ಕರವೇ ಚಿಕ್ಕೋಡಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ..

ಕರವೇ ಚಿಕ್ಕೋಡಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ..

ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕಾ ಘಟಕದ ಅಧ್ಯಕ್ಷರಾದ ಸಂಜು ಬಡಿಗೇರರವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸರಕಾರಿ ಪ್ರವಾಸ ಮಂದಿರದಲ್ಲಿ ನಡೆದ ಚಿಕ್ಕೋಡಿ ತಾಲೂಕಾ ಮಟ್ಟದ ಸಭೆಯಲಿ ಚಿಕ್ಕೋಡಿ ನಗರ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತ್ತು.

ಚಿಕ್ಕೋಡಿ ನಗರ ಅಧ್ಯಕ್ಷರಾಗಿ ಉದಯ ಠಗರೆ ಉಪಾಧ್ಯಕ್ಷರಾಗಿ ರವಿ ವ ಧರ್ಜಿ, ಗೌರವಾಧ್ಯಕ್ಷರಾಗಿ ಮುಸ್ತಾಕಲಿ ಸೈಯದ, ಖಜಾಂಜಚಿಯಾಗಿ ಇಲಿಯಾಸ್ ಮುಲ್ಲಾ ಇವರನ್ನು ಆಯ್ಕೆ ಮಾಡಿ ಕನ್ನಡ ನಾಡು-ನುಡಿ ರಕ್ಷಣೆಯ ಮಹತ್ತರ ಜವಾಬ್ದಾರಿ ನೀಡಿ, ಶ್ರೀಯುತ್ತ ಸಂಜು ಬಡಿಗೇರ ಅವರು ಸಭೆಯನ್ನು ಹಾಗೂ ನೂತನ ಪಧಾದಿಕಾರಿಗಳನ್ನು ಉದ್ದೇಶಿಸಿ ಕನ್ನಡ ನಾಡು-ನುಡಿ ಜಲ-ನೆಲ ಸಂಸ್ಕ್ರತಿ ಕರುನಾಡಿನ ಮಹಿಳೆ ಮಕ್ಕಳು ಕಾರ್ಮಿಕ ಹಾಗೂ ಜನ ಸಾಮಾನ್ಯರ ಹಕ್ಕಿಗಾಗಿ ಸಲುವಾಗಿ ತಾವೆಲ್ಲರೂ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕೆಂದು ಹೇಳಿದರು, ಹಾಗೆಯೆ ಅಲ್ಲಿ ಉಸ್ಥಿತರಿದ್ದ ಮತ್ತೊರವ ತಾಲೂಕಾ ಕರವೇ ಮುಖಂಡರಾದ ಮೋಹನ್ ಪಾಟೀಲ ಮಾತನಾಡುತ್ತಾ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದಲ್ಲಿ ಕಳೆದ 25 ವರ್ಷದಿಂದ ಪಕ್ಷತೀತವಾಗಿ ಜಾತ್ಯಾತೀತವಾಗಿ ಧರ್ಮಾತಿತವಾಗಿ ರಾಜ್ಯದಲ್ಲಿ ಕರ್ನಾಟಕ ಸಮಗ್ರ ಸಂಸ್ಕ್ರತಿಯ ಸರ್ವಾಂಗೀಣ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ ಹಾಗಾಗಿ ತಾವುಗಳು ಕೂಡ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಗಟ್ಟಿಗೋಳಿಸಿ ಜನ ಸಾಮಾನ್ಯರ ಕೆಲಸ ಮಾಡಬೇಕೆಂದು ಹೇಳಿದರು,

ಈ ಸಂದರ್ಭದಲ್ಲಿ ರಾಜೇಂದ್ರ ಕಾಂಬಳೆ, ರುದ್ರೇಯ್ಯಪ ಹಿರೇಮಠ, ಅಮುಲ ನಾವಿ, ಸುರೇಶ ಖದ್ದಿ, ರಫೀಕ್ ಪಠಾಣ, ಅಪ್ಪು ಮಾಳಿ, ಮೆಹಬುಬ ಜಮಾದಾರ, ದುಂಡಪ್ಪ ಬಡಿಗೇರ, ರಫೀಕ್ ದಡ್ಡಿ, ಲಕ್ಶ್ಮಣ ಹವಾಲ್ದಾರ್, ಬಾಬಾಸಾಬ್ ನಾಯಿಕವಾಡಿ, ಅನಿಲ ಶಿರಾಗಂವೆ, ವಿಜಯ ಠಗರ, ಸುನಿಲ್ ಹುದ್ದಾರ ಹಾಗೂ ಇತರೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *