ಬಿ ಇ ಸಂಸ್ಥೆಯ ಎನ್ಎಸ್ ಪೈ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ..
ಮೂರು ದಿನಗಳ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗಿಯಾದ ಮಕ್ಕಳು..
ಬೆಳಗಾವಿ : ಬೆಳಗಾವಿ ಶಿಕ್ಷಣ ಸಂಸ್ಥೆಯ,ಎನ್ಎಸ್ ಪೈ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಕ್ರೀಡಾ ಕೂಟ ಗುರುವಾರ ದಿನಾಂಕ 29/01/2026 ತುಂಬು ಉತ್ಸಾಹದಲ್ಲಿ ಜರುಗಿದೆ.
ಮುಖ್ಯ ಅತಿಥಿಗಳಾಗಿ N C C ಅಧಿಕಾರಿಗಳಾದ ರವಿ ಘಾಟಗೆ ಅವರು ಆಗಮಿಸಿ ಮಕ್ಕಳಿಗೆ ಭವಿಷ್ಯದಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಹೇಳಿದರು.

ನಮ್ಮ ಶಾಲಾ ವಿದ್ಯಾರ್ಥಿಯ ಪಾಲಕರು, ಇಂಜನಿಯರ್ ಆಗಿರುವ ಸಂದೀಪ್ ಪಾಟೀಲ ಅವರು ಗೌರವ ಅಥಿತಿಗಳಾಗಿ ಆಗಮಿಸಿ ಶಾಲೆಯ ಕಾರ್ಯಚಟುವಟಿಕೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಕ್ರೀಡೆಯ ಮೆಡಲ್, ಕಪಗಳನ್ನು ದೇಣಿಗೆ ನೀಡಿ ಪ್ರೋತ್ಸಾಹಿಸಿದರು.
ಶಾಲಾ ಉಸ್ತುವಾರಿಗಳು ಆದ ದೀಪಕ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ನಾಯಿಕ ಅವರು ಸರ್ವರನ್ನು ಕ್ರೀಡಾಕೂಟಕ್ಕೆ ಸ್ವಾಗತಿಸಿ, ಪುಷ್ಪ ನೀಡಿ ಗೌರವಿಸಿದರು.
ದೈಹಿಕ ಶಿಕ್ಷಕಿ ಸವಿತಾ ನಾಯ್ಕರ್ ನಿರೂಪಿಸಿದರು. ರಜನಿ ಜೋಶಿ ವಂದನಾರ್ಪಣೆ ಸಲ್ಲಿಸಿದರು.

ಮಕ್ಕಳು ಪಥಸಂಚಲನದ ಶಿಸ್ತಿನ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿ, ಕ್ರೀಡಾ ಜ್ಯೋತಿ, ಪಟಾಕಿ ಸಿಡಿಸಿ ಉದ್ಘಾಟನೆಗೊಂಡ
ಮೂರು ದಿನಗಳ ಕ್ರೀಡಾ ಸ್ಪರ್ಧೆಗಳು ಅತಿ ಉತ್ಸಾಹದಿಂದ ಅರ್ಥಪೂರ್ಣವಾಗಿ ಜರುಗಿದವು.
ಮೈದಾನದಲ್ಲಿಯೇ ಮಕ್ಕಳಿಗೆ ಬಹುಮಾನ ಸರ್ಟಿಫಿಕೇಟ್, ಮೆಡಲ್ ವಿತರಿಸಿ ಪ್ರೋತ್ಸಾಹಿಸಲಾಯಿತು..
