ಗ್ರಾಮಕ್ಕೆ ಸ್ಮಶಾನ ಭೂಮಿ ಹಾಗೂ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವಂತೆ ಮನವಿ..

ಗ್ರಾಮಕ್ಕೆ ಸ್ಮಶಾನ ಭೂಮಿ ಹಾಗೂ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವಂತೆ ಮನವಿ..

ರಾಜ್ಯಾಧ್ಯಕ್ಷ ಮಹೇಶ್ ಎಸ್ ಶೀಗಿಹಳ್ಳಿ ಆಗ್ರಹ…

ಬೆಳಗಾವಿ : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮಿಕಿ ರಾಜ್ಯಯುವ ಘಟಕ – ಕಾಳೆನಟ್ಟಿ ಗ್ರಾಮ ಘಟಕ ಪದಾಧಿಕಾರಿಗಳು ಹಾಗೂ ಅಂಕಲಗಿ ಗ್ರಾಮ ಘಟಕ ಪದಾಧಿಕಾರಿಗಳು ಹಲವು ನ್ಯಾಯಯುತ ಬೇಡಿಕೆಗಳ ವಿಚಾರವಾಗಿ ಮನವಿ ಸಲ್ಲಿಸಿದ್ದು, ಕಾಳೆನಟ್ಟಿ ಗ್ರಾಮಕ್ಕೆ ಸ್ಮಶಾನ ಭೂಮಿ, ವಾಲ್ಮೀಕಿ ಭವನ, ಕನ್ನಡ ಶಾಲಾ ಮಕ್ಕಳಿಗೆ ಆಟದ ಮೈದಾನಕ್ಕೆ ಜಾಗ ಮಂಜೂರು ಮಾಡುವಂತೆ ರಾಜ್ಯಾಧ್ಯಕ್ಷ ಮಹೇಶ ಸಿಗಿಹಳ್ಳಿ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಅಂಕಲಗಿ ಗ್ರಾಮದಲ್ಲಿ ಕಳೆದ 13 ವರ್ಷಗಳ ಹಿಂದೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡುವ ಕಾರ್ಯ ಪ್ರಾರಂಬಿಸಿ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ 15 ವರ್ಷಗಳು ಕಳೆದರೂ ಭವನದ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಮುಗಿದಿರುವುದಿಲ್ಲ ಅದಕ್ಕೆ ಸಂಪೂರ್ಣವಾಗಿ ಭವನದ ಕಟ್ಟಡ ಕಾಮಗಾರಿ ಮುಗಿಸುವಂತೆ ಅಥವಾ ಹೊಸದಾಗಿ ವಾಲ್ಮೀಕಿ ಭವನ ನಿರ್ಮಿಸುವಂತೆ ಒತ್ತಾಯಿಸಲಾಗಿದ್ದು
ಬೆಳಗಾವಿ ಜಿಲ್ಲಾಧಿಕಾರಿಗಳು ಬೆಳಗಾವಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ, ಬೆಳಗಾವಿ ಉಪ ವಿಭಾಗ ದಂಡಾಧಿಕಾರಿಗಳು ಬೆಳಗಾವಿ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳು, ಬೆಳಗಾವಿ ಕಾರ್ಯನಿರ್ವಾಹಕ ತಾಲೂಕ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಬೇಡಿಕೆ ಇಡೆರಿಸದಿದ್ದಲ್ಲಿ ಮುಂದಿನ ಬೃಹತ್ ಹೋರಾಟ ಕೈಗೊಳ್ಳುವುದು ಎಂದು ರಾಜ್ಯಾದ್ಯಕ್ಷರಾದ ಮಹೇಶ್ ಎಸ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಬದಲ್ಲಿ (ಬೆಳಗಾವಿ ತಾಲೂಕ ಅಧ್ಯಕ್ಷ ಮಂಗೇಶ್ ಚನ್ನಿಕುಪ್ಪಿ) ಮತ್ತು (ಬೆಳಗಾವಿ ಗ್ರಾಮೀಣ ಅದ್ಯಕ್ಷ ಲಕ್ಷ್ಮಣ ಬಾಗಡಿ ) (ಅಂಕಲಗಿ ಗ್ರಾಮ ಘಟಕ ಅಧ್ಯಕ್ಷ ಮಂಜು ಹೊಳ್ಳೆಪ್ಪಗೊಳ) ಅಂಕಲಗಿ ಗ್ರಾಮ ಘಟಕ ಪದಾದಿಕಾರಿಗಳು ಯುವಕರು ಮತ್ತು ಕಾಳೆನಟ್ಟಿ ಗ್ರಾಮದ ಪದಾಧಿಕಾರಿಗಳು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *