ಬೆಳಗಾವಿ ಪುಣ್ಯದ ಭೂಮಿ,
ನಾನು ಚೆನ್ನಮ್ಮ, ರಾಯಣ್ಣ, ಅಂಬೇಡ್ಕರ ಅನುಯಾಯಿ..
ಎಂಇಎಸ್ ಬಗ್ಗೆ ಮಾತನಾಡಲೂ ಕೂಡಾ ನನಗೆ ಇಷ್ಟ ಇಲ್ಲಾ..
ಹರೀಶ ಆರ್, ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ಟೈಗರ್ಸ್..
ಬೆಳಗಾವಿ : ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆಯ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ರಕ್ಷಣಾ ಟೈಗರ್ಸ್ ಎಂದು ನೂತನ ನಾಮಕರಣ ಮಾಡಲು, ರಾಜ್ಯದಲ್ಲಿ ಪ್ರಥಮ ಸ್ಥಳ ಆಯ್ಕೆ ಮಾಡಿಕೊಂಡಿದ್ದು ಬೆಳಗಾವಿಯನ್ನು. ಏಕೆಂದರೆ ಬೆಳಗಾವಿ ಪುಣ್ಯದ ಭೂಮಿ, ಚೆನ್ನಮ್ಮ, ರಾಯಣ್ಣ ನೆಲಸಿದ ಮಣ್ಣಿದು, ನಾನು ಚನ್ನಮ್ಮ ರಾಯಣ್ಣ ಹಾಗೂ ಅಂಬೇಡ್ಕರ ಅವರ ಅನುಯಾಯಿ, ಈ ನೆಲದಲ್ಲಿ ನಮ್ಮ ಸಂಘಟನೆಗೆ ನೂತನ ನಾಮಕರಣ ಮಾಡುವುದು ಸಂತಸ ತಂದಿದೆ ಎಂದು ಹರೀಶ ಆರ್ ತಿಳಿಸಿದ್ದಾರೆ.

ರವಿವಾರ ನೆಹರು ನಗರದ ಕನ್ನಡ ಭವನದಲ್ಲಿ ಜರುಗಿದ “ಕರ್ನಾಟಕ ರಕ್ಷಣಾ ಟೈಗರ್ಸ್” ಸಂಘಟನೆಯ ನೂತನ ನಾಮಕರಣದ ಅದ್ದೂರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಹರೀಶ ಎಂ ಅವರು ಬೆಳಗಾವಿ ನೆಲದಲ್ಲಿ ಮಾಡಿದ ಕಾರ್ಯಕ್ರಮ ತುಂಬಾ ಸಂತಸ ತಂದಿದೆ, ನಮ್ಮ ಸಂಘಟನೆಯ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗನಟ್ಟಿ ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.
ಬಾಳಪ್ಪ ಗುಡಗನಟ್ಟಿ ಬಹಳ ವರ್ಷಗಳಿಂದ ನೀನು ಕನ್ನಡದ ಕೆಲಸ ಮಾಡ್ತಿದೀಯಾ, ಕನ್ನಡ ಕೆಲಸದಲ್ಲಿ ನೀನು ಯಾವಾಗಲೂ ಮುಂದೆ ಇರು, ಗಡಿಭಾಗದಲ್ಲಿ ನೆಲ ಜಲ ಭಾಷೆ ಸಂಸ್ಕೃತಿಗೆ ದಕ್ಕೆ ಆದಾಗ ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡಿ, ಅಬ್ಬಬ್ಬಾ ಅಂದರೆ ನಿಮ್ಮ ಮೇಲೆ ಕೇಸು ಬೀಳಬಹುದು, ಕನ್ನಡ ಹೋರಾಟಗಾರರ ಮೇಲೆ ಕೇಸ್ ಇದ್ದರೆ, ಅವು ಖಾಕಿ ಯೂನಿಫಾರ್ಮ ಮೇಲೆ ಸ್ಟಾರ್ಸ್ ಇದ್ದ ಹಾಗೆ. ಕನ್ನಡಪರ ಹೋರಾಟದಲ್ಲಿ ಹೆಚ್ಚು ಎಂದರೆ ನಿನ್ನ ಮತ್ತು ನಿಮ್ಮ ಹುಡುಗರ ಮೇಲೆ ಕೇಸ್ ಬೀಳಬಹುದು, ಎಂತಹ ಕೇಸ್ ಬಿದ್ದರೂ ನಾನು ನಿನ್ನ ಬಿಡಿಸಿಕೊಂಡು ಬರುವೆ, ನಾನು ನಿನ್ನ ಬೆನ್ನಿಗೆ ಇರುವೆ ಎಂದು ಬೆಂಬಲದ ಮಾತುಗಳನ್ನು ಆಡಿದರು..

ಬೆಳಗಾವಿಯಲ್ಲಿ ಭಾಷಾ ವಿಷಯವಾಗಿ ಕನ್ನಡಿಗರನ್ನು ಕೆಣಕುವ ಎಂಇಎಸ್ ಬಗ್ಗೆ ಎಲ್ಲಾ ಕನ್ನಡ ಸಂಘಟನೆಗಳು ಮಾತಾಡಿವೆ ಆದರೆ ನನಗೆ ಎಂಇಎಸ್ ಬಗ್ಗೆ ಮಾತಾಡಲು ಇಷ್ಟ ಇಲ್ಲಾ, ಆದರೆ ಒಂದು ಮಾತು ಹೇಳ್ತಿವಿ, ಮುಂದಿನ ದಿನಮಾನದಲ್ಲಿ ಕನ್ನಡದ ವಿಚಾರ ಬಂದಾಗ ಖಂಡಿತವಾಗಲೂ ಅವರಿಗೆ ಬುದ್ದಿ ಕಲಿಸುವ ಕಾರ್ಯ ಮಾಡುವೆ, ಅದಂತೂ ಸತ್ಯ. ಈ ನಾಡನ್ನು, ಗಡಿಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗುತ್ತದೆ, ನಮ್ಮ ಹೋರಾಟ ಪ್ರಾಮಾಣಿಕವಾಗಿ ಇರಬೇಕು ಎಂದರು..

ಇನ್ನು ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಾಳಪ್ಪ ಗುಡಗೇನಟ್ಟಿ ಅವರು ಮಾತನಾಡಿ, ಇಂದು ನಮ್ಮ ರಾಜ್ಯಾಧ್ಯಕ್ಷರು ನಮ್ಮ ಜಿಲ್ಲೆಗೆ ಬಂದು, ಕನ್ನಡ ಸೇವೆ ಮಾಡಲು ನಮಗೆ ಸ್ಫೂರ್ತಿ ನೀಡಿದ್ದಾರೆ, ಒಂಬತ್ತು ವರ್ಷಗಳಿಂದ ನಾವು ಕಾಯುತ್ತಿದ್ದೆವು, ಇಂದು ಅವರ ಆಗಮನ ನಮಗೆ ಸಂತೋಷ ನೀಡಿದೆ. ನಮ್ಮ ಹಿಂದಿನ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಯಾವ ರೀತಿಯಲ್ಲಿ ಹೋಬಳಿ, ತಾಲೂಕು, ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಆಗಿತ್ತೋ ಅದೇ ರೀತಿ ನೂತನ “ಕರ್ನಾಟಕ ರಕ್ಷಣಾ ಟೈಗರ್ಸ್” ಸಂಘಟನೆ ಆಗಬೇಕು, ಅದಕ್ಕೆಲ್ಲ ನಾವೆಲ್ಲ ಶ್ರಮಿಸಬೇಕು ಎಂದರು..

ಇನ್ನು ಈ ಅದ್ದೂರಿ ಕಾರ್ಯಕ್ರಮದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು, ಸದಸ್ಯರು, ವಿವಿಧ ರೈತ, ದಲಿತಪರ ಸಂಘಟನೆ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಿ ಕೆ..