ಜಿಲ್ಲಾಧಿಕಾರಿ ವಿರುದ್ಧ ಬಂದ ದೂರನ್ನು ಪರಿಶೀಲಿಸಿ ವರದಿ ನೀಡಿ..

ಜಿಲ್ಲಾಧಿಕಾರಿ ವಿರುದ್ಧ ಬಂದ ದೂರನ್ನು ಪರಿಶೀಲಿಸಿ ವರದಿ ನೀಡಿ..

ಸರ್ಕಾರದ ಕಾರ್ಯದರ್ಶಿ ಅವರಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ..

ಬೆಳಗಾವಿ : ನಗರದಲ್ಲಿ ಕಳೆದ ವರ್ಷ ಜರುಗಿದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ ಬೆಳಗಾವಿ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಹಿಸಿದ್ದಾರೆ ಎಂಬ ದುರುಗಳು ಕಂಡುಬದಿವೆ.

ಕನ್ನಡ ಕ್ರಿಯಾ ಸಮಿತಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ದೂರುಗಳು ಕೇಳಿ ಬಂದಿದ್ದು ಈ ಬಗ್ಗೆ ನಿಯಮಾನುಸಾರ ಪರಿಶೀಲನೆ ಮಾಡಿ ಕೂಡಲೇ ಸರ್ಕಾರಕ್ಕೆ ವರದಿ ನೀಡುವಂತೆ ಕೋರಲು ನಿರ್ದೇಶಿಸಲ್ಪಾಟ್ಟಿದ್ದೇನೆ ಎಂದು ಪ್ರವಾಸೋಧ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *