ಮತದಾರರ ಪಟ್ಟಿಯಿಂದ ಯಾರು ವಂಚಿತರಾಗಬೇಡಿ..

ಮತದಾರರ ಪಟ್ಟಿಯಿಂದ ಯಾರು ವಂಚಿತರಾಗಬೇಡಿ..

ಮತದಾರ ಪಟ್ಟಿಯ ಮ್ಯಾಪಿಂಗ ಕಾರ್ಯ ಕಟ್ಟುನಿಟ್ಟಿನಿಂದ ಸಾಗಲಿ.

ಶಾಸಕ ಅಭಯ ಪಾಟೀಲ..

ಬೆಳಗಾವಿ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ವಿಲಾಸ್ ಜೋಶಿ ನೇತ್ರತ್ವದಲ್ಲಿ ಸಭೆಯನ್ನು ಆಯೋಜಿಸಲಾಯಿತು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮತದಾರ ಪಟ್ಟಿಯಲ್ಲಿ ಸಾಕಷ್ಟು ತೊಂದರೆಗಳಾಗಿದ್ದು, ಯಾರದೋ ಹೆಸರು ಬೇರೆ ಯಾವುದೇ ವಾರ್ಡ್ ನಲ್ಲಿ ಮ್ಯಾಪಿಂಗ್ ತೊರಿಸುತ್ತಿರುವುದರ ವಿರುದ್ದ ದಕ್ಷೀಣ ಶಾಕಸ ಅಭಯ್ ಪಾಟೀಲ ಆರೋಪಿಸಿ ಅಧಿಕಾರಿಗಳ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸೋಮವಾರ ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ಪಾಲಿಕೆಯ ಸಭೆಯಲ್ಲಿ, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, 1 ಲಕ್ಷ ಜನರು ಇನ್ನೂ ಮ್ಯಾಪಿಂಗ್ ಬಾಕಿ ಇದ್ದಾರೆ. ಕೂಡಲೇ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಶಾಸಕ ಅಭಯ್ ಪಾಟೀಲ್ ಮತದಾನದ ಪಟ್ಟಿಯಿಂದ ಯಾರು ವಂಚಿತರಾಗಬೇಡಿ, ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

ಮತದಾನದ ಗುರುತಿನ ಚೀಟಿ ಹಾಗೂ ಮ್ಯಾಪಿಂಗ್ ಮಾಡವ ಕುರಿತು ಪಾಲಿಕೆಯಿಂದ ಜಾಗೃತಿ ಮೂಡಿಸಿಲ್ಲ. ಇದರಿಂದ ನಗರದ ಜನತೆಗೆ ಸಮಸ್ಯೆಯಾಗುತ್ತಿದೆ. ಮತದಾನದ ಪಟ್ಟಿಯಿಂದ ಯಾರೂ ವಂಚಿತರಾಗಬಾರದು ಎಂದು ಮಹಾಪೌರ ಮಂಗೇಶ್ ಪವಾರ್ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.
ಪಾಲಿಕೆಯ ಅಧಿಕಾರಿಗಳಿಂದ ಸರಿಯಾಗಿ ಮ್ಯಾಪಿಂಗ್ ಆಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಜೊತೆಗೆ ಶಿಕ್ಷಕರಿಂದಲೂ ಮ್ಯಾಪಿಂಗ್ ಮಾಡಲು ಸೂಕ್ತ ತರಬೇತಿ ನೀಡಬೇಕು ಎಂದರು.
ಇದೇ ಪಾಲಿಕೆಯ ಸದಸ್ಯರೊಬ್ಬ ಮಾತನಾಡಿ, ಪಾಲಿಕೆಯಿಂದ ನಡೆಸಲಾಗುತ್ತಿರುವ ಮ್ಯಾಪಿಂಗ ಸರಿಯಾಗಿ ಆಗುತ್ತಿಲ್ಲ. ನಂಬರ್ ಹಾಗೂ ಹೆಸರು ಬೇರೆ ಬೇರೆ ಬರುತ್ತಿವೆ. ಅಧಿಕಾರಿಗಳು ನಿಮ್ಮ ಮ್ಯಾಪಿಂಗ ಆಗಿದೆ ಎಂದು ಹೇಳುತ್ತಿದ್ದಾರೆ ಆರೋಪಿಸಿದರು.
ಆರೋಪಕ್ಕೆ ಉತ್ತರಿಸಿದ ಪಾಲಿಕೆಯ ಕಂದಾಯ ಅಧಿಕಾರಿ ಸಿದ್ದು ಹುಲ್ಲೋಳ್ಳಿ, ಮ್ಯಾಪಿಂಗ್ ಆಗಿಲ್ಲ ಎಂದು ಮತದಾನ ಪಟ್ಟಿಯಿಂದ ವಂಚಿತರಾಗುವುದಿಲ್ಲ. ಮ್ಯಾಪಿಂಗ್ ಆಗದಿದ್ದರೆ ಆನ್ ಲೈನ್ ಮೂಲಕ ಮಾಡಬಹುದು ಅಥವಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೇ ಮ್ಯಾಪಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ಉತ್ತರಿಸಿದರು.

ಬಳಿಕ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮಾತನಾಡಿ, ಮತದಾರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ಪ್ರಗತಿ ಪರಿಶೀಲಿಸಿದಾಗ ಉಭಯ ಮತಕ್ಷೇತ್ರಗಳ ಪ್ರಕ್ರಿಯೆ ಅತ್ಯಂತ ಕಡಿಮೆಯಾಗಿದೆ. 16 ಮತಕ್ಷೇತ್ರದಲ್ಲಿ ಶೇಕಡಾ 90 ರಷ್ಟು ಪ್ರಕ್ರಿಯೆ ನಡೆದಿದ್ದು, ನಗರ ಪ್ರದೇಶದಲ್ಲಿ ಶೇಕಡಾ 30 ರಷ್ಟು ಕಡಿಮೆಯಾಗಿದೆ. ಸಾರ್ವಜನಿಕರು ಒಂದು ವೇಳೆ ಈ ಪ್ರಕ್ರಿಯೆಯಿಂದ ಹೊರಗುಳಿದಿದ್ದರೇ, ಸಂಬಂಧಿಸಿದ ನಗರಸೇವಕರನ್ನು ಸಂಪರ್ಕಿಸಬೇಕು. ಇನ್ನು 1 ಲಕ್ಷ ಜನರು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇನ್ನು 1 ಲಕ್ಷ ಜನರು ಪ್ರಕ್ರಿಯೆಯಿಂದ ಹೊರಗುಳಿದಿದ್ದೀರಾ. ಪ್ರತಿಯೊಬ್ಬರೂ ಸ್ವತಃ ತಮ್ಮ ಮತಕ್ಷೇತ್ರಗಳಿಗೆ ಹೋಗಿ ನೋಂದಣಿಯನ್ನು ಮಾಡಿಸಿಕೊಳ್ಳಬೇಕೆಂದು ಹೇಳಿದರು.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಸೇರಿದಂತೆ ನಗರ ಸೇವಕರು,ಅಧಿಕಾರಿಗಳು ಇದ್ದರು.