ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಸ್ಐಆರ್ ನಲ್ಲಿ ಭಾಗಿಯಾಗಿ..

ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಸ್ಐಆರ್ ನಲ್ಲಿ ಭಾಗಿಯಾಗಿ..

ಎಸ್ಐಆರ್ ಗೆ ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿಗಳ ಮನವಿ..

ಬೆಳಗಾವಿ : ದೇಶದಲ್ಲಿ ಜನರು ಉದ್ಯೋಗ, ಮದುವೆ ಮುಂತಾದ ಕಾರಣಗಳಿಗಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವುದು ಅಥವಾ ಮರಣ ಹೊಂದುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಕೇಂದ್ರ ಚುನಾವಣಾ ಆಯೋಗವು ಪ್ರತಿ 20 ವರ್ಷಗಳಿಗೊಮ್ಮೆ ಎಸ್ಐಆರ್ (ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಜಾರಿಗೆ ತಂದಿದೆ, ಇದಕ್ಕೆ ಪ್ರತಿ ನಾಗರಿಕರೂ ಸಹಕರಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

​ಮತದಾನದ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಅತ್ಯಗತ್ಯ. ಇದನ್ನು ಒಂದು ಅಭಿಯಾನದ ರೂಪದಲ್ಲಿ ಯಶಸ್ವಿಗೊಳಿಸಿದರೆ ಚುನಾವಣಾ ಆಯೋಗಕ್ಕೂ ಹಾಗೂ ಸಾರ್ವಜನಿಕರಾದ ನಮಗೂ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

​ಜೂನ್ 30 ರಿಂದ ಜುಲೈ 29 ರವರೆಗೆ ನಡೆಯುವ ಈ ಅಭಿಯಾನದಲ್ಲಿ
​ಜಿಲ್ಲಾಧಿಕಾರಿಗಳ ನಿವಾಸಕ್ಕೆ ಎಸ್ಐಆರ್ ಪ್ರಕ್ರಿಯೆಗಾಗಿ ಭೇಟಿ ನೀಡಿದ ಬಿಎಲ್‌ಒ ಮತ್ತು ಮಹಾನಗರ ಪಾಲಿಕೆಯ ಚುನಾವಣಾ ವಿಭಾಗದ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಅವರ ಪತ್ನಿಗೆ ಎಸ್ಐಆರ್ ಅರ್ಜಿ ನೀಡುವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ “ಜೂನ್ 30 ರಿಂದ ಪ್ರಾರಂಭವಾಗಿ ಜುಲೈ 29 ರವರೆಗೆ” ಜಿಲ್ಲಾದ್ಯಂತ ಈ SIR ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಬಿಎಲ್‌ಒಗಳು ತಮ್ಮ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

​ಬಿಎಲ್‌ಒಗಳಿಗೆ ವಿವರ ನೀಡಿ ಸಹಕರಿಸಿ:

​ಮನೆ ಬಾಗಿಲಿಗೆ ಭೇಟಿ ನೀಡಿದ ಬಿಎಲ್‌ಒಗಳು ನಿಮ್ಮ ಮನೆಗೆ ಬಂದಾಗ ಸಾರ್ವಜನಿಕರು ಸೂಕ್ತ ವಿವರಗಳನ್ನು ನೀಡಿ ಸಹಕರಿಸಬೇಕು. ನಿಗದಿತ ಫಾರಂಗಳನ್ನು ಭರ್ತಿ ಮಾಡಿ ಅವರಿಗೆ ತಲುಪಿಸುವದು
​ಮತದಾರರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಈ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ನಮ್ಮ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಲು ನಾವು ಮತದಾನದ ಹಕ್ಕು ಪಡೆದಿರಬೇಕು, ಮತದಾನದ ಹಕ್ಕು ಪಡೆಯಲು ಈ ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ನಾವು ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.‌

ವರದಿ ಪ್ರಕಾಶ ಬಿ ಕೆ..