ಪಾಲಿಕೆ ಸಿಬ್ಬಂದಿಯ ವೇತನವನ್ನು ಎಸ್ಎಫ್ಸಿ ಅನುದಾನದಲ್ಲೇ ಭರಿಸಲಿ..

ಪಾಲಿಕೆ ಸಿಬ್ಬಂದಿಯ ವೇತನವನ್ನು ಎಸ್ಎಫ್ಸಿ ಅನುದಾನದಲ್ಲೇ ಭರಿಸಲಿ..

ಪಾಲಿಕೆಗೆ ಸಿಬ್ಬಂದಿಯ ವೇತನದ (ಶೇ20 ರಷ್ಟು) ಹೊರೆ ಆಗದಿರಲಿ..

ನಗರ ಸೇವಕರಿಂದ ಜಿಲ್ಲಾಧಿಕಾರಿಗಳಿಗೆ ಮನವಿ..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಬೇಡಿಕೆಗಾಗಿ ಹಲವು ಬಾರಿ ಮನವಿ ಮಾಡಿದ್ದರಿಂದ ಸರಕಾರ ಎಸ್ಎಫ್ ಸಿ ಅನುದಾನದಲ್ಲಿ ಶೇಕಡಾ 20ರಷ್ಟು ಕಡಿತಗೊಳಿಸಿ, ಅದನ್ನು ಪಾಲಿಕೆಯ ನಿಧಿಯಿಂದ ಭರಿಸಲು ತಿಳಿಸಿರುವದು ಪಾಲಿಕೆಗೆ ಹೊರೆಯಾಗಿದೆ, ಸಿಬ್ಬಂದಿಗಳ ಪೂರ್ಣ ವೇತನವನ್ನು ರಾಜ್ಯ ಹಣಕಾಸು ಆಯೋಗದ ಅನುದಾನದಿಂದಲೇ ನೀಡುವಂತೆ ಆಗಬೇಕು ಎಂದು ಪಾಲಿಕೆಯ ಚುನಾಯಿತ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಶುಕ್ರವಾರ ದಿನಾಂಕ 17/04/2026 ರಂದು ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ನಗರ ಸೇವಕರ ತಂಡ, ಸದ್ಯ ಏಳನೇ ವೇತನ ಆಯೋಗದ ಪ್ರಕಾರ ಸಂಬಳ ಪಡೆಯುವ ಸಿಬ್ಬಂದಿಯ ವೇತನದ ಹೆಚ್ಚಳದ ಮೊತ್ತವನ್ನು ಭರಿಸುವದು ಹೊರೆ ಆಗುತ್ತದೆ, ಚಳಿಗಾಲ ಅಧಿವೇಶನಕ್ಕಾಗಿ, ನಗರ ಸೌಂದರ್ಯಕ್ಕಾಗಿ ಪಾಲಿಕೆಯಿಂದಲೇ ಖರ್ಚುಗುತ್ತದೆ, ಗಣೇಶ ಚತುರ್ಥಿ ಆಚರಣೆ ಹಾಗೂ ವಿಸರ್ಜನೆಗಾಗಿ ಆಗುವ ವೆಚ್ಚವು ಪಾಲಿಕೆಯೇ ಭರಿಸುತ್ತದೆ.

ಕರ್ನಾಟಕ ರಾಜ್ಯೋತ್ಸವ, ಅಂಬೇಡ್ಕರ ಜಯಂತಿ, ಬಸವ ಜಯಂತಿ, ಶಿವ ಜಯಂತಿ, ರಂಜಾನ ಹೀಗೆ ಧಾರ್ಮಿಕ ಹಬ್ಬಗಳಲ್ಲಿ ಆಗುವ ಖರ್ಚು ಹಾಗೂ ನಿರ್ವಹಣೆಯನ್ನು ಪಾಲಿಕೆಯೇ ಮಾಡಬೇಕಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ಬರುವ, ರಾಜ್ಯ ಹಣಕಾಸು ಆಯೋಗದ ವೇತನ ಅನುದಾನದಲ್ಲಿ ಶೇಕಡಾ 20ರಷ್ಟು ಖಡಿತ ಆಗಿ ಬರುತ್ತಿದೆ, ಆದ್ದರಿಂದ ಬೆಳಗಾವಿ ಪಾಲಿಕೆಯಿಂದ ವೇತನ ಭರಿಸಲು ಹೊರೆ ಆಗುತ್ತಿದೆ, ಕಾರಣ ಸದರಿ ವಿಷಯದ ಬಗ್ಗೆ ಅನುದಾನ ಕಡಿತಗೊಳಿಸದೇ, ಪೂರ್ತಿ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಹಾಪೌರರಾದ ಪ್ರೀತಿ ಕಾಮಕರ, ಉಪ ಮಹಾಪೌರರಾದ ಹನಮಂತ ಕೊಂಗಾಲಿ, ಮಾಜಿ ಉಪ ಮಹಾಪೌರರಾದ ಆನಂದ ಚೌಹಾನ, ನಗರ ಸೇವಕರಾದ ರಾಜಶೇಖರ ದೋಣಿ, ಗಿರೀಶ್ ದೊಂಗಡಿ, ಸಂದೀಪ ಜಿರಾಗ್ಯಾಳ, ನಂದಕುಮಾರ ಮೀರಜಕಾರ, ನೀತಿನ ಜಾಧವ, ಶ್ರೇಯಸ ನಾಕಾಡಿ, ಜಯಂತ ಜಾಧವ, ಶ್ರೀಶೈಲ, ಮಾಜಿ ಉಪಮೇಯರ ವೀಣಾ ಜೋಶಿ, ಸಾರಿಕಾ ಪಾಟೀಲ್, ವೀಣಾ ವಿಜಾಪುರೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *