ಬೆಳಗಾವಿ ಸ್ಮಾರ್ಟ್ ಸಿಟಿ ಹಾಗೂ ಬುಡಾ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಬೇಟಿ..

ಬೆಳಗಾವಿ ಸ್ಮಾರ್ಟ್ ಸಿಟಿ ಹಾಗೂ ಬುಡಾ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಬೇಟಿ..

ಬೆಳಗಾವಿ : ಬೆಳಗಾವಿ ಸ್ಮಾರ್ಟ್ ಸಿಟಿ ಕಚೇರಿಯ ಮೇಲೆ ಲೋಕಾಯುಕ್ತ ನ್ಯಾಯಾಧೀಶ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ತಂಡ ಗುರುರುವಾರ ಬೇಟಿ ನೀಡಿ ಕಚೇರಿಯಲ್ಲಿದ್ದ ಮಹತ್ವದ ದಾಖಲೆಗಳ ಮಾಹಿತಿ ಕಲೆ ಹಾಕಿದರು.
ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಕೈಗೊಳ್ಳಲಾದ ಕಾಮಗಾರಿ ಹಾಗೂ ಹೊಸ ಯೋಜನೆಯ ಬಗ್ಗೆ ಮಾಹಿತಿ ಪಡೆದರು. ಸ್ಮಾರ್ಟ್ ಸಿಟಿಯಿಂದ ಪೂರ್ಣಗೊಂಡ ಕಾಮಗಾರಿಯ‌ ನಿರ್ವಹಣೆ ಮಾಡುತ್ತಿರುವುದು ಯಾರು, ಇಲ್ಲಿಯವರೆಗೆ ಎಷ್ಟು ಅನುದಾನ ಖರ್ಚಾಗಿದೆ. ಸ್ಮಾರ್ಟ್ ಸಿಟಿಯಿಂದ ನಿರ್ಮಾಣ‌ ಮಾಡಿರುಗ ಕಟ್ಟಡದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

ಕಳೆದ ಎರಡೂ‌ ದಿ‌ನಗಳಿಂದ ವಿವಿಧ ಇಲಾಖೆಯ ಕಚೇರಿಯಲ್ಲಿ ಬೇಟಿ ನೀಡಿ ಕಚೇರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಸ್ಮಾರ್ಟ್ ಕಚೇರಿ ಪರಿಶೀಲನೆಗೂ ಮುನ್ನ ಬುಡಾ ಹಾಗೂ ಮಹಾನಗರ ಪಾಲಿಕೆಗೆ ಕಚೇರಿಗೆ ಭೇಟಿ ನೀಡಿ ಎಷ್ಟು ಜನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಪೌರಕಾರರ್ಮಿಕರ ಸಂಖ್ಯೆ ಎಷ್ಟಿದೆ ಎಂದು ಪರಿಶೀಲನೆ ನಡೆಸಿ ಖಡತಗಳನ್ನು ಪರಿಶೀಲನೆ ಮಾಡಿದರು.
ಪಾಲಿಕೆಯ ಆಶ್ರಯ ಶಾಖೆ, ಕಂದಾಯ ಶಾಖೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಡಳಿತ‌ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.