪರಿಸರ ದಿನಾಚರಣೆ ಮಾಡಿದ್ದೇವೆ, ಪ್ರತಿಯೊಬ್ಬರ ಜೀವನದಲ್ಲಿ ಪರಿಸರ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ, ಸಾಂಕೇತಿಕವಾಗಿ ಇಂದು ಗಿಡ ನೆಡುವ ಕಾರ್ಯಕ್ರಮ ಇದೆ ಆದರೆ ಇಲಾಖೆಯಿಂದ ನಾವು ವರ್ಷಪೂರ್ತಿ ವಿವಿಧ ಯೋಜನೆಗಳ ಮೂಲಕ ಪರಿಸರ ಸಂರಕ್ಷಿಸುವ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.

ನಗರದಲ್ಲಿ ಅರಣ್ಯ ಇಲಾಖೆಯಿಂದ ಇನ್ನೂ ಹಲವು ಕಾರ್ಯಕ್ರಮಗಳು ಇವೆ, ಪರಿಸರ ದಿನಾಚರಣೆಗಳಲ್ಲಿ ನಾವು ಸ್ಥಳಗಳನ್ನು ಆಯ್ಕೆ ಮಾಡಿದ್ದು ರಕ್ಷಣೆ ಇರುವಂತಹ ಸ್ಥಳಗಳು, ಶಾಲೆ ಕಾಲೇಜುಗಳು, ಕಂಪೌಂಡ್ ಇರುವ ಸ್ಥಳಗಳಲ್ಲಿ ಹಾಗೂ ಮುತುವರ್ಜಿಯಿಂದ ನೋಡಿಕೊಳ್ಳುವ ಸ್ಥಳಗಳಲ್ಲಿ ಜಾಗಗಳಲ್ಲಿ ಗಿಡಗಳನ್ನು ಬೆಳೆಸುತ್ತೇವೆ ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಪವನ ಪಾಟೀಲ, ಬೆಳಗಾವಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆದ ನಾಗರಾಜ ಬಾಳೆಹೊಸುರ, ಬೆಳಗಾವಿ ವಲಯ ಅರಣ್ಯಧಿಕಾರಿಯಾದ ಪ್ರಶಾಂತ ಗೌರಾಣಿ, ನ್ಯಾಯಾಲಯ, ಕಾನೂನು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಬಿ ಕೆ…