ಶಿಂದೊಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಸಂಭ್ರಮ..
ಕ್ರೀಡಾಕೂಟ ಉದ್ಘಾಟಿಸಿ, ಶುಭ ಕೋರಿದ ಗ್ರಾಪಂ ಅಧ್ಯಕ್ಷ ಸತೀಶ ಶಹಾಪುರಕರ.
ಬೆಳಗಾವಿ : ತಾಲೂಕಿನ ಶಿಂದೊಳ್ಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ್ ಕ್ರೀಡಾ ಕೂಟಗಳು ಜರುಗಿದ್ದು, ಕ್ರೀಡಾಕೂಟಕ್ಕೆ ನಿಲಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸತೀಶ್ ಶಹಾಪುರಕರ ಅವರು ಚಾಲನೆ ನೀಡಿದ್ದಾರೆ.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪುಸ್ತಕದ ಕಲಿಕೆ ಎಷ್ಟು ಮುಖ್ಯವೋ ಅಷ್ಟೇ ಆಟ ಕ್ರೀಡೆಗಳು ಮುಖ್ಯವಾಗಿವೆ, ಸದೃಢ ದೇಹದಲ್ಲಿ ಸಧೃಡ ಮನಸ್ಸು ಇರುತ್ತದೆ, ಆಟಗಳಿಂದ ಸದೃಢ ದೇಹ ಇರುತ್ತದೆ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇದ್ದಾಗ ತಾವು ತಮ್ಮ ವಿದ್ಯಾಭ್ಯಾಸವನ್ನು ಚೆನ್ನಾಗಿ ಮಾಡಬಹುದು ಎಂದರು.
ವ್ಯವಸ್ಥಿತ ಕ್ರೀಡಾಕೂಟ ಆಯೋಜನೆ ಮಾಡಿದ ಶಾಲಾ ಸಿಬ್ಬಂದಿಗಳ ಹಾಗೂ ಆಟಕ್ಕೆ ಸಿದ್ದವಾದ ಮಕ್ಕಳ ತಯಾರಿಯನ್ನು ಮುಕ್ತ ಕಂಠದಿಂದ ಬನ್ನಿಸಿದ ಅಧ್ಯಕ್ಷರು, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ನೀವು ಆಟದಲ್ಲಿ ಭಾಗಿಯಾಗುವದು ಮುಖ್ಯ, ಸೋತವರೇ ಮುಂದೆ ಒಂದು ದಿನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ ಎಂಬ ಪ್ರೇರಣಾ ನುಡಿಗಳನ್ನು ತಿಳಿಸಿ, ಎಲ್ಲರೂ ಸ್ಪರ್ಧಾ ಮನೋಭಾವನೆಯಿಂದ ಆಡಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಕ್ರೀಡಾಕೂಟಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಗ್ರಾಮದ ಎಸ್ಡಿಎಂಸಿ ಅಧ್ಯಕ್ಷರಾದ ಮಾಳಿಗರಾಯ ಶಹಾಪುರಕರ ಗ್ರಾಮ್ ಪಂಚಾಯತ ಸದಸ್ಯರಾದ ಶ್ರೀಮತಿ ಸವಿತಾ ಮುಚಂಡಿ, ಶ್ರೀ ಸಾಗರ ಮುಚಂಡಿ, ಶ್ರೀ ಸುಮಿತಾ ಪಾಟೀಲ, ಶ್ರೀ ಬಾಳು ಅನಗೋಳಕರ್, ಶ್ರೀಮತಿ ಪಕ್ಕಿರವ್ವ ಕರೆಗಾರ, ಶ್ರೀ ಭಾಗಪ್ಪ ನಾಗುನವರ, ಶ್ರೀಮತಿ ಸವಿತಾ ಪಾಟೀಲ, ಶ್ರೀಮತಿ ಲಕ್ಷ್ಮಿ ಅಜರೇಕರ ಉಪಸ್ಥಿತರಿದರು.
ವರದಿ ಪ್ರಕಾಶ್ ಬಿ ಕೆ..