ಪಾಲಿಕೆಯಲ್ಲಿ ಆಶ್ರಯ ಮನೆಗಳ ಕುರಿತು ಸಭೆ..

ಪಾಲಿಕೆಯಲ್ಲಿ ಆಶ್ರಯ ಮನೆಗಳ ಕುರಿತು ಸಭೆ..

ಮಂಗಳವಾರ : ದಿನಾಂಕ 14/07/2026 ರಂದು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ದಕ್ಷಿಣ ಭಾಗದ ಶಾಸಕರಾದ ಅಭಯ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕೊಳಚೆ ಮಂಡಳಿ ಹಾಗೂ ಆಶ್ರಯ ಮನೆಗಳ ಕುರಿತು ಸಭೆ ಜರುಗಿತು.

ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ.ಅವರು ಈ ಕುರಿತು ಮಾಹಿತಿ ನೀಡಿದರು. ಶಾಸಕರು ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು.

ಆಡಳಿತ ವಿಭಾಗದ ಉಪ ಆಯುಕ್ತ ಉದಯ ಕುಮಾರ ಟಿ.ಬಿ. ಹಾಗೂ ಇತರ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.