ಹಿಂದವಾಡಿಯಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣ..
ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ ನಗರ ಸೇವಕ ನೀತಿನ ಜಾಧವ..
ಬೆಳಗಾವಿ : ಹಿಂದವಾಡಿ ಗಣೇಶ ಮಾರ್ಗದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಿತವಾದ ಸಮಸ್ಯೆ ನಿರ್ಮಾಣವಾಗಿದ್ದು, ಇದಕ್ಕಾಗಿ ಸ್ಥಳೀಯ ಸಾರ್ವಜನಿಕರು ಅಲ್ಲಿಯ ನಗರ ಸೇವಕರಾದ ನಿತೀನ್ ಜಾಧವ ಅವರಿಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಸಮಸ್ಯೆ ನಿವಾರಣೆಗೆ ತೊಡಗಿದ ನಗರಸೇವಕ ನಿತೀನ ಜಾಧವ ಅವರು ಸಂಬಂಧಿಸಿದ ಪಾಲಿಕೆ ಅಧಿಕಾರಿ ಹಾಗೂ ಎಲ್ ಆಂಡ್ ಟಿ ಸಿಬ್ಬಂದಿ ಕರೆಸಿ, ಕುಡಿಯುವ ನೀರಿಗೆ ಕಲುಷಿತ ಚರಂಡಿ ನೀರು ಸೇರದಂತೆ ವ್ಯವಸ್ಥಿತ ಕಾರ್ಯಾಚರಣೆ ಮಾಡಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ದೂರ ಆಗಿದ್ದರಿಂದ ಸ್ಥಳೀಯ ನಗರವಾಸಿಗಳು ಸಂತಸಗೊಂಡಿದ್ದರು.
ಈ ವೇಳೆ ಮಾಜಿ ನಗರ ಸೇವಕಿಯಾದ ಸಂಯೋಗಿತಾ ಹಲಗೇಕರ್, ಮಹಾನಗರ ಪಾಲಿಕೆ ಅಧಿಕಾರಿ, ಎಲ್&ಟಿ ಸಿಬ್ಬಂದಿ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು..