ಪುಣ್ಯ ಪುರುಷ ಗುರು ಮಡಿವಾಳೇಶ್ವರ ಗ್ರಂಥ ಲೋಕಾರ್ಪಣೆ..

ಪುಣ್ಯ ಪುರುಷ ಗುರು ಮಡಿವಾಳೇಶ್ವರ ಗ್ರಂಥ ಲೋಕಾರ್ಪಣೆ..

ಜನಕಲ್ಯಾಣಕ್ಕಾಗಿ ಗುರುಗಳು ಮಾಡಿದ ಪವಾಡಗಳ ದರ್ಶನದ ಪವಿತ್ರ ಗ್ರಂಥ..

ಹೊಸೂರನ್ನು ಪುಣ್ಯಭೂಮಿ ಆಗಿಸಿದ ಮಹಿಮಾ ಪುರುಷರು..

ಗಂಗಾಧರ ಮಹಾಸ್ವಾಮಿಗಳು, ಮಡಿವಾಳೇಶ್ವರ ಮಠದ ಪೀಠಾಧಿಪತಿಗಳು..

ಬೈಲಹೊಂಗಲ : ಗುರು ಮಡಿವಾಳೇಶ್ವರರು ಸಂಪತ್ತು, ಅಧಿಕಾರ, ಅಂತಸ್ತು ಯಾವುದನ್ನು ಬಯಸದೆ ವೈರಾಗ್ಯಮೂರ್ತಿಗಳಾಗಿ ಪವಾಡಗೈಯುತ್ತಾ ಹೊಸೂರ ಗ್ರಾಮದಲ್ಲಿ 11 ವರ್ಷಗಳ ಕಾಲ ಇದ್ದು ತಮ್ಮ ಕೈಯಾರೆ ಭಾವಿ ತೊಡಿ ಮಠ ಕಟ್ಟಿಸಿದ ಪುಣ್ಯಭೂಮಿ ಹೊಸೂರ ಗ್ರಾಮ ಎಂದು ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಹೊಸೂರ ಗ್ರಾಮದ ಮಡಿವಾಳೇಶ್ವರ ಮಠದಲ್ಲಿ ನಡೆದ ಮುರುಗೋಡು ನಾಡಿನ ಹೊನ್ನು ಹೊಸೂರಿನ ಪುಣ್ಯಪುರುಷ ಗುರು ಮಡಿವಾಳೇಶ್ವರ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ ಗುರು ಮಡಿವಾಳೇಶ್ವರರು ಯಾವುದನ್ನು ಬಯಸದೆ ಜನ ಕಲ್ಯಾಣಕ್ಕಾಗಿ ಜನಸಿ ಬಂದ ಅವಧೂತ ಮಹಿಮಾ ಪುರುಷರಾಗಿ ಅವರನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲ್ಪವೃಕ್ಷವಾಗಿದ್ದಾರೆ ಎಂದರು.

ಹೂಲಿ ಸಂಬಯ್ಯನವರ ಮಠದ ಪೂಜ್ಯ ಉಮೇಶಜ್ಜನವರು ಮಾತನಾಡಿ, ಅನೇಕ ಪವಾಡಗಳಿಂದ ಮನೆಮಾತಾಗಿರುವ ಗುರು ಮಡಿವಾಳೇಶ್ವರರು ಹೊಸೂರು ಗ್ರಾಮದಲ್ಲಿ ಮಾಡಿದ ಪವಾಡಗಳ ಹೊತ್ತಿಗೆ ಹೊರಗೆ ಬಂದಿರುವುದು ಶ್ಲಾಘನೀಯ ಎಂದರು

ಅಂಕಲಗಿ ಅಡಿವಿ ಸಿದ್ದೇಶ್ವರ ಮಠದ ಪೂಜ್ಯ ಅಮರಸಿದ್ದೇಶ್ವರ ಸ್ವಾಮಿಗಳು ಮತ್ತು ವಿರಕ್ತಮಠದ ಪ್ರಭು ನೀಲಕಂಠ ಸ್ವಾಮಿಗಳು ಮಾತನಾಡಿ, ಸಮಾಜದ ಸುಧಾರಣೆಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ ಮಡಿವಾಳೇಶ್ವರರು ಅಪಾರ ಜ್ಞಾನವಂತರು ತ್ರಿಕಾಲ ಜ್ಞಾನಿಗಳಾಗಿದ್ದು ಭವಿಷ್ಯತ್ತದ ಕಾಲಜ್ಞಾನಿಗಳಾಗಿದ್ದ ಇವರ ಮಹಿಮೆಗಳ ಗ್ರಂಥ ಹೊರ ಬಂದಿರುವದರಿಂದ ಭಕ್ತರಿಗೆ ಹೊಸ ಜ್ಞಾನ ಸಂಪಾದನೆಯ ಆಕರವಾಗಿದೆ ಎಂದರು.

ಮುಖ್ಯ ಅಥಿತಿಗಳಾದ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ್ ಮೊಗಬಸವ ಮತ್ತು ನ್ಯಾಯವಾದಿ ಎಫ್ ಎಸ್ ಸಿದ್ದನಗೌಡರ ಮಾತನಾಡಿ, ಗ್ರಾಮಕ್ಕೆ 12ನೇ ಶತಮಾನದ ಚನ್ನಬಸವಣ್ಣನವರ ಹಾಗೂ 18ನೇ ಶತಮಾನದ ಗುರು ಮಡಿವಾಳೇಶ್ವರ ಆಗಮನದಿಂದ ಗ್ರಾಮ ಇಂದಿಗೂ ಯಾವುದೇ ತೊಂದರೆ ಅನುಭವಿಸದೆ ಕಡುಕಟ್ಟ ಬರಗಾಲದಲ್ಲಿಯೂ ಬೆಳೆ ತೆಗೆದು ಜನರ ಸರಳ ಜೀವನಕ್ಕೆ ಸಹಕಾರಿಯಾದ ಏಕೈಕ ಗ್ರಾಮವಾಗಿದೆ ಎಂದರು

ಕಾರ್ಯಕ್ರಮದಲ್ಲಿ ಗರಗದ ಪೂಜ್ಯ ಆತ್ಮರಾಮ ಸ್ವಾಮೀಜಿಗಳು ಮಾಜಿ ತಾಪಂ ಸದಸ್ಯ ಜಗದೀಶ್ ಬುದಿಹಾಳ್ ನೈರುತ್ಯ ರೈಲ್ವೆ ಕನ್ನಡ ಬಳಗದ ಅಧ್ಯಕ್ಷ ರವಿಕುಮಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ ವೈ ಕೊಳ್ಳಿ ಗ್ರಂಥ ರಚನಾಕಾರ ಚೆನ್ನಬಸಪ್ಪ ಚೌಗುಲೆ ಮಾತನಾಡಿದರು.

ಕಾರ್ಯಕ್ರಮದ ಗ್ರಂಥ ರಚನಾಕಾರರನ್ನು ಗ್ರಂಥ ರಚನೆಗೆ ಸಹಕರಿಸಿದ ಮಹಿನಿಯರನ್ನು ಹಾಗೂ ದೇವಸ್ಥಾನಕ್ಕೆ ಸಹಾಯ ಮಾಡಿದವರನ್ನು ಸತ್ಕರಿಸಲಾಯಿತು ಕಾರ್ಯಕ್ರಮಕ್ಕಿಂತ ಮುಂಚೆ ನೂತನ ಗ್ರಂಥಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊಸೂರ, ಕಾರಿಮನಿ ಹಾರೂಗೊಪ್ಪ ಇಂಗಳಗಿ ಮಾಟೊಳ್ಳಿ,‌ ಮುರಗೋಡ, ವಕ್ಕುಂದ, ಕೊರವಿನಕೊಪ್ಪ ಹಾಗೂ ಇನ್ನೂ ಅನೇಕ ಗ್ರಾಮಗಳ ಭಜನಾ ಮಂಡಳಿಯಿಂದ ಹಾಗೂ ಸುಮಂಗಲಿಯರ ಆರತಿಯೊಂದಿಗೆ ಮೆರವಣಿಗೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶಂಕರಗೌಡ ಇಂಗಳಗಿ, ಸುಭಾಷ್ ಬೂದಿಹಾಳ, ಚೆನ್ನಪ್ಪ ಬಾಳೆಕುಂದರಗಿ, ಮಡಿವಾಳಪ್ಪ ಮುತವಾಡ, ದೇವೇಂದ್ರಪ್ಪ ಜಾದವ್, ಈಶ್ವರ್ ಬಡಿಗೇರ, ಗುರುರಾಜ ಕುಲಕರ್ಣಿ, ನಿಂಗಪ್ಪ ಅರೆರ, ಬಸವರಾಜ ವಿವೇಕಿ, ಪ್ರಕಾಶ ಹುರಕಡ್ಲಿ, ಮುದುಕಪ್ಪ ಬಡಿಗೇರ್, ಶಂಕರ ಹುರಕಡ್ಲಿ, ಶ್ರೀಶೈಲ ಬಾಳೇಕುಂದರಗಿ, ಮಂಜುನಾಥ‌ ಪೇಂಟೆದ, ದೇಮಪ್ಪ ಬೂದಿಹಾಳ, ಈರಣ್ಣ ಸಂಪಗಾವ, ಪರಮೇಶ್ವರ ತಟ್ಟಿಮನಿ, ಮಹದೇವಪ್ಪ ಕಮತಗಿ, ಆನೀಲ ಬಾಳೆಕುಂದರಗಿ, ಮಲ್ಲಿಕಾರ್ಜುನ ಬೋಳೆತ್ತಿನ, ಶಿವಪ್ಪ ಮುತವಾಡ, ಚನ್ನಪ್ಪ‌ ಚಿಕ್ಕೊಪ್ಪ, ಫಕೀರಪ್ಪ ಜಡಿ, ಮಹಾಂತೇಶ ಚಿಕ್ಕೊಪ್ಪ,‌ ಪುಂಡಲಿಕ ಹೊಸಮನಿ, ಮಡಿವಾಳಪ್ಪ ಬಾಳೆಕುಂದರಗಿ, ಗುರಶಾಂತಯ್ಯ ಹೀರೆಮಠ, ಮಡಿವಾಳಯ್ಯ ಗಣಾಚಾರಿ, ಸೇರಿದಂತೆ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಉಪನ್ಯಾಸಕ ಎಸ್ ಕೆ ಮಳ್ಳಿಕೇರಿ ಸ್ವಾಗತಿಸಿದರು, ಶಿಕ್ಷಕರಾದ ಈರಣ್ಣ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಜಾನನ ಸೂರ್ಯವಂಶಿ ಕಾರ್ಯಕ್ರಮವನ್ನು ನಿರೂಪಿಸಿದರು ಮಹಾಂತೇಶ ಕಮತಗಿ ವಂದಿಸಿದರು.

Leave a Reply

Your email address will not be published. Required fields are marked *