ಸತತ ಅಧ್ಯಯನವೇ ಯಶಸ್ಸಿನ ಸೂತ್ರ..
ಡಾ.ಸತೀಶ ಚೌಲಿಗೇರ..
ಬೆಳಗಾವಿ : ವಿದ್ಯಾರ್ಥಿಗಳು ಶ್ರಧ್ಧೆ, ಕಠಿಣ ಪರಿಶ್ರಮ ಮತ್ತು ಸತತ ಅಧ್ಯಯನದ ಮೂಲಕ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಹೊಂದಬೇಕೆಂದು
ಬೆಳಗಾವಿಯ ನವಜೀವನ ಫೌಂಡೇಶನ್ ಹಾಗೂ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ
ಡಾ.ಸತೀಶ ಚೌಲಿಗೇರ ಹೇಳಿದರು.
ಬುಧವಾರ ನಗರದ ಕಂಜರ್ ಗಲ್ಲಿಯ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ
ನವಜೀವನ ಫೌಂಡೇಶನ್ ವತಿಯಿಂದ ಉಚಿತ ನೋಟ್ ಬುಕ್ಸ್ ಹಾಗೂ ಬ್ಯಾಗ್ ಗಳನ್ನು ವಿತರಿಸಿ ಮಾತನಾಡಿದ ಅವರು, ವಿದ್ಯೆಯು ನಮ್ಮ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸುವ ಅಸ್ತ್ರವಾಗಿದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸುವ ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನವಜೀವನ ಪೌಂಡೇಶನ್ ಕಾರ್ಯದರ್ಶಿ ಪ್ರವೀಣ ನಾಯ್ಕರ, ಫೌಂಡೇಶನ್ ದ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ಫೌಂಡೇಶನ್ ಸದಸ್ಯರಾದ ಸ್ವಪ್ನ ಚೌಲಿಗೇರ, ಗೀತಾ ಹೊಸಮನಿ, ಸುಧಾ ಹೊಸೆಟ್ಟಿ ಮಾತನಾಡಿದರು.
ಎಸ್ಡಿಎಂಸಿ ಸದಸ್ಯರು, ಪ್ರಧಾನ ಗುರು, ಶಿಕ್ಷಕರು, ಗಣೇಶ ಹಾವಳಿ, ಆಕಾಶ ಹೊಸಮನಿ, ವಿನೋದ ಹೊರಕೇರಿ, ಮಂಜುನಾಥ ಕುಂಬಾರ, ವಿನೋದ ಪಾಟೀಲ, ಕಿರಣ, ಆಕಾಶ,ನಾಗೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.