ಪಾಲಿಕೆ ಉಪ ಆಯುಕ್ತರಿಗೆ ಜನ್ಮ ದಿನದ ಶುಭಾಶಯ ತಿಳಿಸಿದ ಗಡಿನಾಡು ಕನ್ನಡಿಗರ ಸೇನೆ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಉಪ ಆಯುಕ್ತರು (ಆಡಳಿತ) ಹಾಗೂ ಮಹಾನಗರ ಪಾಲಿಕೆಯ ಎಸ್ ಸಿ, ಎಸ್.ಟಿ ಸೌಕರರ ಸಂಘದ ಅಧ್ಯಕ್ಷರಾದ ಉದಯಕುಮಾರ ತಳವಾರ ಅವರ 48ನೇ ಜನ್ಮದಿನದ ಅಂಗವಾಗಿ ಗಡಿ ಕನ್ನಡಿಗರ ಸೇನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಗೌರವಾನ್ವಿತರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಪಾಲಿಕೆಯ ಉಪ ಆಯುಕ್ತ (ಆಡಳಿತ)ರಾದ ಉದಯಕುಮಾರ ತಳವಾರ ಅವರ ಜನ್ಮದಿನ ನಿನ್ನೆಯೇ ಆಗಿದ್ದು ನೂರಾರು ಸ್ನೇಹಿತರು ಹಾಗೂ ಹಿತೈಸಿಗಳು ಆಗಮಿಸಿ ಶುಭ ಕೋರಿ ಹೋಗಿದ್ದರು, ಅದರಂತೆಯೇ ಇಂದು ಕೂಡಾ ಅವರ ಅನೇಕ ಆತ್ಮೀಯರು ಶುಭಾ ಹಾರೈಸಿದ್ದಾರೆ, ಅದೇರೀತಿ ಬೆಳಗಾವಿಯ ಗಡಿನಾಡು ಕನ್ನಡಿಗರ ಸೇನೆಯಿಂದಲೂ ಮಾನವೀಯ ಮೌಲ್ಯವುಳ್ಳ ಅಧಿಕಾರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ್ದು, ದೇವರು ತಮಗೆ ಮತ್ತಷ್ಟು ಆಯುರಾರೋಗ್ಯ, ಯಶಸ್ಸು, ನೆಮ್ಮದಿ ನೀಡಿ ಕಾಪಾಡಲಿ ಎಂದು ಶುಭ ಕೊರಿದ್ದಾರೆ.
ಈ ವೇಳೆ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ, ಎಸ್ ಎಸ್ ಮುಖನವರ, ಆನಂದ ಬಿಲಾವರ, ಸಂತೋಷ್ ಮಾಸೆನಟ್ಟಿ, ಶಿವಾಜಿ ಗುರವ, ಮಂಜು ಪಾಸ್ತೆ, ಬಾಳು ಪಾಟೀಲ ಮತ್ತಿತರರು ಇದ್ದರು..