ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಆದ ಕರವೇ ರಾಜ್ಯಾಧ್ಯಕ್ಷರ ಜನ್ಮ ದಿನಾಚರಣೆ..
ಪರಿಸರ ಕಾಳಜಿ ಹಾಗೂ ಶಾಲಾ ಮಕ್ಕಳ ಪೌಷ್ಟಿಕತೆಗೆ ಸಾಕ್ಷಿಯಾದ ನಾರಾಯಣಗೌಡರ 60ನೇ ಜನ್ಮದಿನ..
ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಶ್ರೀಯುತ ಟಿ. ಎ. ನಾರಾಯಣಗೌಡರವರ 60ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ 60ನೇ ಜನ್ಮದಿನದ ಪ್ರಯುಕ್ತ 60 ಸಸಿಗಳನ್ನು ನೆಡಲಾಯಿತು. ಪರಿಸರ ಉಳಿವು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ನೀಡುವ ಸಂಕಲ್ಪದೊಂದಿಗೆ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಬೆಳಗಾವಿಯ ಆಂಜನೇಯ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಣ್ಣು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಸಂತಸದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕರಾದ ಸುರೇಶ ಗವನ್ನವರ, ಜಿಲ್ಲಾ ಉಪಾಧ್ಯಕ್ಷರಾದ ರಾಜು ನಾಶಿಪುಡಿ, ಗಣೇಶ ರೋಕಡೆ, ಹೊಳ್ಳೆಪ್ಪಾ ಸುಲದಾಳ, ನಿಂಗರಾಜ ಗುಂಡ್ಯಾಗೊಳ, ಬಸವರಾಜ ಧೂಳಪ್ಪಗೊಳ, ಸಿದ್ದರಾಯಿ ನಾಯಿಕ, ಅಡಿವೆಪ್ಪಾ ತಲ್ಲೂರಿ, ಸಿದ್ದರಾಯಿ ಒಡ್ಡಗೋಳ, ಸತೀಶ್ ಗುಡದವರ ಅರ್ಜುನ ಕಾಂಬಳೆ, ಮಂಜುನಾಥ ರಾಠೋಡ, ಲೋಕೇಶ ರಾಠೋಡ, ಇಸ್ಮಾಯಿಲ ಮುಲ್ಲಾ, ಅಭಿಷೇಕ್ ಆಗಸಗಿ, ಶಾಂತಾ ಹಣಬರ , ರೇಖಾ ಲೋಕರಿ, ಮಹಾದೇವಿ ಕುರಬೇಟ , ರಾಜಶ್ರೀ ರಂಕನಕೊಪ್ಪ , ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು..