ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಶ್ರೀ ಮಧ್ವಾಚಾರ್ಯರ ಜಯಂತಿ ಉತ್ಸವ..

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಶ್ರೀ ಮಧ್ವಾಚಾರ್ಯರ ಜಯಂತಿ ಉತ್ಸವ..

ನಗರ ಸೇವಕ ಜಯತೀರ್ಥ ಸವದತ್ತಿ..

ಬೆಳಗಾವಿ : ಕರ್ನಾಟಕ ಸರ್ಕಾರವು ಮಧ್ವ ಸಮಾಜದ ವಿನಂತಿಯ ಮೇರೆಗೆ ಶ್ರೀ ಮದ್ವಾಚಾರ್ಯರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಆದೇಶವನ್ನು ಹೊರಡಿಸಿದ್ದು ಮಧ್ವ ಸಮಾಜಕ್ಕೆ ಅತ್ಯಂತ ಸಂತೋಷದ ವಿಷಯ,
ಇದರ ಅಂಗವಾಗಿ ದಿನಾಂಕ 21 ಬುಧವಾರದಂದು ಭವ್ಯ ಶೋಭಾ ಯಾತ್ರೆ ಹಾಗೂ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಾಜದ ಪ್ರಮುಖರು ಹಾಗೂ ಪಾಲಿಕೆಯ ನಗರ ಸೇವಕರಾದ ಜಯತೀರ್ಥ ಸವದತ್ತಿ ಅವರು ತಿಳಿಸಿದ್ದಾರೆ.

ಸೋಮವಾರ ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ, ಬುಧವಾರ ಬೆಳಿಗ್ಗೆ ಸರಿಯಾಗಿ 9:30 ಘಂಟೇಗೆ ಆರ್ ಟಿ ಓ ವೃತ್ತದಿಂದ ಕುಮಾರ ಗಂಧರ್ವ ಕಲಾಮಂದಿರದವರೆಗೆ ಶೋಭಾ ಯಾತ್ರೆ ಜರುಗುವದು,
11 ರಿಂದ 1 ವರೆಗೆ ವೇದಿಕೆ ಕಾರ್ಯಕ್ರಮದಲ್ಲಿ
ಸ್ವಾಗತ, ಪ್ರವಚನ, ಸಂಗೀತ ಕಾರ್ಯಕ್ರಮ ಶ್ರೀ ಪ್ರಸನ್ನ ಗುಡಿ ಅವರಿಂದ, ಭಜನಾ ಮಂಡಳಿಗಳಿಂದ ಮದ್ಧನಾಮ ಹಾಗೂ ಸಮಾರೋಪ ಸಮಾರಂಭ ನಂತರ ಎಲ್ಲರಿಗೂ ಉಪಹಾರದ ವ್ಯವಸ್ಥೆ ಇರುತ್ತದೆ.

ಎಲ್ಲ ಪುರುಷರು ಶುಭ್ರವಾದ ಸಮವಸ್ತ್ರದೊಂದಿಗೆ ಕೊರಳಲ್ಲಿ ಕೇಸರಿ ಶಾಲನ್ನು ಹಾಕಿಕೊಂಡು ಬರಬೇಕು,
ಭಜನಾ ಮಂಡಳಿಗಳು ಹಾಗೂ ಮಹಿಳೆಯರು ಹಳದಿ ಕೇಸರಿ ಸೀರೆಯನ್ನು ಉಟ್ಟುಕೊಂಡು ಜೊತೆಗೆ ತಾಳ ತಮಟೆಯನ್ನು ತೆಗೆದುಕೊಂಡು ಬರಬಹುದು,
ಸಮಸ್ತ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *