ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಜಯಿಯಾಗಲಿ..

ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಜಯಿಯಾಗಲಿ..

ಜಿಲ್ಲಾ ಕರವೇ ಘಟಕದಿಂದ ವಿಶೇಷ ಪೂಜೆ..

ಬೆಳಗಾವಿ : ಇಂದು ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಯಾವುದೇ ವಿಘ್ನಗಳು ಬಾರದಂತೆ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಲಿ ಎಂದು ಕರವೇ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚನ್ನಮ್ಮ ವೃತ್ತದಲ್ಲಿರುವ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ,
ಸುರೇಶ ಗವನ್ನವರ,
ಮಹಾಂತೇಶ ರಣಗಟ್ಟಿಮಠ,
ಗಣೇಶ್ ರೋಖಡೆ, ಹೊಳೆಪ್ಪ ಸುಲದಾಳ,
ಅಡಿವೆಪ್ಪ ತಳ್ಳೋರಿ, ಸತೀಶ್ ಗುಡದವರ,
ಲೋಕೆಶ ರಾಠೋಡ್,
ಅರ್ಜುನ ಕಾಂಬಳೆ,
ಕಾರ್ತಿಕ ಪಾಟೀಲ,
ನಾಗರಾಜ ಲಕ್ಕಪ್ಪಗೊಳ,
ಸಂತೋಷ ಚಕ್ರಯಿ ಮತ್ತಿತರರು ಉಪಸ್ಥಿತರಿದ್ದರು..