ODI World Cup 2023: ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ​ 10 ತಂಡಗಳು ಫೈನಲ್

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿಸಿರುವ YST (ಯತೀಂದ್ರ- ಸಿದ್ದರಾಮಯ್ಯ ಟ್ಯಾಕ್ಸ್) ಬಾಂಬ್ ಬೆನ್ನಲ್ಲಿಯೇ ದಾವಣಗೆರೆಯಲ್ಲಿ MST (ಮಲ್ಲಿಕಾರ್ಜುನ್, ಶಿವಶಂಕರಪ್ಪ ಟ್ಯಾಕ್ಸ್) ಆರಂಭಗೊಂಡಿರುವ ಆರೋಪ ಕೇಳಿ ಬಂದಿದೆ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಈ MST ಕುರಿತು ಗಂಭೀರ ಆರೋಪಮಾಡಿದ್ದು, ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ನಿಜವಾದ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಶೇ.40 ಸರ್ಕಾರ, ಪೇಟಿಎಂ ಸರ್ಕಾರ ಎಂದೆಲ್ಲ ಅಪ ಪ್ರಚಾರ ಮಾಡಿ 5 ಗ್ಯಾರಂಟಿ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಅವೆಲ್ಲ ಇಂದು ಹುಸಿಯಾಗಿವೆ. ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಸಚಿವರೊಬ್ಬರ ಹಗರಣದ ದಾಖಲೆಯನ್ನು ಸಂಗ್ರಹಿಸಿ ಪೆನ್ ಡ್ರೈ ವ್ ನಲ್ಲಿ ಇಟ್ಟುಕೊಂಡಿದ್ದಾರೆ ಎಂದರು.