ಗಣತಿ ಕಾರ್ಯದಲ್ಲಿ ಮಾದರಿಯಾದ ಪಾಲಿಕೆ ಆಯುಕ್ತರು..
ಆಯುಕ್ತರಿಂದ ಈಗಾಗಲೇ ಮಾಡಿರುವ ಸ್ವಯಂ ನೋಂದಣಿಯ ಮಾಹಿತಿ ನೀಡಿಕೆ
ಬೇಳಗಾವಿ : ಏಪ್ರಿಲ್ 16ರಿಂದ ಬೆಳಗಾವಿ ನಗರದಾದ್ಯಂತ ಭಾರತ ಜನಗಣತಿ – 2027ರ ಪ್ರಕ್ರಿಯೆ ಆರಂಭ ಆಗಿದ್ದು, ಪ್ರಥಮ ಹಂತವಾಗಿ ಮನೆಗಳ ಗಣತಿ ನಡೆದಿದ್ದು, ಗಣತಿದಾರರು ಸುಡುಬಿಸಿಲೆನ್ನದೇ ಪ್ರತಿನಿತ್ಯ ಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ, ಬೆಳಗಾವಿ ಪಾಲಿಕೆಯ ಸಿಬ್ಬಂದಿಗಳು ಕೂಡಾ ಮೇಲ್ವಿಚಾರಕರಾಗಿ ಹಾಗೂ ಚಾರ್ಜ್ ಅಧಿಕಾರಿಗಳಾಗಿ ತಮ್ಮ ಜವಾಬ್ದಾರಿಯುತ ಕಾರ್ಯವನ್ನು ಮಾಡುತ್ತಿರುವಾಗ, ಪಾಲಿಕೆಯ ಆಯುಕ್ತರಾದ ಕಾರ್ತೀಕ ಎಂ ಅವರು ಗಣತಿ ಕಾರ್ಯದಲ್ಲಿ ಮಾದರಿಯತೆಯನ್ನು ಮೆರೆದು ಇತರರಿಗೆ ಸ್ಫೂರ್ತಿಯಾಗಿದ್ದಾರೆ..
ಹೌದು, ಇಂದು ಶನಿವಾರ ಗಣತಿದಾರರು ತಮ್ಮ ಗಣತಿ ಕಾರ್ಯಕ್ಕಾಗಿ ಪಾಲಿಕೆಯ ಆಯುಕ್ತರಾದ ಕಾರ್ತಿಕ್ ಎಂ ಅವರ ನಿವಾಸಕ್ಕೆ ಬೇಟಿ ನೀಡಿದಾಗ, ಗಣತಿ ಕಾರ್ಯದಲ್ಲಿ ಈಗಾಗಲೇ ತಮ್ಮ ಜವಾಬ್ದಾರಿ ನಿರ್ವಹಿಸಿದ ಆಯುಕ್ತರು, ಸ್ವಯಂ ನೋಂದಣಿ (ಗಣತಿ) ಮಾಡಿದ್ದು, ಗಣತಿದಾರರಿಗೆ ಈಗಾಗಲೇ ಸ್ವಯಂ ನೋಂದಣಿ ಮಾಡಿರುವ ಮಾಹಿತಿಯನ್ನು ನೀಡಿದ್ದಾರೆ. ಇದರಿಂದ ಗಣತಿದಾರರ ಕೆಲಸ ಹಗುರವಾಗಿ ಅವರೂ ಸಂತಸವಾಗಿದ್ದಾರೆ.
ಆಯುಕ್ತರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು ಸರ್ಕಾರಿ ಸಿಬ್ಬಂದಿಗಳಾಗಲಿ, ಸಾರ್ವಜನಿಕರಾಗಲಿ ಎಲ್ಲರೂ ಕೂಡಾ ತಮ್ಮಗಣತಿಯ ಸ್ವಯಂ ನೋಂದಣಿ ಮಾಡಬೇಕು, ಇಲ್ಲವಾದಲ್ಲಿ ಗಣತಿದಾರರು ಮನೆಗೆ ಬಂದಾಗ ಸಂಪೂರ್ಣ ಮಾಹಿತಿ ಒದಗಿಸಿ, ದೇಶದ ಒಳಿತಿಗಾಗಿ ನಡೆಯುವ ಈ ಗಣತಿ ಕಾರ್ಯ ಯಶಸ್ವಿ ಆಗಲು ಸಹಕರಿಸಬೇಕು ಎಂಬ ಉತ್ತಮ ಸಂದೇಶವನ್ನು ಸಾರಿದ್ದಾರೆ.
ಈ ಹಿಂದೆಯೂ ಕೂಡಾ ಮಹಾನಗರ ಪಾಲಿಕೆಯಿಂದ ನಗರ ವ್ಯಾಪ್ತಿಯಲ್ಲಿ ಗಣತಿದಾರರಿಗೆ ನೀಡುವ ವಿಶೇಷ ತರಬೇತಿ ಕಾರ್ಯದ ಕೇಂದ್ರಕ್ಕೆ ಬೇಟಿ ನೀಡಿ, ಪರಿಶೀಲನೆ ಮಾಡಿ, ಉತ್ತಮ ಹಾಗೂ ಪರಿಣಾಮಕಾರಿ ತರಬೇತಿ ನೀಡುವಂತೆ ಸೂಚನೆ ನೀಡಿದ್ದು, ಗಣತಿದಾರರಿಗೆ ತಮ್ಮ ಗಣತಿ ಕಾರ್ಯದಲ್ಲಿ ಆತ್ಮವಿಶ್ವಾಸ ಮೂಡಿಸುವ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದನ್ನು ಇಲ್ಲಿ ಸ್ಮರಿಸಬಹುದು..
ವರದಿ ಪ್ರಕಾಶ್ ಬಿ ಕೆ..