ಮೂರು ದಿನಗಳಿಂದ ತೆರಿಗೆ ನಿರ್ಧರಣೆಯ ಕಾರ್ಯದಲ್ಲೇ ಇದ್ದೇವೆ..

ಮೂರು ದಿನಗಳಿಂದ ತೆರಿಗೆ ನಿರ್ಧರಣೆಯ ಕಾರ್ಯದಲ್ಲೇ ಇದ್ದೇವೆ..

ಆಸ್ತಿ ಮೌಲ್ಯ, ತಾಂತ್ರಿಕ ಅಂಕಿಅಂಶಗಳ ಜೋಡಣೆಗೆ ಸಮಯಾವಕಾಶದ ಅಗತ್ಯವಿದೆ.

ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿ ಆದರೆ ಕೆಲಸ ಮತ್ತಷ್ಟು ವಿಳಂಬ ಆಗಬಹುದು..

ಬೆಳಗಾವಿ : ಬುಧವಾರ ಅಶೋಕ ನಗರದ ಪಾಲಿಕೆಯ ಕಂದಾಯ ಉಪ ವಿಭಾಗದಲ್ಲಿ ಸಾರ್ವಜನಿಕರು ಈ ಆಸ್ತಿ ನೀಡಬೇಕೆಂದು ಪ್ರತಿಭಟನೆ ಮಾಡಿರುವ ಬಗ್ಗೆ ವಿವರಣೆ ನೀಡಿದ ಅಲ್ಲಿನ ಕಂದಾಯ ಸಿಬ್ಬಂದಿಗಳು, ಈಗಾಗಲೇ ಮೂರು ದಿನಗಳಿಂದ ನಾವು ಈ ಆಸ್ತಿ ನೀಡುವದಕ್ಕಾಗಿ ತೆರಿಗೆ ನಿರ್ಧರಣೆ ಕಾರ್ಯದಲ್ಲಿ ನಿರತರಾಗಿದ್ದೇವೆ, ಅದು ಹೊಸ ಪ್ರದೇಶ ಆಗಿರುವದರಿಂದ ತೆರಿಗೆ ನಿಗದಿ ಮಾಡಲು, ತಾಂತ್ರಿಕ ಅಂಕಿ ಅಂಶ ಜೋಡಣೆಗೆ ಸಮಯ ಬೇಕಾಗುತ್ತದೆ, ಸಾರ್ವಜನಿಕರು ಸಿಬ್ಬಂದಿಗಳಿಗೆ ಸಮಯಾವಕಾಶ ನೀಡಬೇಕು ಎಂದಿದ್ದಾರೆ.

ನಗರದ ವಾರ್ಡ ಸಂಖ್ಯೆ 55ರ ಆಟೋ ನಗರದ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಸುಮಾರು 1500ಆಸ್ತಿಗಳಿಗೆ ಈ ಆಸ್ತಿ ನೀಡಬೇಕೆಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ ನಂತರ ದಿನಾಂಕ 20/03/2026ರಂದು ಪಾಲಿಕೆಯ ಆಯುಕ್ತರು ಸದರಿ ಆಸ್ತಿಗಳಿಗೆ ಇ ಖಾತಾ ನೀಡಬಹುದು ಎಂದು ಆದೇಶ ಮಾಡಿದ್ದರು. ಇದರ ಪರಿಣಾಮವಾಗಿ ಕಂದಾಯ ಸಿಬ್ಬಂದಿಗಳು ಈ ಆಸ್ತಿ ನೀಡುವ ಸಲುವಾಗಿ ಆ ಆಸ್ತಿಗಳಿಗೆ ತೆರಿಗೆ ನಿರ್ಧರಣೆ ಮಾಡುವ ಪ್ರಕ್ರಿಯೆಯನ್ನು ಮೂರು ದಿನಗಳಿಂದ ಪ್ರಾರಂಭಿಸಿ ಈಗಾಗಲೇ ಆಸ್ತಿ ಸಂಖ್ಯೆಗಳನ್ನು (PID) ನೀಡಿದ್ದೇವೆ ಎಂದಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧಿನದಲ್ಲಿರುವ ಇಂತಹ ಆಸ್ತಿಗಳಿಗೆ ನಾವು ಹೊಸದಾಗಿ ತೆರಿಗೆ ನಿರ್ಧರಣೆ ಮಾಡಿ, ಇ ಆಸ್ತಿಗಳನ್ನು ಮಾಡಿ ಕೊಡಬೇಕಾಗಿದೆ, ಹೊಸ ಆಸ್ತಿ ಮೌಲ್ಯ, ತೆರಿಗೆ ನಿರ್ಧರಣೆ, ಅಂಕಿ ಅಂಶಗಳ ಜೋಡಣೆ ಇವೆಲ್ಲಾ ಮಾಡಬೇಕಿದೆ. ಮುಖ್ಯವಾದ ಎಸ್ಆಯ್ಆರ್ ಹಾಗೂ ಜನಗಣತಿ ಕೆಲಸವನ್ನು ಬಿಟ್ಟು ನಾವು ಮೂರು ದಿನಗಳಿಂದ ಪಾಲಿಕೆಯ ಆಯುಕ್ತರ ಹಾಗೂ ಕಂದಾಯ ಉಪ ಆಯುಕ್ತರ ಸೂಚನೆಯಂತೆ, ವಲಯ ಆಯುಕ್ತರು, ಕಂದಾಯ ನೀರಿಕ್ಷಕ, ಕರ ವಸೂಲಿಗಾರ ಹಾಗೂ ಆಪರೇಟರ್ ಎಲ್ಲರೂ ಸೇರಿ ಕೈಗಾರಿಕಾ ಪ್ರದೇಶದ ಜನರ ಇ ಆಸ್ತಿ ಕಾರ್ಯವನ್ನು ಮಾಡುತ್ತಿದ್ದೇವೆ.

ಇದೇ ಮಾರ್ಚ್ 20ಕ್ಕೆ ಇ ಆಸ್ತಿ ನೀಡಬೇಕೆಂದು ಆಯುಕ್ತರಿಂದ ಆದೇಶ ಆಗಿದೆ, ಆಸ್ತಿ ದಾಖಲೆ ಪೂರೈಸಲು ಕನಿಷ್ಠ 30 ದಿವಸವಾದರೂ ಕಲಾವಕಾಶ ಇರುತ್ತದೆ, ಆದರೂ ನಾವು ಬೇಗ ತೆರಿಗೆ ನಿರ್ಧರಣೆ ಮಾಡಿ, ಆಸ್ತಿ ದಾಖಲೆ ನೀಡಲು ಅವಸರದಿಂದ ಕೆಲಸ ಮಾಡುತ್ತಿದ್ದೇವೆ, ಆದರೆ ಈಗಲೇ ಮಾಡಿ ಕೊಡಿ, ತಕ್ಷಣ ಬೇಕು ಎಂದು ಅವಸರ ಮಾಡಿ, ಕಚೇರಿಯಲ್ಲಿ ಬಂದು ಪ್ರತಿಭಟನೆ ಮಾಡಿದರೆ, ಸಿಬ್ಬಂದಿಗಳ ಕಾರ್ಯ ಮತ್ತಷ್ಟು ವಿಳಂಬ ಆಗಿ, ಸಾರ್ವಜನಿಕರ ಕೆಲಸ ಮತ್ತಷ್ಟು ತಡ ಆಗುವ ಪರಿಸ್ಥಿತಿ ಉಂಟಾಗುತ್ತದೆ, ನಮಗೆ ಸಮಯಾವಕಾಶ ನೀಡಿ, ಈಗಾಗಲೇ ಅರ್ಧ ಕೆಲಸ ಆಗಿದೆ, ಉಳಿದ ಕೆಲಸವೂ ಆದಷ್ಟು ಬೇಗ ಆಗುತ್ತದೆ ಎಂದಿದ್ದಾರೆ.

ಪಾಲಿಕೆಯ ಉತ್ತರ ಉಪ ವಿಭಾಗದ ಕಂದಾಯ ಸಿಬ್ಬಂದಿಗಳಾದ ನಾವು ಕೈಗಾರಿಕಾ ಪ್ರದೇಶದ ಜನರ ಕಾರ್ಯವನ್ನೇ ಮಾಡುತ್ತಿದ್ದೇವೆ, ಅದು ಹೆಚ್ಚಿನ ಅವಧಿಯಲ್ಲಿ ಮುಖ್ಯ ಕಚೇರಿಯಲ್ಲಿ ಕುಳಿತು ತಮ್ಮ ಕಾರ್ಯ ಮಾಡುತ್ತಿದ್ದೇವೆ, ಸಾರ್ವಜನಿಕರು ಕೂಡಾ ಸಿಬ್ಬಂದಿಗಳ ಕೆಲಸಕ್ಕೆ ಸಹಕಾರ ನೀಡಬೇಕು, ಕಚೇರಿಯಲ್ಲಿ ಬಂದು ಪ್ರತಿಭಟನೆ ಮಾಡಿದರೆ ಸಾರ್ವಜನಿಕರ ಕೆಲಸಕ್ಕೆನೆ ತೊಂದರೆ, ಇವತ್ತು ಸಂಜೆವರೆಗೂ ಬಹುತೇಕ ಕೆಲಸ ಆಗುತ್ತದೆ, ಜನರು ಸಹಕರಿಸಬೇಕು ಎಂದಿದ್ದಾರೆ.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *