ಮಹಾಪೌರ ಪ್ರೀತಿ ಕಾಮಕರ ಅವರಿಗೆ ಶುಭಾಶಯ ತಿಳಿಸಿದ ಕಂದಾಯ ಶಾಖೆ ಸಿಬ್ಬಂದಿ.
ಪಾಲಿಕೆಯ ನೌಕರರ ಪರವಾಗಿ ನಿಂತವರು ಮಹಾಪೌರರು.
ತಮ್ಮ ಮೃದು ಹಾಗೂ ಚಾಣಾಕ್ಷ ಸ್ವಭಾವದಿಂದ ಎಂತಾ ದೊಡ್ಡ ಸಮಸ್ಯೆಗಳನ್ನು ಪರಿಹರಿಸಿದ್ದಾರೆ..
ಸಿಬ್ಬಂದಿಗಳ ಅಭಿಮತ..
ಬೆಳಗಾವಿ : ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ವಿನಾಯಕ ಕಾಮಕರ ಅವರ ಜನ್ಮದಿನದ ಅಂಗವಾಗಿ ಇಂದು ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಮೇಯರ್ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿ, ಅವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಸೋಮವಾರ ಪಾಲಿಕೆಯ ಮಹಾಪೌರರ ಕೊಠಡಿಯಲ್ಲಿ ಹೂಗುಚ್ಚ ನೀಡಿ ಮೇಯರ್ ಅವರಿಗೆ ಜನ್ಮದಿನದ ಶುಭ ಕೋರಿದ್ದು, ಈ ವೇಳೆ ಉತ್ತರದ ವಲಯ ಆಯುಕ್ತರಾದ ಅನಿಲ್ ಬೋರಗಾವಿ ಮಾತನಾಡಿ, ನೌಕರರಿಗೆ ಕೆಲಸದ ಒತ್ತಡ ತೊಂದರೆ ಆದಾಗ ಮೊದಲು ಬಂದು ನೀಲ್ಲುವದು ನಮ್ಮ ಮೇಯರ್ ಅವರು, ಒಂದು ಗಾಡಿಗೆ ಎರಡು ಚಕ್ರಗಳಿದ್ದಂತೆ, ಜನಪ್ರತಿನಿದಿಗಳು ಹಾಗೂ ನಾವು (ಸಿಬ್ಬಂದಿಗಳು) ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಇನ್ನು ಮುಂದೆ ಕೂಡಾ ಮಹಾಪೌರರ ಮಾರ್ಗದರ್ಶನದಲ್ಲಿ ನಾವು ಒಗ್ಗಟ್ಟಾಗಿ, ಪಾಲಿಕೆಗೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ, ದೇವರು ಅವರಿಗೆ ಮತ್ತಷ್ಟು ಆರೋಗ್ಯ ಐಶ್ವರ್ಯ ಆಯುಷ್ಯ ನೀಡಿ ಇನ್ನಷ್ಟು ಒಳ್ಳೆಯ ಕಾರ್ಯ ಮಾಡಲು ಶಕ್ತಿ ನೀಡಲಿ ಎಂದರು.
ಇನ್ನು ಕಂದಾಯ ನೀರಿಕ್ಷಕ ಸಂತೋಷ್ ಒಸಿ ಮಾತನಾಡಿ, ನಮ್ಮ ನೌಕರರ ಸಂಘದ ವತಿಯಿಂದ ಮೇಯರ ಅವರಿಗೆ ಜನ್ಮ ದಿನದ ಶುಭಾಶಯಗಳು, ಮೇಡಂ ಅವರು ಮೇಯರ್ ಆದಾಗಿನಿಂದ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾಗಿದ್ದಾವೆ, ತಮ್ಮ ಚಾನಾಕ್ಷ ಹಾಗೂ ಮೃದು ಸ್ವಭಾವದಿಂದ ಅವುಗಳನ್ನು ಪರಿಹರಿಸಿದ್ದಾರೆ, ಎಲ್ಲಾ ವಿಭಾಗದ ಸಿಬ್ಬಂದಿಗಳೊಂದಿಗೆ ಅವರು ಸೌಜನ್ಯದಿಂದ ವರ್ತಿಸಿ, ಉತ್ತಮ ಭಾಂದವ್ಯ ಹೊಂದಿದ್ದಾರೆ, ಮುಂದೆಯೂ ಅವರ ಸಲಹೆ ಸೂಚನೆ ಮಾರ್ಗದರ್ಶನ ನಮಗೆ ದೊರಕಲಿ ಎಂದರು.
ಇನ್ನು ನಗರ ಸೇವಕ ಜಯತೀರ್ಥ ಸವದತ್ತಿ ಅವರು ಮಾತನಾಡಿ, ಪ್ರೀತಿ ಮೇಡಮ್ ಅವರಿಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿದ್ದು ಅವರ ಸೌಭಾಗ್ಯ, ಅದೇ ರೀತಿ ಅವರ ಸ್ವಭಾವ ಕೂಡಾ ಅಷ್ಟೇ ಮೃದು ಇದೆ, ಎಲ್ಲರೊಂದಿಗೆ ಅವರು ಸೌಜನ್ಯದಿಂದ ವರ್ತಿಸುವದು ಇಡೀ ಪಾಲಿಕೆಗೆ ತಿಳಿದಿದೆ, ಅದಕ್ಕಾಗಿಯೇ ಇಂದು ಕಂದಾಯ ವಿಭಾಗದ ಸಿಬ್ಬಂದಿಗಳು ಅವರಿಗೆ ಗೌರವಪೂರ್ವಕ ಶುಭಾಶಯ ತಿಳಿಸಲು ಬಂದಿದ್ದಾರೆ, ಇನ್ನು ಅವರಿಗೆ ಮತ್ತಷ್ಟು ಉತ್ತಮ ಸಾಧನೆ ಮಾಡುವ ಶಕ್ತಿ ಆ ದೇವರು ಅವರಿಗೆ ನೀಡಲಿ ಎಂದು ಕೇಳುಕೊಳ್ಳುತ್ತೇನೆ ಎಂದರು.
ಈ ವೇಳೆ ಪಾಲಿಕೆಯ ನೌಕರರ ಸಂಘದ ಪಧಾದಿಕಾರಿಗಳಾದ ಯಲ್ಲೇಶ್ ಬಚ್ಚಲಪುರಿ, ಮೇತ್ರಿ, ಅನುರಾಧಾ ತಪಸಿ, ಸಂಜು ಪಾಟೀಲ, ಸಾಗರ ಕಾಂಬ್ಳೆ, ಭರತ ಕೊಲ್ಕಾರ, ಶ್ರೀಶೈಲ್ ಕುಲಕರ್ಣಿ, ಲಕ್ಷ್ಮಣ ಕಲ್ಪತ್ರಿ, ಮತ್ತಿತರ ಸಿಬ್ಬಂದಿಗಳು ಇದ್ದರು.
ವರದಿ ಪ್ರಕಾಶ್ ಬಿ ಕೆ.