ಬೆಳಗಾವಿ ಸ್ವಚ್ಛ ಇಡುವ ಆಸಕ್ತಿ ಇದ್ದರೆ ಸರಿಯಾಗಿ ಕೆಲಸ ಮಾಡಿ..

ಬೆಳಗಾವಿ ಸ್ವಚ್ಛ ಇಡುವ ಆಸಕ್ತಿ ಇದ್ದರೆ ಸರಿಯಾಗಿ ಕೆಲಸ ಮಾಡಿ..

ಏಳು ತಿಂಗಳಾದರೂ ಪೌರ ಕಾರ್ಮಿಕರ ಬೈಯೋಮೆಟ್ರಿಕ್ ಹಾಜರಿ ಇಲ್ಲದೇ ಹೇಗೆ ಸಂಬಳ ಮಾಡುತ್ತಿದ್ದೀರಿ?

ಹನಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕರು..

ಬೆಳಗಾವಿ : ನಗರವನ್ನು ಸ್ವಚ್ಛವಾಗಿ ಇಡುವ ಆಸಕ್ತಿ ಇದೆಯೋ ಇಲ್ಲವೋ, ಇದ್ದರೆ ಸರಿಯಾಗಿ ಕೆಲಸ ಮಾಡಿ, ನೀವು ಕೇಳಬೇಡಿ ಅಂದರೆ ಎರಡು ವರ್ಷ ನಿಮ್ಮನ್ನು ನಾವು ಏನೂ ಕೇಳುವದಿಲ್ಲ, ನಿಮ್ಮ ಇಷ್ಟದಂತೆ ನಗರವನ್ನು ಇಡಿ, ಪೌರ ಕಾರ್ಮಿಕರ ಹೊಸ ಟೆಂಡರ್ ಆಗಿ ಹಲವಾರು ತಿಂಗಳಾದರೂ ನೀವು ಅವರ ಹಾಜರಾತಿಯ ಬೈಯೋಮೆಟ್ರಿಕ್ ಮಾಡಿಲ್ಲ ಅಂದರೆ ಹೇಗೆ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಹನಮಂತ ಕೊಂಗಾಲಿ ಅವರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಸೋಮವಾರ ದಿನಾಂಕ 02/02/2026 ರಂದು ಪಾಲಿಕೆಯ ಸ್ಥಾಯಿ ಸಮಿತಿಯ ಸಭಾ ಭವನದಲ್ಲಿ ಜರುಗಿದ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಸಭೆಯಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಯಕರು, ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾವಾದ ಪೌರ ಕಾರ್ಮಿಕರಿಗೆ ವೇತನ ನೀಡುವ ಕುರಿತಾಗಿ ಮಾತನಾಡಿ, ಅದರಲ್ಲಿನ ಆಸ್ಪಷ್ಟತೆಗಾಗಿ ಅಸಮಾಧಾನ ತೋರಿದ್ದಾರೆ.

ಇದಕ್ಕೆ ಧ್ವನಿಗೂಡಿಸಿದ ಪಾಲಿಕೆಯ ಆಡಳಿತ ಉಪ ಆಯುಕ್ತರಾದ ಉದಯಕುಮಾರ ತಳವಾರ ಅವರು, ಹಳೆಯ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ಮಷಿನ್ ಇದ್ದು, ಅದರ ಮೂಲಕ ಹಾಜರಾತಿ ಪಡೆದು ವೇತನ ಮಾಡುತ್ತಿದ್ದರು, ಹೊಸ ಟೆಂಡರ್ ಆದ ಮೇಲೆ ಆ ಗುತ್ತಿಗೆದಾರನಿಗೆ ಕಾರ್ಯಾದೇಶ ನೀಡಿದ ಮೇಲೆ ವಿಷಯ ನಿರ್ವಾಹಕ, ವ್ಯವಸ್ಥಾಪಕ, ಅಭಯಂತರರು ಆಯುಕ್ತರಿಗೆ ವರದಿ ಮಾಡಬೇಕಿತ್ತು, ಮಷಿನ್ ಖರೀದಿ ಮಾಡಿ ಕಾರ್ಯ ಮಾಡುವ ಹಾಗೆ ಮಾಡಬೇಕಿತ್ತು.

ಏಳು ತಿಂಗಳಾದರೂ ಪ್ರಕ್ರಿಯೆ ಆಗಿಲ್ಲ, ಆಯುಕ್ತರಿಗಾಗಲಿ, ಆಡಳಿತ ಉಪ ಆಯುಕ್ತರಿಗಾಗಲಿ, ಸ್ಥಾಯಿ ಸಮಿತಿಗಾಗಲಿ ಮಾಹಿತಿ ನೀಡಬಹುದಿತ್ತಲ್ಲ, ಈಗ ಏಳು ತಿಂಗಳಿಂದ ನೀವು ಯಾವ ಆಧಾರದಲ್ಲಿ ವೇತನ ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಗುತ್ತಿಗೆದಾರರ ಹಾಗೂ ಆಧಾರ ಕಾರ್ಡ್ ಜೋಡಣೆಯ ಕಾರಣವನ್ನು ಹೇಳಿದ ಆರೋಗ್ಯ ವಿಭಾಗದ ಅಧಿಕಾರಿಯು ಇನ್ನೂ ಎಂಟು ದಿನಗಳಲ್ಲಿ ಹೊಸದಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಪೌರಕಾರ್ಮಿಕರ ಹಾಜರಾತಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂಬ ಮಾತು ನೀಡಿದರು.

ಇದಕ್ಕೂ ಮೊದಲು ನಗರ ಸೇವಕ ಬಾಬುಜಾಣ ಹಾಗೂ ಮರಾಠಿ ಭಾಷಿಕ ನಗರ ಸೇವಕರು ಸಭೆಯ ಗೊತ್ತುವಳಿಗಳ ಮಾಹಿತಿ ಪುಸ್ತಕ ಕನ್ನಡದಲ್ಲಿ ಇದ್ದಿದ್ದು ನಮಗೆ ಆರ್ಥ ಆಗುತ್ತಿಲ್ಲ, ಹಿಂದಿ ಹಾಗೂ ಮರಾಠಿಯಲ್ಲಿ ನೀಡಬೇಕೆಂದು ಹಠ ಹಿಡಿದಾಗ, ಸರ್ಕಾರದ ಆದೇಶದ ಪ್ರಕಾರ ಸಭೆಯ ನಡಾವಳಿಗಳ ಮಾಹಿತಿಯನ್ನು ಕನ್ನಡದಲ್ಲೇ ನೀಡಬೇಕೆಂಬ ಆದೇಶ ಇದ್ದು, ನಾವು ಕನ್ನಡದಲ್ಲೇ ನೀಡುತ್ತೇವೆ ಎಂದು ಪಾಲಿಕೆಯ ಪರಿಷತ್ ಕಾರ್ಯದರ್ಶಿ ಪ್ರಿಯಾಂಕಾ ಅವರು ಸ್ಪಷ್ಟವಾಗಿ ತಿಳಿ ಹೇಳಿದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *