ಬೆಳಗಾವಿಯಲ್ಲಿ ಮಂಗಲ್ಯ ಶಾಪಿಂಗ್ ಮಾಲ್ 27ನೇ ಶಾಖೆಯ ಭವ್ಯ ಉದ್ಘಾಟನೆ

ಬೆಳಗಾವಿಯಲ್ಲಿ ಮಂಗಲ್ಯ ಶಾಪಿಂಗ್ ಮಾಲ್ 27ನೇ ಶಾಖೆಯ ಭವ್ಯ ಉದ್ಘಾಟನೆ

ಬೆಳಗಾವಿ : 2012ರಲ್ಲಿ ತೆಲಂಗಾಣ ರಾಜ್ಯದ ವರಂಗಲ್‌ನಲ್ಲಿ ಆರಂಭವಾದ ಮಂಗಲ್ಯ ಶಾಪಿಂಗ್ ಮಾಲ್, ವಸ್ತ್ರ ಕ್ಷೇತ್ರದಲ್ಲಿ ಹೊಸ ದಿಕ್ಕು ತೋರಿಸುತ್ತಾ ಹಂತ ಹಂತವಾಗಿ ಬೆಳೆಯುತ್ತಾ, ಆಂಧ್ರಪ್ರದೇಶದ ನಂತರ ಇದೀಗ ಕರ್ನಾಟಕ ರಾಜ್ಯಕ್ಕೂ ತನ್ನ ವಿಸ್ತಾರವನ್ನು ವಿಸ್ತರಿಸಿದೆ. ರಾಯಚೂರು, ಗುಲ್ಬರ್ಗಾ, ಬಿಜಾಪುರ, ಹುಬ್ಬಳ್ಳಿ ನಂತರ ಇದೀಗ ಬೆಳಗಾವಿಯಲ್ಲಿ ಹೊಸ ಶಾಖೆ ಆರಂಭಗೊಂಡಿದೆ.

ಪ್ರಖ್ಯಾತ ಕನ್ನಡ ಚಿತ್ರನಟಿ ಶ್ರೀಲೀಲಾ ದೀಪಪ್ರಜ್ವಲನ ಮಾಡಿ ಮಂಗಲ್ಯ ಶಾಪಿಂಗ್ ಮಾಲ್ ಅನ್ನು ಉದ್ಘಾಟಿಸಿದರು. ನಂತರ ಮಾಲ್‌ನ ವಿವಿಧ ವಿಭಾಗಗಳನ್ನು ವೀಕ್ಷಿಸಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ನಟಿಯನ್ನು ನೋಡಲು ಬೆಳಿಗ್ಗೆಯಿಂದಲೇ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶ್ರೀಲೀಲಾ ರಿಬ್ಬನ್ ಕತ್ತರಿಸಿ ಮಾತನಾಡುತ್ತಾ,
“ಬೆಳಗಾವಿಯ ಜನರು ಮಂಗಲ್ಯ ಶಾಪಿಂಗ್ ಮಾಲ್‌ಗೆ ಉತ್ತಮ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಆಶೀರ್ವಾದದಿಂದ ಈ ಮಾಲ್ ಯಶಸ್ವಿಯಾಗಿ ಮುನ್ನಡೆಯಲಿದೆ” ಎಂದು ಹೇಳಿದರು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಭಯ್ ಪಾಟೀಲ್ ಜ್ಯೋತಿ ಪ್ರಜ್ವಲನ ಮಾಡಿ ಮಾತನಾಡುತ್ತಾ, ಬೆಳಗಾವಿಯಲ್ಲಿ ಮಂಗಲ್ಯ ಶಾಪಿಂಗ್ ಮಾಲ್ ಆರಂಭವಾಗಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುವುದರ ಜೊತೆಗೆ ವ್ಯಾಪಾರವೂ ಸ್ಥಳೀಯ ಮಟ್ಟದಲ್ಲೇ ಬೆಳೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಂಗಲ್ಯ ಶಾಪಿಂಗ್ ಮಾಲ್ ನಿರ್ದೇಶಕರು ಪುಲ್ಲೂರು ನರಸಿಂಹ ಮೂರ್ತಿ, ಕಾಸಂ ನಮಶ್ಶಿವಾಯ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರಿನಾಥ್, ಕಾಸಂ ಶಿವ ಪ್ರಸಾದ್, ಪುಲ್ಲೂರು ಅರುಣ್ ಕುಮಾರ್ ಮಾತನಾಡುತ್ತಾ:

“ಎಲ್ಲ ವರ್ಗದ ಜನರಿಗೆ, ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತವಾಗುವ ಗುಣಮಟ್ಟದ ವಸ್ತ್ರಗಳನ್ನು ಕಡಿಮೆ ಬೆಲೆಗೆ ಒದಗಿಸುವುದೇ ನಮ್ಮ ಯಶಸ್ಸಿನ ರಹಸ್ಯ.”

ನಮ್ಮ ಸ್ವಂತ ಕೈಮಗ್ಗಗಳಲ್ಲಿ ತಯಾರಿಸಿದ ವಸ್ತ್ರಗಳನ್ನು ಮಾರುಕಟ್ಟೆ ಟ್ರೆಂಡ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸುವುದರಿಂದ ಸ್ಪರ್ಧಾತ್ಮಕ ವಸ್ತ್ರ ವ್ಯಾಪಾರಿಗಳಿಗಿಂತ ನಾವು ಮುಂಚೂಣಿಯಲ್ಲಿದ್ದೇವೆ” ಎಂದು ತಿಳಿಸಿದರು.

ಮಂಗಲ್ಯ ಶಾಪಿಂಗ್ ಮಾಲ್‌ನಲ್ಲಿ ಮಹಿಳೆಯರು, ಪುರುಷರು, ಯುವತಿ-ಯುವಕರು ಹಾಗೂ ಮಕ್ಕಳಿಗೆ ಹೊಂದುವ ಅತ್ಯಾಧುನಿಕ ಫ್ಯಾಷನ್ ಸಂಗ್ರಹಗಳು, ವಿವಾಹ ಮತ್ತು ಶುಭಕಾರ್ಯಗಳಿಗೆ ವಿಶೇಷ ವಸ್ತ್ರಗಳು ಲಭ್ಯವಿವೆ. ಇನ್ನು ಮುಂದೆ ಬೆಳಗಾವಿಯ ಜನರು ವಿವಾಹಗಳಿಗಾಗಿ ದೂರದ ಪ್ರದೇಶಗಳಿಗೆ ಹೋಗುವ ಅವಶ್ಯಕತೆ ಇಲ್ಲದೆ, ತಮ್ಮದೇ ಊರಿನಲ್ಲಿ ಸಮಂಜಸ ದರದಲ್ಲಿ ಬೇಕಾದ ವಸ್ತ್ರಗಳನ್ನು ಖರೀದಿಸುವ ಸೌಲಭ್ಯ ದೊರಕಿದೆ.