ಮಾತೃ ಸಂಘದ ನೆರಳಿನಲ್ಲೇ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘ ಅಸ್ತಿತ್ವಕ್ಕೆ..

ಮಾತೃ ಸಂಘದ ನೆರಳಿನಲ್ಲೇ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘ ಅಸ್ತಿತ್ವಕ್ಕೆ..

ಮಹಿಳಾ ನೌಕರರಿಗೆ ಸ್ಪಂದನೆ ಹಾಗೂ ಸಬಲೀಕರಣಕ್ಕಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳು..

ಗೀತಾ ದಳವಾಯಿ, ಜಿಲ್ಲಾ ಅಧ್ಯಕ್ಷೆ, ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘಟನೆ..

ಬೆಳಗಾವಿ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧೀನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ ಜಿಲ್ಲಾ ಘಟಕ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಅಧ್ಯಕ್ಷೆ ಗೀತಾ ಎಸ್. ದಳವಾಯಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಜಿಲ್ಲಾ ಘಟಕ ಉದ್ಘಾಟನೆಗೊಂಡ ಬಳಿಕ ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡಿದ್ದೇವೆ. ಮಾತೃ ಸಂಘದ ನಿರ್ದೇಶನದಲ್ಲಿಯೇ ನಮ್ಮ ಸಂಘ ಮುಂದುವರೆಯಲಿದ್ದು, ಇದು ಪ್ರತ್ಯೇಕ ಸಂಘವಲ್ಲ.

ಮುಖ್ಯ ಸಂಘದಲ್ಲಿಯೇ ಒಂದು ಘಟಕವನ್ನಾಗಿ ಮಾಡಿಕೊಂಡು, ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ವಿವರಿಸಿದರು.
ಮಹಿಳಾ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ಕಾರ್ಯಾಗಾರಗಳು, ಆರೋಗ್ಯ ತಪಾಸಣೆ, ಯೋಗ ಶಿಬಿರ, ರಕ್ತದಾನ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಲಾಗುವುದು. ಆಯಾ ನೌಕರರಲ್ಲಿ ವೃತ್ತಿಯೊಂದಿಗೆ ಪ್ರವೃತ್ತಿಯಾಗಿರುವ ಸಾಹಿತ್ಯ, ಕಲೆ, ಕವನ, ಸಂಗೀತ, ಕ್ರೀಡೆ ನೃತ್ಯ, ನಾಟಕದಂತಹ ವಿವಿಧ ಕೌಶಲಗಳನ್ನು ಸಂಘದಿಂದಲೇ ಪ್ರೋತಾಹಿಸಿ ವೇದಿಕೆ ಒದಗಿಸಿಕೊಡಲಾಗುವುದು.

ನೌಕರರಿಗೆ ಸಮಸ್ಯೆಗಳು ಬಂದಾಗ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುವುದ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷೆ ವೀಣಾ ಹೊಸಮನಿ ಮಾತನಾಡಿ, ಮಹಿಳಾ ನೌಕರರಿಗೆ ತಮ್ಮದೇಯದ ಅನೇಕ ಸೂಕ್ಷ್ಮ ಸಮಸ್ಯೆಗಳಿರುತ್ತವೆ. ಅವುಗಳನ್ನು ಮುಖ್ಯ ಸಂಘದಲ್ಲಿ ಹೇಳಿಕೊಳ್ಳುವುದಕ್ಕೂ ಮುಜುಗರ ಪಡುವ ಸದಸ್ಯೆಯರಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ತಮ್ಮವರ ಮುಂದೆಯೇ ಹೇಳಿಕೊಳ್ಳುವಂತಹ ಆಪ್ತ ವಲಯ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಮಾತೃ ಸಂಘದ ಅಧ್ಯಕ್ಷರಾದ ಷಡಕ್ಷರಿಯವರ ನಿರ್ದೇಶನದ ಮೇರೆಗೆ ಮಹಿಳಾ ಸಂಘವನ್ನು ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಡಾ. ಕೃಪಾಲಿನಿ ಗಡದವರ, ಮಲ್ಲಮ್ಮ ರೆಡ್ಡಿ, ರುದ್ರಮ್ಮ ಚಲವಾದಿ, ಗಿರಿಜಾ ಪಡಸಲಗಿ, ಪವಿತ್ರ ಬೈಲೂರ, ಪಲ್ಲವಿ ಅಸೋದೆ, ರಾಜೇಶ್ವರಿ ಲದ್ದಿಮಠ, ಕಸ್ತೂರಿ ಕುಲ್ಲೋಳಿ, ಅಶ್ವಿನಿ ಶೀಗೇಹಳ್ಳಿ, ಅಶ್ವಿನಿ ಅವಟೆ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *