ಕೆಲ ಅಭಿವೃದ್ಧಿ ಕಾರ್ಯಗಳಿಗೆ ಬೇರೆ ಇಲಾಖೆಗಳಿಂದಲೂ ಅನುದಾನ ಬರುತ್ತೆ..

ಕೆಲ ಅಭಿವೃದ್ಧಿ ಕಾರ್ಯಗಳಿಗೆ ಬೇರೆ ಇಲಾಖೆಗಳಿಂದಲೂ ಅನುದಾನ ಬರುತ್ತೆ..

ಎಲ್ಲಾ ಪಾಲಿಕೆಯ ಅನುದಾನದಲ್ಲೇ ಮಾಡುವಂತಿಲ್ಲ..

ಲಕ್ಷ್ಮಿ ನಿಪ್ಪಾಣಿಕರ, ಪಾಲಿಕೆಯ ಉಪ ಆಯುಕ್ತರು, ಅಭಿವೃದ್ಧಿ ವಿಭಾಗ..

ಬೆಳಗಾವಿ : ಪಾಲಿಕೆಯ ಮೂಲ ಆದಾಯ ಹಾಗೂ ಸರ್ಕಾರಗಳಿಂದ ಬರುವ ಅಲ್ಪಸ್ವಲ್ಪ ಅನುದಾನದಲ್ಲಿ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಸಲು ಅಸಾಧ್ಯ, ನಗರದಲ್ಲಿರುವ ಇತರ ಇಲಾಖೆಗಳಿಂದಲೂ ನಾವು ಪಾಲಿಕೆಗೆ ಅನುದಾನ ಪಡೆದು ಕೆಲಸ ಮಾಡಬಹುದು, ಪಾಲಿಕೆಯ ಅನುದಾನವನ್ನೇ ಎಷ್ಟು ಅಂತಾ ಬಳಕೆ ಮಾಡುತ್ತೀರಿ? ಅಂತಾ ಪಾಲಿಕೆಯ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ನಗರ ಸೇವಕರಿಗೆ ಪ್ರಶ್ನೆ ಮಾಡಿದ್ದರೆ..

ಬುಧವಾರ ದಿನಾಂಕ 15/04/2026ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾಭವನದಲ್ಲಿ ಜರುಗಿದ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಉಪ ಆಯುಕ್ತರು, ವಾರ್ಡ್ ಸಂಖ್ಯೆ 51ರಲ್ಲಿ ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಮಾಡುವ ಪ್ರಸ್ತಾವಣೆಯನ್ನು ನಗರ ಸೇವಕರೊಬ್ಬರು ಇಟ್ಟಾಗ, ಅದರ ಅಂದಾಜು ವೆಚ್ಚ 1ಕೋಟಿ ವರೆಗೆ ಆಗುತ್ತದೆ ಎಂದು ಸಂಬಂದಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂತಹ ವೇಚ್ಚವನ್ನು ವಾರ್ಡ್ ಬಜೆಟ್ಟಿನಲ್ಲಿ ಹಾಕಲು ಬರುವದಿಲ್ಲ ಇದಕ್ಕೆ ಸಂನಧಪಟ್ಟ ಇಲಾಖೆಯಿಂದ ಅನುದಾನ ಪಡೆಯಲು ಮಾರ್ಗವಿದೆ ಎಂದರು.

ಪಾಲಿಕೆಯ ವ್ಯಾಪ್ತಿಯಲ್ಲಿ ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ನಾವು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಮುಖೇನ ವ್ಯವಹರಿಸಿ ಅಲ್ಲಿಂದ ಅನುದಾನ ಪಡೆದು, ಇಂತಹ ಬ್ರಹತ್ ಮೊತ್ತದ ಕಾರ್ಯಗಳನ್ನು ಮಾಡಬಹುದು ಎಂದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ನಾವು ಇತರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಂಬಂಧಪಟ್ಟ ಇಲಾಖೆಗಳಿಂದ ಅನುದಾನ ಪಡೆಯುವ ಅವಕಾಶ ನಮ್ಮ ಪಾಲಿಕೆಗೆ ಇದೆ, ಅದನ್ನು ನಾವು ವ್ಯವಸ್ಥಿತವಾಗಿ ಮಾಡಬೇಕು ಅಷ್ಟೇ ಎಂದು ಸಭೆಯಲ್ಲಿ ತಿಳಿಸಿದ್ದಾರೆ.

ಇನ್ನು ಪಾಲಿಕೆಯ ವಿದ್ಯುತ್ ವಿಭಾಗದಲ್ಲಿ ಬಳಕೆಯಾಗದೆ ಐದು ಕೋಟಿ ಅನುದಾನ ಮತ್ತೆ ಸರ್ಕಾರಕ್ಕೆ ಹೋಗಿರುವದರಿಂದ ಅಸಮಾಧಾನಗೊಂಡ ಮಹಾಪೌರ ಹಾಗೂ ನಗರ ಸೇವಕರು, ಉಳಿದ ಅನುದಾನವನ್ನು ಬೇರೆ ಕಡೆಗೆ ಬಳಸಬಹುದಿತ್ತು, ಇನ್ನು ಹೆಚ್ಚಿನ ದ್ವೀಪಗಳನ್ನು ಅಳವಡಿಸಬೇಕಿತ್ತು ಎಂದು ವಿಭಾಗದ ಮುಖ್ಯ ಅಧಿಕಾರಿ ದೇಶಪಾಂಡೆ ಅವರಿಂದ ವಿವಿಧ ರೀತಿಯಲ್ಲಿ ಮಾಹಿತಿ ಪಡೆದರೂ ತೃಪ್ತರಾಗದೆ, ಕೊನೆಗೆ ವಿದ್ಯುತ್ ವಿಭಾಗದಲ್ಲಿ ಏನೇ ಮಾರ್ಗಸೂಚಿ ಇದ್ದರೂ ಮಹಾಪೌರ ಹಾಗೂ ಉಪ ಮಹಾಪೌರರ ತರಬೇಕು ಎಂಬ ಸೂಚನೆ ನೀಡಿದರು.

ಇನ್ನು ಪಾಲಿಕೆ ಎದುರಿನ ಆನೆಕ್ಸ್ ಎಂಬ ಹೊಸ ಕಟ್ಟಡ ಕಾಮಗಾರಿ 2018-19ರಲ್ಲಿ ಆಗಿದ್ದು ಕಾರಣಾಂತರಗಳಿಂದ ಗುತ್ತಿಗೆದಾರನ ಬಿಲ್ ಬಾಕಿ ಇದ್ದಿದ್ದು ಅದನ್ನು ಅನುಮೋದಿಸಲು ಅಧಿಕಾರಿಗಳು ಬಹಳ ಮನವಿ ಮಾಡಿದಾಗ, ಸುದೀರ್ಘ ಚರ್ಚೆಯ ನಂತರ ಆ ವಿಷಯವನ್ನು ಸಭೆಯಲ್ಲಿ ಅನುಮೋದಿಸಲಾಯಿತು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ವಿಭಾಗದಿಂದ ಅನೇಕ ಕಾರ್ಯಗಳಿಗೆ ಟೆಂಡರ್ ಕರೆದಿದ್ದು ಅದರಲ್ಲಿ ಕಾಲುವೆ ಸ್ವಚ್ಛ ಹಾಗೂ ಒಳಚರಂಡಿ ಕಾಮಗಾರಿ ಕಾರ್ಯಗಳಿಗೆ ಮಾತ್ರ ಅನುಮೋದನೆ ನೀಡಲಾಯಿತು.

ಇನ್ನು ಉದ್ಯಮಬಾಗ ಕೈಗಾರಿಕಾ ಪ್ರದೇಶಕ್ಕೆ ಬೀದಿ ದ್ವೀಪ ಅಳವಡಿಕೆ, ಕಣಬರಗಿ ಪ್ರದೇಶದ ಅಭಿವೃದ್ಧಿಯ ವಿಷಯ ಹಾಗೂ ನಗರ ಸೇವಕ ಶಾಹಿದಖಾನ ಪಠಾನ ಅವರ ವಿಷಯಗಳನ್ನು ಕೈಬಿಟ್ಟು ಮುಂದಿನ ಸಭೆಯಲ್ಲಿ ತಗೆದುಕೊಳ್ಳೋಣ ಎಂದು ಸಭೆ ಹೇಳಿದಾಗ, ಶಾಹಿದ ಖಾನ ಪಠಾನ ಅವರು ಸಭೆ ಹಾಗೂ ಆಡಳಿತ ಪಕ್ಷದ ಸದಸ್ಯರ ವಿರುದ್ಧ ತಿರುಗಿ ಬಿದ್ದು, ಕೆಲಸ ಮಾಡುವದರಲ್ಲಿ ಬೇದಬಾವ ಏಕೆ, ವಿರೋಧ ಪಕ್ಷದವರ ಕೆಲಸ ನೀವು ಯಾವುದು ಮಾಡಿದ್ದೀರಿ? ಕೇವಲ ನಿಮ್ಮ ಕೆಲಸಗಳನ್ನೇ ಪಾಸ್ ಮಾಡಿಕೊಂಡು ಹೋದರೆ ಹೇಗೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸ್ಥಾಯಿ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ಮಾಧವಿ ಸಾರಂಗ ರಾಘೋಚೆ, ಮಹಾಪೌರರು, ಉಪ ಮಹಾಪೌರರು, ಆಡಳಿತ ಪಕ್ಷದ ನಾಯಕರು, ಸಮಿತಿಯ ಸದಸ್ಯರು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *